ಉಡುಪಿ : ಪ್ರಧಾನಿ ಮೋದಿಗೆ  ಕೇವಲ ತಮ್ಮ ಇಮೇಜ್ ಹೆಚ್ಚಿಸುವತ್ತ ಮಾತ್ರ ಆಸಕ್ತಿ : ವಿನಯ್ ಕುಮಾರ್ ಸೊರಕೆ – Vishwanews24

ಉಡುಪಿ : ಪ್ರಧಾನಿ ಮೋದಿಗೆ  ಕೇವಲ ತಮ್ಮ ಇಮೇಜ್ ಹೆಚ್ಚಿಸುವತ್ತ ಮಾತ್ರ ಆಸಕ್ತಿ …

ಮೋದಿಗೆ ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ಯಾವ ಇಚ್ಛಾಶಕ್ತಿ  ಇಲ್ಲ : ವಿನಯ್ ಕುಮಾರ್ ಸೊರಕೆ ..

ಉಡುಪಿ : ಪ್ರಧಾನಿ ನರೇಂದ್ರ ಮೋದಿಗೆ ದೇಶದ ಜನ ಜೀವನದ ಮೇಲೆ ಕಾಳಜಿ ಇಲ್ಲದೆ ಕೇವಲ ತಮ್ಮ ಇಮೇಜ್ ಹೆಚ್ಚಿಸುವತ್ತ ಮಾತ್ರ ಆಸಕ್ತಿ ತೋರಿಸುತ್ತಿದ್ದು ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ಯಾವ ಇಚ್ಛಾಶಕ್ತಿ ಅವರಿಗಿಲ್ಲ ಎಂದು ಮಾಜಿ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಟೀಕಿಸಿದರು.

ಅವರು ಇಂದು ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ, ‘ನಾವು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಳ್ಳುವುದು ಆದರೆ ಪ್ರಮಾಣ ಪತ್ರದಲ್ಲಿ ಮೋದಿ ಪೋಟೋ, ಪೊರಕೆ ನಮ್ಮದು, ಸ್ವಚ್ಛ ಮಾಡಿ ಕಸ ಎತ್ತುವುದು ನಾವು, ಆದರೆ ಸ್ವಚ್ಛ ಭಾರತ ಮಿಷನ್ ಎನ್ನುತ್ತಾ ಮೋದಿ ಪೋಟೋ ಹಾಕಿ ಕ್ರೆಡಿಟ್ ತೆಗೆದು ಕೊಳ್ಳುತ್ತಾರೆ. ಇನ್ನು ಮಕ್ಕಳು ಕಲಿಯಲು ಪೋಷಕರೇ ಹಣ ಕೊಟ್ಟು ಶಿಕ್ಷಣ ಕಲಿಸಿದರೆ ‘ಬೇಟಿ ಪಡಾವೋ , ಬೇಟಿ ಬಚಾವೋ’ ಅಂತ ಫಲಕ ಹಾಕಿ ಅವರೇ ಪ್ರಚಾರ ಗಿಟ್ಟಿಸಿ ಕೊಳ್ಳುತ್ತಾರೆ. ಹೀಗೆ ಮೋದಿ ರಾಜಕಾರಣದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಹೊರತು ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡುವ ಯಾವ ಇಚ್ಛಾಶಕ್ತಿ ಅವರಿಗಿಲ್ಲ ಎಂದರು.

ಕೊವೀಡ್ ಸಂಕಷ್ಟ ಸಮಯದಲ್ಲಿ ಬೆಲೆ ಗಗನಕ್ಕೇರುತ್ತಿದೆ. ಜನ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕಾಂಗ್ರೆಸ್ ಸರಕಾರ ನಡೆಸುತ್ತಿರುವಾಗ ಬೆಲೆ ಏರಿಕೆ ಆದಾಗೆಲ್ಲ ಪ್ರತಿಭಟನೆ ನಡೆಸುತ್ತಿದ್ದರು. ಈಗ ತೈಲ ಬೆಲೆ ರೂ ೧೦೦ ತಲುಪಿದೆ. ಗ್ಯಾಸ್ ಸಿಲಿಂಡರ್ ರೂ ೮೫೦ ಆಗಿದೆ ವಿದ್ಯುತ್ ದರವೂ ಹೆಚ್ಚಾಗಿದೆ. ಈಗ ಯಾಕೆ ಲೋಕಸಭಾ ಸದಸ್ಯರುಗಳು ದ್ವನಿ ಎತ್ತುತ್ತಿಲ್ಲ? ಈಗಲೂ ಕೂಡ ಸರಕಾರ ವಿರುದ್ಧ ಧ್ವನಿ ಎತ್ತಬಹುದಲ್ಲ ಎಂದು ಸೊರಕೆ ಪ್ರಶ್ನಿಸಿದರು.

ರೂ ೨೦,೦೦೦ ಕೋಟಿ ಹಣ ಗಂಗಾ ನದಿ ಶುದ್ದೀಕರಣಕ್ಕೆ ಘೋಷಣೆ ಮಾಡಿದ್ದಾರೆ. ಆದರೆ ಈಗ ಲಸಿಕೆಯ ಕೊರತೆ ಇದೆ. ಇದರಿಂದ ಜನ ಪಶ್ಚಾತ್ತಾಪ ಪಡುತ್ತಿದ್ದಾರೆ. ಲಸಿಕೆ ಕೇಂದ್ರೀಕರಣವಾಗುತ್ತಿದೆ. ಡಿಸೆಂಬರ್ ಒಳಗೆ ಎಲ್ಲರೂ ವ್ಯಾಕ್ಸಿನೇಟೆಡ್ ಆಗುತ್ತಾರೆ ಎನ್ನುವ ಆಶ್ವಾಸನೆ ಕೊಟ್ಟಿದ್ದಾರೆ. ಆದರೆ ಉತ್ಪಾದನೆ ಎಲ್ಲಿದೆ? ಮೂರನೇ ಹಂತದ ಕೋವ್ಯಾಕ್ಸಿನ್ ಪ್ರಯೋಗವೇ ಆಗಿಲ್ಲ. ಮೂರನೇ ಅಲೆ ಮಕ್ಕಳಿಗೆ ಪರಿಣಾಮ ಬೀರುತ್ತಿದೆ. ಆದರೆ ಇದನ್ನು ತಡೆಗಟ್ಟಲು ಕೇಂದ್ರ ಏನು ಮುಂಜಾಗ್ರತಾ ಕ್ರಮ ತೆಗೆದು ಕೊಂಡಿದೆ ಎಂದು ಸೊರಕೆ ಬಿಜೆಪಿ ಸರಕಾರವನ್ನು ಪ್ರಶ್ನಿಸಿದರು.

 

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

2 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

4 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

4 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

4 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

5 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

5 hours ago