ಉಡುಪಿ: ಪುತ್ತಿಗೆ ಮಠದ ಪರ್ಯಾಯೋತ್ಸವ ಉದ್ಘಾಟಿಸಿದ ಡಾ.ವಿರೇಂದ್ರ ಹೆಗ್ಗಡೆ – Vishwanews24

Featured, ಉಡುಪಿ

ಉಡುಪಿ: ಪುತ್ತಿಗೆ ಮಠದ ಪರ್ಯಾಯೋತ್ಸವ ಉದ್ಘಾಟಿಸಿದ ಡಾ.ವಿರೇಂದ್ರ ಹೆಗ್ಗಡೆ

ಉಡುಪಿ: ಪುತ್ತಿಗೆ ಮಠದ ಪರ್ಯಾಯೋತ್ಸವದ ಪೂರ್ವಭಾವಿಯಾಗಿ ರಚನೆಯಾಗಿರುವ ಪರ್ಯಾಯ ಸ್ವಾಗತ ಸಮಿತಿ ಮತ್ತು ಕಾರ್ಯಾಲಯವನ್ನು ಧರ್ಮಸ್ಥಳದ ಧರ್ಮಾದಿಕಾರಿ ಡಾಕ್ಟರ್ ಡಿ ವಿರೇಂದ್ರ ಹೆಗ್ಗಡೆಯವರು ಸೆ.18ರಂದು ಉದ್ಘಾಟಿಸಿದರು.

2024ರಲ್ಲಿ ನಡೆಯುವ ವೈಭವೋಪೇತ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಮತ್ತು ಕಾರ್ಯಾಲಯ ನಿರ್ಮಾಣ ಗೊಂಡಿದೆ.

ಪರ್ಯಾಯ ಸ್ವಾಗತ ಸಮಿತಿ ಮತ್ತು ಕಾರ್ಯಾಲಯವನ್ನು ಧರ್ಮಸ್ಥಳದ ಧರ್ಮಾದಿಕಾರಿ ಡಾಕ್ಟರ್ ಡಿ ವಿರೇಂದ್ರ ಹೆಗ್ಗಡೆ ಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾಕ್ಟರ್ ವಿರೇಂದ್ರ ಹೆಗ್ಗಡೆಯವರು ಪುತ್ತಿಗೆ ಪರ್ಯಾಯ 2024ರ ರ ಅದಿಕೃತ ಲಾಂಛನ ಮತ್ತು ಕ್ಯೂ ಆರ್ ಕೋಡ್ ಅನ್ನು ಬಿಡುಗಡೆಗೊಳಿಸಿದರು.

ಇದನ್ನೂ ಓದಿ:

ಕರ್ನಾಟಕ ಮಾದರಿ ತೆಲಂಗಾಣದಲ್ಲೂ ಗ್ಯಾರಂಟಿ ಬ್ರಹ್ಮಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್ – Vishwanews24

ಧರ್ಮಸ್ಥಳದ ಧರ್ಮಾಧಿಕಾರಿ ಡಾಕ್ಟರ್ ವಿರೇಂದ್ರ ಹೆಗ್ಗಡೆ ಯವರಿಗೆ ಗೌರವಾಧ್ಯಕ್ಷ ಸ್ಥಾನದ ಅಧಿಕೃತ ಪತ್ರವನ್ನು ಹಸ್ತಾಂತರಿಸಲಾಯಿತು.

ಗೌರವ ಕೋಶಾದಿಕಾರಿ ನಾಗೇಶ್ ಹೆಗಡೆ, ಕೋಶಾಧಿಕಾರಿ ರಂಜನ್ ಕಲ್ಕೂರ, ಮಹಾಪೋಷಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಯಶ್ಪಾಲ್ ಸುವರ್ಣ, ಆನೆಗುಡ್ಡೆ ಕ್ಷೇತ್ರದ ಮೊಕ್ತೇಸ್ತರ ಸೂರ್ಯನಾರಾಯಣ ಉಪಾಧ್ಯಾಯ, ಗೌರವ ಕಾರ್ಯದರ್ಶಿ ಹೇರಂಜೆ ಕೃಷ್ಣ ಭಟ್, ಕಟೀಲು ಕ್ಷೇತ್ರದ‌ ಧರ್ಮಧರ್ಶಿಗಳಾದ ಲಕ್ಷ್ಮೀನಾರಾಯಣ ಅಸ್ರಣ್ಣ , ಕೆ ರಮೇಶ್ ಭಟ್, ಪ್ರಸನ್ನ ಆಚಾರ್ ಇತರರು ಉಪಸ್ಥಿತರಿದ್ದರು.

Leave a Reply