ಉಡುಪಿ: ನೇಜಾರು ಕೊಲೆ ಪ್ರಕರಣ : ಆರೋಪಿ ಪ್ರವೀಣ್ ಚೌಗಲೆ ನ್ಯಾಯಾಲಯಕ್ಕೆ ಹಾಜರು – Vishwanews24
ಉಡುಪಿ: ನೇಜಾರು ಕೊಲೆ ಪ್ರಕರಣ : ಆರೋಪಿ ಚೌಗಲೆ ನ್ಯಾಯಾಲಯಕ್ಕೆ ಹಾಜರು
ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಬುಧವಾರ ಉಡುಪಿ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿ ಮೇಲೆ ಆಪಾದನೆ ವಾಚಿಸುವ ಪ್ರಕ್ರಿಯೆ ನಡೆಯಿತು.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶ ದಿನೇಶ್ ಹೆಗ್ಡೆ ಆಪಾದನೆ ವಾಚಿಸುವ ಪ್ರಕ್ರಿಯೆ ನಡೆಸಿದರು. ಬಳಿಕ ಆರೋಪಿಯನ್ನು ಬಿಗಿ ಭದ್ರತೆಯಲ್ಲಿ ಜೈಲಿಗೆ ಕರೆದೊಯ್ಯಲಾಯಿತು.
ಕರ್ನಾಟಕದಲ್ಲಿ ಎಲ್ಲಿಯೂ ಬಿಜೆಪಿ ಗಾಳಿಯಿಲ್ಲ , ಕಾಂಗ್ರೆಸ್ ವಾತಾವರಣವಿದೆ : ಡಿ.ಕೆ.ಶಿವಕುಮಾರ್ – Vishwanews24
ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ಹಾಜರಿದ್ದರು. ಭದ್ರತೆ ಉಸ್ತುವಾರಿಯನ್ನು ಉಡುಪಿ ಡಿವ್ಯೆಎಸ್ಪಿ ಪ್ರಭು ಡಿ.ಟಿ. ವಹಿಸಿದ್ದರು.
