ಉಡುಪಿ : ಸಾಮಾಜಿಕ ಜಾಲತಾಣಗಳ ಪರಿಣಾಮಕಾರಿ ನಿರ್ವಹಣೆ ಕೇವಲ ವಿಜ್ಞಾನ ಮಾತ್ರವಲ್ಲಅದೊಂದುಕೌಶಲ್ಯ. ಮಾಧ್ಯಮದ ಜವಾಬ್ದಾರಿ ಇರುವ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣ ಕ್ಷೇತ್ರದ ಕನಿಷ್ಠ ಜ್ಞಾನ ಹೊಂದಿರುವುದು ಮತ್ತು ಪಕ್ಷದ ಮಾರ್ಗಸೂಚಿಗಳನ್ನು ಪಾಲಿಸಿ ಅದನ್ನು ಬಳಸುವುದು ಅಪೇಕ್ಷಣೀಯವಾಗಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣೀಕ್ ತಿಳಿಸಿದರು.
ಅವರು ದಿನಾಂಕ ೨೦-೦೨-೨೦೨೧ ಶನಿವಾರ ಉಡುಪಿ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆದ ಜಿಲ್ಲಾ ಸಾಮಾಜಿಕ ಜಾಲತಾಣ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ಸೇವೆ ಮತ್ತುರಾಜಕೀಯಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ಜನಸಮೂಹದಲ್ಲಿಜಾಗೃತಿ ಮೂಡಿಸುವಲ್ಲಿ ಸಾಮಾಜಿಕಜಾಲತಾಣ ಪ್ರಮುಖ ಪಾತ್ರ ವಹಿಸುತ್ತದೆ. ಈ ಕೆಲಸಕ್ಕಾಗಿ ಹಲವಾರು ದಶಕಗಳ ಕಾಲ ದಿನಪತ್ರಿಕೆ, ಮ್ಯಾಗಜೀನ್ ಮತ್ತು ಜರ್ನಲ್ ಗಳನ್ನು ನೆಚ್ಚಿಕೊಳ್ಳಲಾಗುತ್ತಿತ್ತು. ೨೦ ನೇ ಶತಮಾನದ ಮಧ್ಯ ಭಾಗದಲ್ಲಿಎಲೆಕ್ಟಾçನಿಕ್ ಸಂವಹನ ಪ್ರಾಮುಖ್ಯತೆ ಪಡೆಯಿತು. ೨೧ ನೇ ಶತಮಾನದಲ್ಲಿಡಿಜಿಟಲ್ ಮಾಧ್ಯಮದ ಬಳಕೆ ಹೆಚ್ಚಾಗಿ ಜನರನ್ನುತಲುಪಲು ಸಾಮಾಜಿಕ ಜಾಲತಾಣಗಳ ಬಳಕೆ ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದಕುಯಿಲಾಡಿ ಸುರೇಶ್ ನಾಯಕ್‌ಅವರುಕಾರ್ಯಾಗಾರ ಉದ್ಘಾಟಿಸಿ ಮಾತನಾಡಿಅತ್ಯಂತಕಡಿಮೆ ಸಮಯದಲ್ಲಿ ಹಲವರನ್ನು ಮತ್ತು ಹಲವು ವಿಷಯಗಳನ್ನು ತಲುಪಲು ಸಾಧ್ಯವಾಗುವುದರಿಂದ ಸಾಮಾಜಿಕಜಾಲತಾಣವನ್ನು ಸಮೂಹ ಮಾಧ್ಯಮಎಂದು, ಪ್ರಕಟಿಸಿದ ವಿಷಯಗಳು ಒಬ್ಬರಿಂದ ಹಲವರನ್ನು ತಲುಪುವಕಾರಣ ಇದನ್ನು ಸಾರ್ವಜನಿಕ ಸಂವಹನ ವೇದಿಕೆ ಎಂದು ಪರಿಗಣಿಸಬಹುದುಎಂದುಅವರು ತಿಳಿಸಿದರು.
ರಾಜ್ಯ ಸಾಮಾಜಿಕ ಜಾಲತಾಣ ಸಮಿತಿ ಸದಸ್ಯರಾದ ನಿತಿನ್‌ರಾಜ್ ನಾಯಕ್ ಮಾತನಾಡಿ ಜವಾಬ್ದಾರಿಯುತರಾಷ್ಟಿçÃಯ ಪಕ್ಷವಾದ ಬಿಜೆಪಿ ದೇಶದೆಲ್ಲಡೆ ಸಾಮಾಜಿಕ ಮತ್ತು ಕೋಮು ಸೌಹಾರ್ದವನ್ನು ಬಯಸುತ್ತದೆ. ಪಕ್ಷದಕಾರ್ಯಕರ್ತ ಸಾಮಾಜಿಕಜಾಲತಾಣದಲ್ಲಿ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದರೆರಾಷ್ಟಿçÃಯ ಮೌಲ್ಯಗಳನ್ನು ಉತ್ತೇಜಿಸಬೇಕು ಮತ್ತು ವಿಭಜನಕಾರಿಯಾದ ಪೋಸ್ಟ್ಗಳನ್ನು ಫಾರ್‌ವರ್ಡ್ ಮತ್ತುಪೋಸ್ಟ್ ಮಾಡದೇ ಇರುವುದು ಉತ್ತಮ ಎಂದು ತಿಳಿಸಿದರು.
ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಮಾತನಾಡಿ ಸಾಮಾಜಿಕಜಾಲತಾಣ ಸಾಂಪ್ರದಾಯಕಎನ್ನಬಹುದಾದ ಮುದ್ರಣ ಮತ್ತು ಟಿ. ವಿ. ಮಾಧ್ಯಮಗಳಿಗಿಂತ ಬಿನ್ನವಾಗಿದ್ದು, ನಾವು ಪ್ರಕಟಿಸಿದ ವಿಷಯಗಳ ಕುರಿತು ಪ್ರತಿಕ್ರಿಯೆ ನೀಡಲು ಹಾಗು ಸಂವಾದ ನಡೆಸಲುಅವಕಾಶವನ್ನು ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳುವ ಮೊದಲು ಮರುಓದುವಅಭ್ಯಾಸ ಮಾಡಿಕೊಳ್ಳಿ ಎಂದು ಕರೆ ನೀಡಿದರು.
ಜಿಲ್ಲಾ ಸಾಮಾಜಿಕಜಾಲತಾಣದ ಸಂಚಾಲಕರಾದ ಚ0ದ್ರಶೇಖರ ಪ್ರಭುಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಉಪಸ್ಥಿತರಿದ್ದರು. ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯ ಹರ್ಷಿತ್‌ರೈಕಾರ್ಯಕ್ರಮ ನಿರೂಪಿಸಿ, ಸಹಸಂಚಾಲಕರಾದ ಪ್ರಭಾಚಂದ್ರ ನಾಯಕ್ ಸ್ವಾಗತಿಸಿ, ವಂದಿಸಿದರು.
ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ : ಶೇಖ್ ಹಸೀನಾ ನವದೆಹಲಿ,:ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು…
ಕೊಟೇಶ್ವರ ರಸ್ತೆ ಅಪಘಾತ : ಅತಿವೇಗ ಅಜಾಗರೂಕತೆಯ ಚಾಲನೆ ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ ಉಡುಪಿ:…
ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ…
ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ ನವದೆಹಲಿ: ಚೆಕ್ ಬೌನ್ಸ್…
ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…
ಸುರತ್ಕಲ್ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…