ಉಡುಪಿ: ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರ್ಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಇದೇ ಮೊದಲ ಬಾರಿಗೆ ಕಂಡುಬಂದಿದೆ.
ಬಾರಕೂರಿನ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರದ ಕಾರ್ಯ ಪ್ರಗತಿಯಲ್ಲಿದ್ದು, ದೇವಾಲಯದಲ್ಲಿರುವ ಶಾಸನಗಳ ಸಮೀಕ್ಷೆಯನ್ನು ಗುಳ್ಳಾಡಿಯ ರಾಣಿ ಚಿಕ್ಕಾಯಿ ತಾಯಿ ಟ್ರಸ್ಟ್ ಮತ್ತು ಉಡುಪಿಯ ಆದಿಮ ಕಲಾ ಟ್ರಸ್ಟ್ ವತಿಯಿಂದ ಜಂಟಿಯಾಗಿ ನಡೆಸಿದೆ. ಆ ಸಂದರ್ಭದಲ್ಲಿ ದೇವಾಲಯದ ಹೊರ ಆವರಣದಲ್ಲಿ ಈ ವೀರಗಲ್ಲು ಪತ್ತೆಯಾಗಿದೆ ಎಂದು ಪುರಾತತ್ತ್ವ ವಿದ್ವಾಂಸ ಪ್ರೊ.ಟಿ. ಮುರುಗೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆತ್ಮಾಹುತಿ ಅಥವಾ ಆತ್ಮಬಲಿ ವೀರಗಲ್ಲುಗಳು ದಕ್ಷಿಣ ಭಾರತದಾದ್ಯಂತ ನಮಗೆ ಕಂಡು ಬರುತ್ತವೆ. ಸುಮಾರು 9–10ನೇ ಶತಮಾನದಿಂದ 14–15ನೇ ಶತಮಾನದವರೆಗೆ ಇಂತಹ ಬಲಿದಾನ ನಡೆದಿರುವುದು ಚಾರಿತ್ರಿಕವಾಗಿ ದಾಖಲಾಗಿವೆ. ಕೊಡಗು ಜಿಲ್ಲೆಯ ಸುಮಾರು 10ನೇ ಶತಮಾನದ ಗಂಗರ ಕಾಲದ 3 ಆತ್ಮಬಲಿ ವೀರಗಲ್ಲುಗಳನ್ನು ಈಗಾಗಲೇ ವರದಿ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಅಧ್ಯಯನಕ್ಕೆ ಒಳಪಟ್ಟಿರುವ ಬಾರ್ಕೂರಿನ ವೀರಗಲ್ಲು, ಆತ್ಮಬಲಿ ವೀರಗಲ್ಲು ಪ್ರಕಾರದ ಅತಿ ವಿಶಿಷ್ಟವಾದ ಸಿಡಿತಲೆ ವೀರಗಲ್ಲಾಗಿದೆ. ಆಯತಾಕಾರದ ಈ ವೀರಗಲ್ಲಿನ ಕೆಳಗಿನ 2 ಪಟ್ಟಿಕೆಗಳು ದೊಡ್ಡದಾಗಿವೆ. ಮೇಲ್ಭಾಗದ ಪಟ್ಟಿಕೆ ಸ್ವಲ್ಪ ಕಿರಿದಾಗಿದೆ ಮತ್ತು ಕಲ್ಲಿನ ಮೇಲ್ಭಾಗವನ್ನು ಅರೆ ಕೋನಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಕೆಳಗಿನ ಪಟ್ಟಿಕೆಯಲ್ಲಿ ವೀರನೊಬ್ಬ ಬಲಿದಾನಕ್ಕೆ ಸಿದ್ದನಾಗಿ ಧ್ಯಾನಾಸಕ್ತ ಭಂಗಿಯಲ್ಲಿ ಕುಳಿತಿದ್ದಾನೆ. ಎಡಭಾಗದಲ್ಲಿ ಕಟುಕ ಮತ್ತು ಬಲಭಾಗದಲ್ಲಿ ಬಿದಿರಿನ ಕೆಳಭಾಗವನ್ನು ಹಿಡಿದು ನಿಂತ ವ್ಯಕ್ತಿಯ ಚಿತ್ರಣವಿದೆ. ಕಟುಕ ಒಂದೇ ಏಟಿಗೆ ತಲೆಯನ್ನು ಕಡಿದಿದ್ದಾನೆ, ಬಿದಿರಿನ ತುದಿಗೆ ಕಟ್ಟಲಾಗಿದ್ದ ಆತನ ತಲೆ ಸಿಡಿದು ಬಾನಲ್ಲಿ ನೇತಾಡುತ್ತಿದೆ. ಎರಡನೇ ಪಟ್ಟಿಕೆಯಲ್ಲಿ ಅಪ್ಸರೆಯರು ಮಡಿದ ವೀರನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಿರುವಂತೆ ಚಿತ್ರಿಸಲಾಗಿದೆ.
ವಿದ್ಯಾರ್ಥಿಗಳಾದ ಸಿಂಚಿತ್ ಮತ್ತು ಶೋಧನ್ ಸಹಕಾರ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಡಿತಲೆ ವೀರಗಲ್ಲು ಎಂದರೇನು?
ಸ್ವಯಂ ಆತ್ಮಬಲಿಗೆ ಸಿದ್ಧವಾದ ವ್ಯಕ್ತಿಯು, ಕಾಳಿಕಾದೇವಿ ಅಥವಾ ಕಾಲಭೈರವ ದೇವಾಲಯದ ಎದುರು ಎತ್ತರವಾದ ಮಣ್ಣಿನ ವೇದಿಕೆಯ ಮೇಲೆ ಪದ್ಮಾಸನದಲ್ಲಿ ಧ್ಯಾನಸ್ತನಾಗಿ ಕುಳಿತುಕೊಳ್ಳುತ್ತಾನೆ. ದೇವಾಲಯದ ಅರ್ಚಕರು ಬಲಿಪೂಜೆಯನ್ನು ನಡೆಸಿದ ನಂತರ, ಕಟುಕನೊಬ್ಬ ಹರಿತವಾದ ಕತ್ತಿಯಿಂದ ಒಂದೇ ಏಟಿಗೆ ತಲೆ ಕತ್ತರಿಸುತ್ತಾನೆ. ಇದು ಆತ್ಮಬಲಿ. ಆದರೆ, ಸಿಡಿತಲೆ ಬಲಿದಾನದಲ್ಲಿ ಆತ್ಮಬಲಿಗೆ ಸಿದ್ಧವಾಗಿ ಕುಳಿತ ವ್ಯಕ್ತಿಯ ತಲೆ ಜುಟ್ಟನ್ನು ಬಿದಿರಿನ ತುದಿಗೆ ಕಟ್ಟಲಾಗುತ್ತದೆ ಮತ್ತು ಆ ಬಿದಿರನ್ನು ಭೂಮಿಯಲ್ಲಿ ಗಟ್ಟಿಯಾಗಿ ಹೂಳಲಾಗಿರುತ್ತದೆ. ಕಟುಕ ತಲೆಯನ್ನು ಒಂದೇ ಏಟಿಗೆ ಕತ್ತರಿಸುತ್ತಿದ್ದಂತೆ, ತಲೆ ಆಗಸಕ್ಕೆ ಸಿಡಿದು, ಆಗಸದಲ್ಲಿ ತೇಲಾಡುತ್ತದೆ ಇಂತಹ ಆತ್ಮಬಲಿಯನ್ನು ಸಿಡಿತಲೆ ವೀರಗಲ್ಲು ಎಂದು ಕರೆಯಲಾಗುತ್ತದೆ ಎಂದು ಮುರುಗೇಶಿ ತಿಳಿಸಿದ್ದಾರೆ.
ಮಂಗಳೂರು : ಜಿಲ್ಲಾ ಕಾರಾಗೃಹಕ್ಕೆ ಪೊಲೀಸರ ದಿಢೀರ್ ದಾಳಿ: 9 ಕೈದಿಗಳಿಂದ 10 ಮೊಬೈಲ್ ವಶ ಮಂಗಳೂರು: ಮಂಗಳೂರಿನ ಜಿಲ್ಲಾ…
ಮಲ್ಪೆ: ರಸ್ತೆ ಬದಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು ಮಲ್ಪೆ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ…
ಉಡುಪಿ: ಆಸ್ಟ್ರೋ ಮೋಹನ್‌ಗೆ ಅಮೆರಿಕದ ಪ್ರತಿಷ್ಠಿತ ‘ಇಪಿಎಸ್‌ಎ’ ಗೌರವ ಮೂರು ದಶಕಗಳ ಛಾಯಾಪತ್ರಿಕೋದ್ಯಮ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳಲ್ಲಿನ ನಿರಂತರ ಸಾಧನೆಗೆ…
ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿಗೆ ಚರ್ಚೆ : ಮುಖ್ಯಮಂತ್ರಿ ಡಿ.ಕೆ.ಶಿ ದೇವನಹಳ್ಳಿ: ನವ ಯುವ ಪೀಳಿಗೆಯ ಅಗತ್ಯ, ಆಲೋಚನೆಗೆ…
ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ ಎಲ್‌ಪಿಜಿ ಸಿಲಿಂಡರ್ ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ಕಿಂಗ್ ನಡುವಿನ…
ಸುಳ್ಯ: ಮರ ಕತ್ತರಿಸುವ ವೇಳೆ ಹೃದಯಘಾತ ; ವ್ಯಕ್ತಿ ಸಾವು ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಬಾಳೆಕಜೆ ದಿ.ಆನಂದ ಅವರ…