Featured

ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಪಾದಯಾತ್ರೆ – vishwanews24

ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಪಾದಯಾತ್ರೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಎಸ್‌ಟಿ ಮೀಸಲಾತಿ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ 10 ದಿನಗಳ ಕಾಲ ಬಿಜೆಪಿ ನಡೆಸುವ ಪಾದಯಾತ್ರೆಗೆ ಇಂದು ರಾಯಚೂರಿನ ಲಿಂಗಸೂಗೂರಿನಲ್ಲಿ ಚಾಲನೆ ದೊರೆಯಲಿದ್ದು ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸುವುದಕ್ಕೆ ಕೇಸರಿಪಡೆ ಸಜ್ಜಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಈ ಪಾದಯಾತ್ರೆಯ ಮುಂಚೂಣಿಯಲ್ಲಿ ನಿಂತಿದ್ದು 10 ದಿನಗಳ ಕಾಲ ಒಂಬತ್ತು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಗುಡುಗುವುದಕ್ಕೆ ತಯಾರಾಗಿದ್ದಾರೆ. ಪಾದಯಾತ್ರೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬದಲಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.
ಒಟ್ಟು 185 ಕಿ.ಮೀ. ಪಾದಯಾತ್ರೆ ಲಿಂಗಸೂಗೂರಿನಿಂದ ಪ್ರಾರಂಭವಾಗಿ ಬಳ್ಳಾರಿಯಲ್ಲಿ ಮುಕ್ತಾಯಗೊಳ್ಳಲಿದೆ. ಸಮಾರೋಪದ ದಿನ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ. ಬಿಡದಿ ಪಾದಯಾತ್ರೆಯ ರೀತಿಯಲ್ಲಿ ಜೆಡಿಎಸ್‌ ಈ ಪಾದಯಾತ್ರೆಗೆ ಸಾಂಕೇತಿಕ ಬೆಂಬಲ ನೀಡಲಿದೆ.

Vishwa News 24

Recent Posts

ಗೃಹಲಕ್ಷ್ಮಿ ಯೋಜನೆ : 33ನೇ ಕಂತಿನ ಹಣ ಬಿಡುಗಡೆ – vishwanews24

ಗೃಹಲಕ್ಷ್ಮಿ ಯೋಜನೆ : 33ನೇ ಕಂತು ಬಿಡುಗಡೆ ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆ ನಡೆಯುತ್ತಿರುವ ನಡುವೆಯೇ ಮಹಿಳೆಯರಿಗೆ ಸರ್ಕಾರ ಗುಡ್‌ನ್ಯೂಸ್…

1 minute ago

ವಾಣಿಜ್ಯ ಸಿಲಿಂಡರ್‌ ಬೆಲೆ 9.50 ರೂ. ಏರಿಕೆ – vishwanews24

ಸೆಪ್ಟೆಂಬರ್‌ ತಿಂಗಳ ಆರಂಭದಲ್ಲೇ ಗ್ರಾಹಕರಿಗೆ LPG ಶಾಕ್‌ : ವಾಣಿಜ್ಯ ಸಿಲಿಂಡರ್‌ ಬೆಲೆ 9.50 ರೂ. ಏರಿಕೆ ನವದೆಹಲಿ: ಸೆಪ್ಟೆಂಬರ್‌…

9 minutes ago

ಅಂಗನವಾಡಿ ಕಾರ್ಯಕರ್ತೆ : ಸಹಾಯಕಿಯರ ಹುದ್ದೆ ; ಅರ್ಜಿ ಆಹ್ವಾನ – vishwanews24

ಅಂಗನವಾಡಿ ಕಾರ್ಯಕರ್ತೆ : ಸಹಾಯಕಿಯರ ಹುದ್ದೆ; ಅರ್ಜಿ ಆಹ್ವಾನ ಉಡುಪಿ : ಉಡುಪಿ ಜಿಲ್ಲೆಯ 4 ಶಿಶು ಅಭಿವೃದ್ದಿ ಯೋಜನಾ…

20 minutes ago

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ  – vishwanews24

ಸೇತುವೆ ಮೇಲೆ 3 ವರ್ಷದ ಮಗು ಬಿಟ್ಟು ನದಿಗೆ ಹಾರಿದ ದಂಪತಿ  ಅಮರಾವತಿ: ಇಲ್ಲಿನ ಪಶ್ಚಿಮ ಗೋದಾವರಿ  ಜಿಲ್ಲೆಯ ಚಿಂಚಿನಾಡ…

3 days ago

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ – vishwanews24

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಮಿತಿ ರಚನೆ : ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಭರವಸೆ ಕರಾವಳಿ ಭಾಗದಲ್ಲಿ ಕರ್ನಾಟಕ…

3 days ago

ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ – vishwanews24

ಬಿಟ್ ಕಾಯಿನ್ ಹಗರಣ : ಹ್ಯಾಕರ್ ಶ್ರೀಕಿ ಹಾಗೂ ರಾಬಿನ್ ಖಂಡೇವಾಲ ಜಾಮೀನು ಅರ್ಜಿ ವಜಾ ಬೆಂಗಳೂರು: ಬಿಟ್ ಕಾಯಿನ್…

3 days ago