Featured

ಉಡುಪಿ: ಬಡ ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಿ : ಯಶ್ಪಾಲ್ ಸುವರ್ಣ – Vishwanews24

ಉಡುಪಿ: ಬಡ ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡಿ : ಯಶ್ಪಾಲ್ ಸುವರ್ಣ

ಉಡುಪಿ: ಮೀನು ಮಾರಾಟ ಮಾಡಿ ಸ್ವಾವಲಂಬಿ ಬದುಕು ನಡೆಸಿ ಕುಟುಂಬವನ್ನು ಸಲಹುವ ಮಹಿಳಾ ಮೀನುಗಾರರ ಜೀವನ ಸರ್ವರಿಗೂ ಮಾದರಿಯಾಗಿದ್ದು, ಮಹಿಳಾ ಮೀನುಗಾರರ ಜೊತೆ ಜೊತೆಗೆ ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವ ಮಹಿಳೆಯರ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಧ್ವನಿಯಾಗಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಹೇಳಿದರು. ಉಡುಪಿ ನಗರದ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮತ ಯಾಚನೆ ಮಾಡಿ ಮಾತನಾಡಿದರು.

2009 ರಲ್ಲಿ ಜಿಲ್ಲೆಯ ಮೀನು ಮಾರಾಟ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಮಹಿಳಾ ಹಸಿ ಮೀನು ಮಾರಾಟ ಸಂಘವನ್ನು ಸ್ಥಾಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರವ ಸಂತೃಪ್ತಿ ಇದ್ದು, ಫೆಡರೇಶನ್ ಅಧ್ಯಕ್ಷನಾಗಿ ಮಹಿಳಾ ಮೀನುಗಾರರಿಗೆ ರಾಜ್ಯ ಸರ್ಕಾರದ ಶೂನ್ಯ ಬಡ್ಡಿದರದ ಸಾಲ ಯೋಜನೆ, ಸಾಲ ಮನ್ನಾ, ಜಿಲ್ಲೆಯ ವಿವಿಧ ಭಾಗಗಳಲ್ಲಿ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣ ಮೊದಲಾದ ಹಲವು ಯೋಜನೆಗಳನ್ನು ಮಹಿಳಾ ಮೀನು ಮಾರಾಟಗಾರರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು ಮುಂದಿನ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಮೂಲಕ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀ ಆನಂದ, ಜೊತೆ ಕಾರ್ಯದರ್ಶಿ ಜಯಂತಿ ಗುರುದಾಸ್, ಪ್ರಮುಖರಾದ ಸುಮಿತ್ರಾ, ಭಾರತಿ ಸಾಲ್ಯಾನ್, ರತ್ನಾ ಕಾಂಚನ್ ಹಾಗೂ ಮಹಿಳಾ ಮೀನು ಮಾರಾಟಗಾರರು ಉಪಸ್ಥಿತರಿದ್ದರು.

ಯಶ್ ಪಾಲ್ ಸುವರ್ಣ ರವರು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಂತೆ ಹೂ ಮಾಲೆ ಹಾಕಿ ಜೈ ಕಾರ ಹಾಕಿ ಸ್ವಾಗತಿಸಿದರು.

ಮಹಿಳಾ ಮೀನು ಮಾರಾಟಗಾರರ ಸಂಘಟನೆಗೆ ಬೆನ್ನೆಲುಬಾಗಿ ನಿಂತಿರುವ ಯಶ್ ಪಾಲ್ ಸುವರ್ಣ ರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವುದಾಗಿ ಒಕ್ಕೊರಲಿನಿಂದ ಘೋಷಿಸಿದರು.

Vishwa News 24

Recent Posts

ಗೃಹಲಕ್ಷ್ಮಿ ಯೋಜನೆ : 33ನೇ ಕಂತಿನ ಹಣ ಬಿಡುಗಡೆ – vishwanews24

ಗೃಹಲಕ್ಷ್ಮಿ ಯೋಜನೆ : 33ನೇ ಕಂತು ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ನಡೆಯುತ್ತಿರುವ ನಡುವೆಯೇ ಮಹಿಳೆಯರಿಗೆ ಸರ್ಕಾರ ಗುಡ್‌ನ್ಯೂಸ್…

10 minutes ago

ವಾಣಿಜ್ಯ ಸಿಲಿಂಡರ್‌ ಬೆಲೆ 9.50 ರೂ. ಏರಿಕೆ – vishwanews24

ಸೆಪ್ಟೆಂಬರ್‌ ತಿಂಗಳ ಆರಂಭದಲ್ಲೇ ಗ್ರಾಹಕರಿಗೆ LPG ಶಾಕ್‌ : ವಾಣಿಜ್ಯ ಸಿಲಿಂಡರ್‌ ಬೆಲೆ 9.50 ರೂ. ಏರಿಕೆ ನವದೆಹಲಿ: ಸೆಪ್ಟೆಂಬರ್‌…

18 minutes ago

ಅಂಗನವಾಡಿ ಕಾರ್ಯಕರ್ತೆ : ಸಹಾಯಕಿಯರ ಹುದ್ದೆ ; ಅರ್ಜಿ ಆಹ್ವಾನ – vishwanews24

ಅಂಗನವಾಡಿ ಕಾರ್ಯಕರ್ತೆ : ಸಹಾಯಕಿಯರ ಹುದ್ದೆ; ಅರ್ಜಿ ಆಹ್ವಾನ ಉಡುಪಿ : ಉಡುಪಿ ಜಿಲ್ಲೆಯ 4 ಶಿಶು ಅಭಿವೃದ್ದಿ ಯೋಜನಾ…

29 minutes ago

ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಪಾದಯಾತ್ರೆ – vishwanews24

ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಪಾದಯಾತ್ರೆ ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಎಸ್‌ಟಿ ಮೀಸಲಾತಿ ಸೇರಿದಂತೆ ಹಲವು…

32 minutes ago

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ  – vishwanews24

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ  ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ  ಜಿಲ್ಲೆಯ ಚಿಂಚಿನಾಡ…

3 days ago

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ – vishwanews24

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…

3 days ago