Featured

ಮಲ್ಪೆ: ರಸ್ತೆ ಬದಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು – vishwanews24

ಮಲ್ಪೆ: ರಸ್ತೆ ಬದಿ ಪತ್ತೆಯಾಗಿದ್ದ ನವಜಾತ ಶಿಶು ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

ಮಲ್ಪೆ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ಓಣಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದ , ತೀವ್ರವಾಗಿ ಗಾಯಗೊಂಡಿದ್ದ ನವಜಾತ ಶಿಶು  ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಹೂಡೆಯ ಅಬ್ದುಲ್ ಶುಕೂರ್ ಎಂಬವರು ಮನೆಯಿಂದ ಹೊರಗೆ ಬಂದಾಗ, ಮನೆಯ ಪಕ್ಕದ ಓಣಿಯಲ್ಲಿ ಯಾವುದೇ ಬಟ್ಟೆ ಇಲ್ಲದೆ ಕವಚಿ ಮಲಗಿಸಿಟ್ಟಿದ್ದ ನವಜಾತ ಗಂಡು ಶಿಶು ಕಂಡುಬಂದಿದ್ದು, ಅದರ ವಾರಸುದಾರರು ಯಾರೂ ಅಲ್ಲಿ ಪತ್ತೆಯಾಗಿರುವುದಿಲ್ಲ.

ಇದನ್ನೂ ಓದಿ :

ಅವರು ಕೂಡಲೇ ನೆರೆಹೊರೆಯವರಿಗೆ ಮಾಹಿತಿ ನೀಡಿ ಮಗುವನ್ನು ನೋಡಿದಾಗ ಜೀವಂತವಾಗಿರುವುದು ಕಂಡುಬಂದಿದೆ. ಮಗುವಿನ ಮುಖದ ಮೇಲೆ ಗಾಯವಾಗಿದ್ದು, ಬಾಯಲ್ಲಿ ರಕ್ತಸ್ರಾವ ಆಗುತ್ತಿತ್ತು. ಆದುದರಿಂದ ಕೂಡಲೇ ಮಗುವನ್ನು ಉಡುಪಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಲಾಯಿತು.

ಆದರೆ ಗಂಭೀರ ಸ್ಥಿತಿಯಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿತು ಎಂದು ವೈದ್ಯರು ತಿಳಿಸಿದ್ದಾರೆ. ಮಗುವಿನ ಮೃತದೇಹವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಶಿಶು ಕೇವಲ ಒಂದು ದಿನದ ಹಿಂದೆಯಷ್ಟೇ ಜನಿಸಿರಬಹುದು ಎಂದು ಅಂದಾಜಿಸಲಾಗಿದೆ. ಶಿಶುವಿನ ಬಾಯಲ್ಲಿ ಗಾಯವಾಗಿ ರಕ್ತಸ್ರಾವ ಆಗುತ್ತಿರುವುದರಿಂದ ಮೃತಪಟ್ಟಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುರಕ್ಷಾ ತಿಳಿಸಿದ್ದಾರೆ.

‘ಹುಟ್ಟಿದ ಮಗುವನ್ನು ಉತ್ತರ ಭಾರತದ ವಲಸೆ ಕಾರ್ಮಿಕರು ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಈ ಬಗ್ಗೆ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

Vishwa News 24

Recent Posts

ಉಡುಪಿ: ಬಾರ್ಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ – vishwanews24

ಉಡುಪಿ: ಬಾರ್ಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ಉಡುಪಿ: ತುಳುನಾಡಿನ ಚಾರಿತ್ರಿಕ ರಾಜಧಾನಿ ಬಾರ್ಕೂರಿನಲ್ಲಿ ಅತ್ಯಂತ ಅಪರೂಪದ ಸಿಡಿತಲೆ…

34 minutes ago

ಉಡುಪಿ:  ಆಸ್ಟ್ರೋ ಮೋಹನ್‌ಗೆ ಅಮೆರಿಕದ ಪ್ರತಿಷ್ಠಿತ ‘ಇಪಿಎಸ್‌ಎ’ ಗೌರವ – vishwanews24

ಉಡುಪಿ:  ಆಸ್ಟ್ರೋ ಮೋಹನ್‌ಗೆ ಅಮೆರಿಕದ ಪ್ರತಿಷ್ಠಿತ ‘ಇಪಿಎಸ್‌ಎ’ ಗೌರವ ಮೂರು ದಶಕಗಳ ಛಾಯಾಪತ್ರಿಕೋದ್ಯಮ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನಗಳಲ್ಲಿನ ನಿರಂತರ ಸಾಧನೆಗೆ…

1 hour ago

ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿಗೆ ಚರ್ಚೆ : ಮುಖ್ಯಮಂತ್ರಿ ಡಿ.ಕೆ.ಶಿ – vishwanews24

ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿಗೆ ಚರ್ಚೆ : ಮುಖ್ಯಮಂತ್ರಿ ಡಿ.ಕೆ.ಶಿ ದೇವನಹಳ್ಳಿ: ನವ ಯುವ ಪೀಳಿಗೆಯ ಅಗತ್ಯ, ಆಲೋಚನೆಗೆ…

1 hour ago

ಗ್ರಾಮೀಣ ಪ್ರದೇಶಗಳಲ್ಲಿ ಇನ್ಮುಂದೆ 25 ದಿನಕ್ಕೊಮ್ಮೆ ಎಲ್‌ಪಿಜಿ ಸಿಲಿಂಡರ್ – vishwanews24

ಇನ್ಮುಂದೆ ಗ್ರಾಮೀಣ ಪ್ರದೇಶಗಳಲ್ಲಿ 25 ದಿನಕ್ಕೊಮ್ಮೆ ಎಲ್‌ಪಿಜಿ ಸಿಲಿಂಡರ್ ನವದೆಹಲಿ:  ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಪಿಜಿ ಸಿಲಿಂಡರ್ ರಿಫಿಲ್ ಬುಕ್ಕಿಂಗ್ ನಡುವಿನ…

2 hours ago

ಸುಳ್ಯ: ಮರ ಕತ್ತರಿಸುವ ವೇಳೆ ಹೃದಯಘಾತ ; ವ್ಯಕ್ತಿ ಸಾವು – vishwanews24

ಸುಳ್ಯ: ಮರ ಕತ್ತರಿಸುವ ವೇಳೆ ಹೃದಯಘಾತ ; ವ್ಯಕ್ತಿ ಸಾವು ಸುಳ್ಯ: ತಾಲೂಕಿನ ತೊಡಿಕಾನ ಗ್ರಾಮದ ಬಾಳೆಕಜೆ ದಿ.ಆನಂದ ಅವರ…

2 hours ago

ಸೆ.20ರಿಂದ 108 ಅಂಬುಲೆನ್ಸ್‌ ಸೇವೆ ಬಂದ್‌ : ನೌಕರರಿಂದ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ – vishwanews24

ಸೆ.20 ರಿಂದ 108 ಸೇವೆ ಬಂದ್ ;  ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್.. 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ಬೆಂಗಳೂರು:…

2 hours ago