ಉಡುಪಿ : ಪಾದೂರಿನಲ್ಲಿ ಎರಡನೇ ಹಂತದ ಐ.ಎಸ್.ಪಿ.ಆರ್.ಎಲ್ ಕ್ರೂಡ್ ಆಯಿಲ್ ಸ್ಟೋರೇಜ್ ನ 2ನೇ ಘಟಕದ ವಿಸ್ತರಣಾ ಯೋಜನೆಗೆ ಸಂಬ0ದಿಸಿದ0ತೆ 210 ಎಕ್ರೆ ಭೂ ಸ್ವಾಧೀನ ಅಗತ್ಯವಿದ್ದು, ಈ ಯೋಜನೆಯ ಸಂತ್ರಸ್ಥರಿಗೆ ಕೇಂದ್ರ ಸರ್ಕಾರದ ಪರಿಷ್ಕೃತ ಭೂ ಸ್ವಾಧೀನ ನಿಯಮಗಳನ್ವಯ ಗರಿಷ್ಠ ಪರಿಹಾರ ನೀಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಸೂಚಿಸಿದರು.
ಅವರು ಸೋಮವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ವಿಸ್ತರಣಾ ಯೋಜನೆಯಿಂದ ಸಂತ್ರಸ್ಥರಾಗುವ ಸಾರ್ವಜನಿಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಐ.ಎಸ್.ಪಿ.ಆರ್.ಎಲ್ ಯೋಜನೆಯು ದೇಶದ ಅತ್ಯಂತ ಪ್ರಮುಖ ಯೋಜನೆಯಾಗಿದ್ದು, ಇದರಿಂದ 410 ಮಿಲಿಯನ್ ಬ್ಯಾರೆಲ್ ತೈಲ ಸಂಗ್ರಹ ಸಾಧ್ಯವಾಗಲಿದ್ದು, ಯೋಜನೆಯ 2 ನೇ ಘಟಕದ ವಿಸ್ತರಣೆಗೆ 210 ಎಕ್ರೆ ಜಾಗದ ಅಗತ್ಯವಿದ್ದು, ಯೋಜನೆಯಿಂದ ಜಾಗ ಕಳೆದುಕೊಳ್ಳುವವರಿಗೆ ಗರಿಷ್ಠ ಪರಿಹಾರ ನೀಡಿ ಅವರಿಗೆ ಸೂಕ್ತ ಪುರ್ನವಸತಿ ಸೌಲಭ್ಯ ಕಲ್ಪಿಸುವಂತೆ ಕೆ.ಐ.ಎ.ಡಿ.ಬಿ. ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಸ್ತರಣಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿಗೆ ಹಾನಿ ಸಂಭವಿಸಿದ0ತೆ ಹಾಗೂ ಸ್ಥಳದಲ್ಲಿನ 800 ವರ್ಷಗಳ ಹಿಂದಿನ ಜೈನ ಬಸದಿ ಹಾಗೂ ಸಮೀಪದ ಮನೆಗಳಿಗೆ ಹಾನಿಯಾಗದಂತೆ ರೀ ಸರ್ವೇ ನಡೆಸಿ, ಪರಿಷ್ಕೃತ ನಕ್ಷೆ ಸಿದ್ದಪಡಿಸಿ ಎಂದು ಸೂಚಿಸಿದ ಸಂಸದರು, ಪಾದೂರು ವ್ಯಾಪ್ತಿಯಲ್ಲಿನ ಭೂ ಪ್ರದೇಶದ ಎಸ್.ಆರ್. ಬೆಲೆಯನ್ನು ಹೆಚ್ಚು ಮಾಡಿ, ಭೂಮಿ ಕಳೆದುಕೊಳ್ಳುವ ಸಂತ್ರಸ್ಥರಿಗೆ ಗರಿಷ್ಠ ದೊರೆಯುವಂತೆ ಮಾಡಿ ಹಾಗೂ ಸಂತ್ರಸ್ಥರಿಗೆ ಸೂಕ್ತ ಉದ್ಯೋಗ ನೀಡುವಂತ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು.
ಉಡುಪಿ:ಕೇರಳ ಮತ್ತು ಮುಂಬೈಯಿ0ದ ಬರುವವರಿಗೆ ಆರ್.ಟಿ.ಪಿ.ಸಿ.ಆರ್ ಕಡ್ಡಾಯ : ಸಂಸದೆ ಶೋಭಾ ಕರಂದ್ಲಾಜೆ-Vishwanews24
2 ನೇ ಘಟಕದ ವಿಸ್ತರಣೆ ಕುರಿತಂತೆ ಪ್ರಾಥಮಿಕ ಸರ್ವೇ ನಡೆಸಲಾಗಿದೆ, 227 ಮಂದಿ ಸಂತ್ರಸ್ಥರಿಗೆ ನೋಟೀಸ್ ನೀಡಬೇಕಿದ್ದು, ಈಗಾಗಲೇ 30 ಮಂದಿಗೆ ನೋಟಿಸ್ ನೀಡಲಾಗಿದ್ದು, 3 ಜನ ನಿರಾಕರಣೆ ಮಾಡಿದ್ದಾರೆ, ಉಳಿದವರ ವಿಳಾಸ ಪತ್ತೆ ಹಚ್ಚಿ ನೋಟೀಸ್ ನೀಡುವ ಕಾರ್ಯ ಪ್ರಗತಿಯಲ್ಲಿದೆ, ನೋಟೀಸ್ ಪಡೆದ 30 ದಿನಗಳವೆರೆಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದು ಕೆ.ಐ.ಯು.ಡಿ.ಬಿ. ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಡಾ.ನವೀನ್ ಭಟ್, ಎಎಸ್ಪಿ ಕುಮಾರ ಚಂದ್ರ, ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ,ಕಾಪು ತಾ.ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ , ಐ.ಎಸ್.ಪಿ.ಆರ್.ಎಲ್ ಅಧಿಕಾರಿ ಅಜಯ್, ರಾಜಶೇಖರ್ ಹಾಗೂ ಯೋಜನೆಯಿಂದ ಸಂತ್ರಸ್ಥರಾಗುವ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಕಳ: ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಾರ್ಕಳ: ನಾಪತ್ತೆಯಾಗಿದ್ದ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಕಾರ್ಕಳ: ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ…
ಕಿರುಕುಳ ಆರೋಪ : ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಬಳ್ಳಾರಿ: ಗಂಡನ ಕಿರುಕುಳ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು…
ಮಂಗಳೂರಿನಿಂದ ಅಗತ್ತಿ ದ್ವೀಪಕ್ಕೆ ವಿಮಾನಯಾನ ಸೇವೆ ;ನೂತನ 'ಚಳಿಗಾಲದ ವೇಳಾಪಟ್ಟಿ ಪ್ರಕಟ ಮಂಗಳೂರು : ಕರಾವಳಿಯ ಪ್ರಯಾಣಿಕರಿಗೆ ದೇಶೀಯ ಹಾಗೂ…
ಕಾಂಗ್ರೆಸ್ನಿಂದ ಆಹ್ವಾನ ಬಂದಿರುವುದು ನಿಜ .. ಪಕ್ಷ ಬದಲಾವಣೆಯಂತಹ ನಿರ್ಧಾರವನ್ನು ಏಕಾಏಕಿ ತೆಗೆದುಕೊಳ್ಳಲು ಸಾಧ್ಯವಿಲ್ಲ .. 2028ರ ವಿಧಾನಸಭಾ ಚುನಾವಣೆಯಲ್ಲಿ…
ಉಡುಪಿ: ಕಾಮಗಾರಿ ಹಿನ್ನೆಲೆ ಸಂಚಾರಕ್ಕೆ ಬದಲಿ ಮಾರ್ಗ ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ತೆಂಕಪೇಟೆ ವಾರ್ಡಿನ ಬಡಗುಪೇಟೆ ರಸ್ತೆಯಲ್ಲಿ ಒಳಚರಂಡಿ…