ಉಡುಪಿ : ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದರೆ ಸ್ವಾಗತ ಅವರಿಂದ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ : ರಘುಪತಿ ಭಟ್ – Vishwanews24
ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದರೆ ಸ್ವಾಗತ ಅವರಿಂದ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ : ರಘುಪತಿ ಭಟ್ – Vishwanews24
ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಬಂದರೆ ಸ್ವಾಗತ ಅವರಿಂದ ಪಕ್ಷ ಮತ್ತಷ್ಟು ಗಟ್ಟಿಯಾಗುತ್ತದೆ. ಈಗ ಗೇಟ್ ಓಪನ್ ಇದೆ ಹಾಗಾಗಿ ಬರಬಹುದು ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆಯಾಗುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಅಲ್ಲದೆ ಪಕ್ಷಕ್ಕೆ ತೆಗೆದುಕೊಳ್ಳುವುದಿದ್ದರೆ ನಮ್ಮಲ್ಲಿ ಕೇಳಿ ತಗೋಳ್ಳುವುದಿಲ್ಲ ಒಂದು ವೇಳೆ ಬಿಜೆಪಿ ಸೇರ್ಪಡೆ ಆದರೆ ಸ್ವಾಗತ ಮಾಡುತ್ತೇನೆ ಆಗ ಚುನಾವಣಾ ಸಂದರ್ಭದಲ್ಲಿ ವಿರೋಧ ಮಾಡಿದ್ದೇನೆ ಕಾರಣ ಆಗ ನಾನು ಟಿಕೇಟ್ ಆಕಾಂಕ್ಷಿಯಾಗಿದ್ದೆ, ಆದ್ದರಿಂದ ಸ್ವಾಭಾವಿಕವಾಗಿ ವಿರೋಧ ಮಾಡಿದ್ದೆ. ಈಗ ಅವರು ಬಂದ್ರೆ ಸ್ವಾಗತ ಕಾರಣ ಈಗ ನಮ್ಮ ಬುಡ ಗಟ್ಟಿ ಇದ್ದು ನಮಗೆ ಯಾವುದೇ ಸಮಸ್ಯೆ ಇಲ್ಲ. ಅವರು ಬಿಜೆಪಿಗೆ ಬಂದರೆ ಪಕ್ಷ ಗಟ್ಟಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
