ಉಡುಪಿ : ನ.8ರಂದು ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ ಪುರಸ್ಕಾರ ಪ್ರದಾನ – Vishwanews24

Featured, ಉಡುಪಿ

ಉಡುಪಿ : ನ.8ರಂದು ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ ಪುರಸ್ಕಾರ ಪ್ರದಾನ – Vishwanews24

ಉಡುಪಿ: ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಪದ್ಮವಿಭೂಷಣ ಪುರಸ್ಕಾರ ಪ್ರದಾನ ನವೆಂಬರ್ 8 ರಂದು ಹೊಸದಿಲ್ಲಿಯಲ್ಲಿ ನಡೆಯಲಿದೆ. ಶ್ರೀಗಳು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಈ ಮಹೋನ್ನತ ಪ್ರಶಸ್ತಿ ನೀಡಲಾಗುತ್ತಿದೆ.
ಶ್ರೀಗಳು ಕೃಷ್ಣೈಕ್ಯರಾದ ಬಳಿಕ 2020 ರಲ್ಲಿ ಪದ್ಮ ವಿಭೂಷಣ ಪುರಸ್ಕಾರ ಘೋಷಣೆಯಾಗಿತ್ತು.

ಕೋವಿಡ್ ಹಿನ್ನೆಲೆಯಲ್ಲಿ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆದಿರಲಿಲ್ಲ. ಇದೀಗ ಪ್ರಶಸ್ತಿ ಪ್ರದಾನ ಕುರಿತು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಆಹ್ವಾನ ತಲುಪಿದ್ದು, ನವೆಂಬರ್ 7 ರಂದು ವಿಶ್ವಪ್ರಸನ್ನ ತೀರ್ಥರು ದೆಹಲಿಗೆ ತೆರಳಿ ಗುರುಗಳ ಪರವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಹೊಟ್ಟೆ ಬಿಟ್ಕೊಂಡು ಕೆಲಸ ಮಾಡೋ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ​ಎಡಿಜಿಪಿ ಅಲೋಕ್​ ಕುಮಾರ್ – Vishwanews24