Featured

ಉಡುಪಿ: ಪೊಲೀಸರ ಹೆಸರಿನಲ್ಲಿ ಮಹಿಳೆಗೆ ಹೆದರಿಸಿ ಲಕ್ಷಾಂತರ ರೂ ವಂಚನೆ: ಪ್ರಕರಣ ದಾಖಲು – vishwanews24

ಉಡುಪಿ: ಪೊಲೀಸರ ಹೆಸರಿನಲ್ಲಿ ಮಹಿಳೆಗೆ ಹೆದರಿಸಿ ಲಕ್ಷಾಂತರ ರೂ ವಂಚನೆ: ಪ್ರಕರಣ ದಾಖಲು

ಉಡುಪಿ: ಪೊಲೀಸ್‌ ತನಿಖಾಧಿಕಾರಿಯೆಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್‌ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಲಪಟಾಯಿಸಿದ ಘಟನೆ ನಡೆದಿದೆ.

ವಿದ್ಯಾ ಅವರಿಗೆ ಅಪರಿಚಿತ ವ್ಯಕಿಯೋರ್ವ ಕರೆ ಮಾಡಿ ಏರ್‌ಟೆಲ್‌ ಕಂಪೆನಿಯಿಂದ ಮಾತನಾಡುತ್ತಿರುವುದಾಗಿ ತಿಳಿಸಿದ್ದ. ನಿಮ್ಮ ಆಧಾರ್‌ ನಂಬರು ಬಳಸಿ ಮುಂಬಯಿಯಲ್ಲಿ ಯಾರೋ ಸಿಮ್‌ ಖರೀದಿ ಮಾಡಿ ಅದರಲ್ಲಿ ಸ್ಕ್ಯಾಮ್‌ ಮೆಸೇಜ್‌ ಮತ್ತು ಟ್ರೇಡಿಂಗ್‌ ಮೆಸೇಜ್‌ ಕಳುಹಿಸುತ್ತಿದ್ದು ನಿಮ್ಮ ಎಲ್ಲ ಮೊಬೈಲ್‌ ನಂಬರ್‌ ಬ್ಲಾಕ್‌ ಮಾಡಲಾಗುವುದು ಎಂದು ಹೇಳಿದ. ಬಳಿಕ ಕರೆಯನ್ನು ಸಹರಾ ಪೊಲೀಸ್‌ ಠಾಣೆಗೆ ವರ್ಗಾಯಿಸುವುದಾಗಿ ತಿಳಿಸಿದ.

ಬಳಿಕ ಅತ್ತ ಕಡೆಯಿಂದ ಮೋಹನ್‌ ಕುಮಾರ್‌ ಎಂಬಾತ ಮಾತನಾಡಿ, ತಾನು ಸಹರಾ ಪೊಲೀಸ್‌ ಠಾಣೆಯ ತನಿಖಾಧಿಕಾರಿ ಎಂದು ತಿಳಿಸಿ ನಿಮ್ಮ ಆಧಾರ್‌ ಕಾರ್ಡ್‌ನ ಮುಖಾಂತರ ಮುಂಬಯಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದು ಈ ಖಾತೆಯನ್ನು ವಿವೇಕ್‌ದಾಸ್‌ ಎಂಬವರು ಆಪರೇಟ್‌ ಮಾಡಿ ಸದರಿ ಖಾತೆಗೆ ಹ್ಯುಮೆನ್‌ ಟ್ರಾಫಿಕಿಂಗ್‌ ಮತ್ತು ಮನಿ ಲ್ಯಾಡ್ರಿಂಗ್‌ ಮುಖಾಂತರ ಹಣ ವರ್ಗಾವಣೆ ಮಾಡಿರುತ್ತಾರೆ. ಖಾತೆ ನಿಮ್ಮ ಹೆಸರಿನಲ್ಲಿ ಇರುವುದರಿಂದ ನಿಮ್ಮ ಎಲ್ಲ ಅಕೌಂಟ್‌ ಪರಿಶೀಲನೆ ಮಾಡಬೇಕಾಗಿದೆ ಎಂದು ನಂಬಿಸಿದ್ದಾನೆ.

ಬಂಧಿಸುವುದಾಗಿ ಬೆದರಿಕೆ
ತದನಂತರ ಮೋಹನ್‌ ಕುಮಾರ್‌ ಪೊಲೀಸ್‌ ಅಧಿಕಾರಿ ಎಂಬುದಾಗಿ ಹೇಳಿಕೊಂಡು ವಿದ್ಯಾ ಅವರಿಗೆ ಕರೆ ಮಾಡಿ ನೀವು ಕೂಡ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವಿರಿ, ಎಲ್ಲಿಗೂ ಹೋಗುವಂತಿಲ್ಲ, ಎಲ್ಲಿಗೆ ಹೋಗುವುದಿದ್ದರೂ ನಮಗೆ ತಿಳಿಸಬೇಕು ಎಂದು ಬೆದರಿಸಿ ನಿಮ್ಮ ಎಲ್ಲ ಅಕೌಂಟ್‌ ಸೀಜ್‌ ಆಗುತ್ತದೆ. ಆದ್ದರಿಂದ ನಿಮ್ಮ ಅಕೌಂಟ್‌ನಲ್ಲಿರುವ ಎಲ್ಲ ಹಣವನ್ನು ನಾನು ಹೇಳಿದ ಯುಪಿಐ ನಂಬರಿಗೆ ಹಾಗೂ ಬ್ಯಾಂಕ್‌ ಖಾತೆಗೆ ಕಳುಹಿಸಿ ಎಂದು ತಿಳಿಸಿದ್ದಾನೆ. ಇದನ್ನು ನಂಬಿದ ವಿದ್ಯಾ ಅ. 16ರಿಂದ ನ. 7ರ ವರೆಗೆ ಹಂತ ಹಂತವಾಗಿ 19,71,679 ರೂ.ಗಳನ್ನು ವರ್ಗಾಯಿಸಿ, ಹಣ ಕಳೆದುಕೊಂಡು ಮೋಸ ಹೋಗಿದ್ದಾರೆ. ಘಟನೆ ಸಂಬಂಧ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

5 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

5 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

5 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

5 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

5 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

5 days ago