ಉಡುಪಿ: ಪಿನಾಯಿಲ್ ಮಾರಾಟದ ನೆಪದಲ್ಲಿ ಚಿನ್ನಾಭರಣ ದೋಚುವ ಮಹಿಳಾ ಗುಂಪು ; ಸುದ್ದಿಯ ಕುರಿತು ಮಣಿಪಾಲ ಪೊಲೀಸರ ಸ್ಪಷ್ಟನೆ -Vishwanews24
ಉಡುಪಿ: ಪಿನಾಯಿಲ್ ಮಾರಾಟದ ನೆಪದಲ್ಲಿ ಚಿನ್ನಾಭರಣ ದೋಚುವ ಮಹಿಳಾ ಗುಂಪು ; ಇದೊಂದು ಸುಳ್ಳು ಪ್ರಕಟಣೆ : ಸುದ್ದಿಯ ಕುರಿತು ಮಣಿಪಾಲ ಪೊಲೀಸರ ಸ್ಪಷ್ಟನೆ -Vishwanews24
ಉಡುಪಿ,: ಪಿನಾಯಿಲ್ ಮಾರುವ ನೆಪದಲ್ಲಿ ಚಿನ್ನಾಭರಣ ಕಳವು ಮಾಡುವ ಹೆಣ್ಣು ಮಕ್ಕಳ ಗುಂಪೊಂದು ಉಡುಪಿಗೆ ಬಂದಿರುವುದಾಗಿ ಮಣಿಪಾಲ ಪೊಲೀಸರು ಪ್ರಕಟಣೆ ನೀಡಿದ್ದಾರೆಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ‘ಇದೊಂದು ಸುಳ್ಳು ಪ್ರಕಟಣೆಯಾಗಿದೆ’ ಎಂದು ಮಣಿಪಾಲ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಕಾರಣಕ್ಕೂ ಭಾರತೀಯ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ : ಪೀಯೂಷ್ ಗೋಯಲ್ -Vishwanews24
ಪಿನಾಯಿಲ್ ಮಾರುವ ನೆಪದಲ್ಲಿ ಮನೆ ಮನೆಗೆ ತೆರಳಿ ಪಿನಾಯಿಲ್ನಂತೆ ಇರುವ ಬಾಟಲಿಯ ವಾಸನೆ ತೋರಿಸಿ ಮೂರ್ಛೆ ಹೋಗುವಂತೆ ಮಾಡಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗುವ ಸುಮಾರು ಐದರಿಂದ ಆರು ಜನ ಹೆಣ್ಣು ಮಕ್ಕಳ ಗುಂಪೊಂದು ಉಡುಪಿಗೆ ಆಗಮಿಸಿದ್ದು, ಇಂತಹವರು ತಮ್ಮ ಮನೆಯ ಮುಂದೆ ಓಡಾಡಿಕೊಂಡಿದ್ದರೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಮಣಿಪಾಲ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ ಎಂಬುದಾಗಿ ಸಂದೇಶ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್, ನಾವು ಇಂತಹ ಪ್ರಕಟಣೆಯನ್ನು ಕೊಟ್ಟಿಲ್ಲ. ಇದೇ ರೀತಿಯ ಸಂದೇಶ ಆರು ತಿಂಗಳ ಹಿಂದೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆಗಲೂ ನಾವು ಕೊಟ್ಟಿಲ್ಲ, ಈಗಲೂ ನಾವು ಪ್ರಕಟಣೆ ಕೊಟ್ಟಿಲ್ಲ. ಇದೊಂದು ಸುಳ್ಳು ಪ್ರಕಟಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.
