ಉಡುಪಿ: ಬಾಂಗ್ಲಾ ಪ್ರಜೆಗಳು ಭಾರತಕ್ಕೆ ಬಂದು  ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವಂತೆ  ಬಿಜೆಪಿ ಪ್ರೇರಣೆ ಕೊಡುತ್ತಿದೆ : ಪ್ರಸಾದ್ ರಾಜ್ – vishwnaews24

Featured, ಉಡುಪಿ

ಉಡುಪಿ:ಕರಾವಳಿ ಜಿಲ್ಲೆಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು : ಕೇಂದ್ರದ ಆಡಳಿತದ ಬಗ್ಗೆ ಪ್ರಸಾದ್ ಕಾಂಚನ್ ತೀವ್ರ ಖಂಡನೆ

ಉಡುಪಿ: ಇತ್ತೀಚಿನ ದಿನದಲ್ಲಿ ಬಾಂಗ್ಲಾದೇಶದ ನಾಗರಿಕರು ಕರಾವಳಿ ಜಿಲ್ಲೆಗಳಲ್ಲಿ ವಾಸವಿರುವುದನ್ನು ಕಂಡು ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಕೇಂದ್ರ ಸರ್ಕಾರದ ಆಡಳಿತದ ಬಗ್ಗೆ ತೀವ್ರ ಖಂಡಿಸಿದ್ದಾರೆ .

ಕಳೆದ 11 ವರ್ಷಗಳಿಂದ ಆಡಳಿತ ಮಾಡುತ್ತಿರುವ ಬಿಜೆಪಿ ಸರಕಾರ, ಅದರ ಗೃಹ ಇಲಾಖೆಯ ಆಡಳಿತ ಕ್ರಮದ ಬಗ್ಗೆ, ದೇಶದ ಜನರ ಹಿತದೃಷ್ಟಿ ಮತ್ತು ಭದ್ರತೆಯ ಬಗ್ಗೆ ತೀವ್ರ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸರು ಮುಕ್ತವಾಗಿ ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರದಿಂದ ಸಂಪೂರ್ಣ ಸಹಕಾರ : cm ಸಿದ್ದರಾಮಯ್ಯ – vishwanews24

ಕಾಂಗ್ರೆಸ್ ಆಡಳಿತ ಇರುವ ಸಮಯದಲ್ಲಿ ಬಿಜೆಪಿ ಸರಕಾರವು ನೆರೆದೇಶದ ಜನರು ಭಾರತಕ್ಕೆ ನುಸುಳಿಕೊಂಡು ಬಂದು ಇಲ್ಲಿ ಜೀವನ ಮಾಡಲು ಕಾಂಗ್ರೆಸ್ ಸರಕಾರ ಅವಕಾಶ ಕೊಡುತ್ತಿದ್ದಾರೆಂದು ಸುಳ್ಳು ಆರೋಪ ಮಾಡಿ ಜನರ ದಿಕ್ಕನ್ನು ತಪ್ಪಿಸಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೆರೆ ರಾಷ್ಟ್ರ ಬಾಂಗ್ಲಾದೇಶದ ಪ್ರಜೆಗಳು ಭಾರತಕ್ಕೆ ಬಂದು ಅದೂ ಕರಾವಳಿ ಜಿಲ್ಲೆಗಳಲ್ಲಿ ವಾಸಿಸುವಂತೆ ಪ್ರೇರಣೆಯನ್ನು ಬಿಜೆಪಿ ಕೊಡುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನಾದರೂ ಬಿಜೆಪಿ ಆಡಳಿತ ಪಕ್ಷದ ನಾಯಕರು ಬೇರೆ ಪಕ್ಷದ ನಾಯಕರಿಗೆ ವ್ಯಂಗ್ಯ ಮಾಡುವುದನ್ನು ಬಿಟ್ಟು ಆಡಳಿತ ಪಕ್ಷವಾದ ತನ್ನ ಪಕ್ಷದ ಸಚಿವರಿಗೆ ಬುದ್ಧಿ ಹೇಳುವಂತೆ ಪ್ರಸಾದ್ ರಾಜ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೊಲೀಸರು ಮುಕ್ತವಾಗಿ ಸ್ವತಂತ್ರವಾಗಿ ಕೆಲಸ ಮಾಡಲು ನಮ್ಮ ಸರ್ಕಾರದಿಂದ ಸಂಪೂರ್ಣ ಸಹಕಾರ : cm ಸಿದ್ದರಾಮಯ್ಯ – vishwanews24

Leave a Reply