Featured

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ  ಆಸ್ತಿ‌ ವಿವರ…Vishwanews24

ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ಪಾಲ್ ಸುವರ್ಣ  ಆಸ್ತಿ‌ ವಿವರ…

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂದು ನಾಮಪತ್ರ ಸಲ್ಲಿಸಿರುವ ಯಶ್‌ಪಾಲ್ ಸುವರ್ಣ (44) ಒಟ್ಟು 6,24,58,781 ರೂ.ಗಳ ಒಡೆಯ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದವಿತ್‌ನಿಂದ ತಿಳಿದುಬರುತ್ತದೆ.

ಯಶ್‌ಪಾಲ್ ಸುವರ್ಣ ಅವರಲ್ಲಿ 4,29,20,372 ರೂ. ಚರಾಸ್ಥಿ ಇದ್ದು, ಇದರೊಂದಿಗೆ 1,95,38,409ರೂ. ಸ್ಥಿರಾಸ್ಥಿಯನ್ನೂ ಹೊಂದಿದ್ದಾರೆ. ಸದ್ಯ ಅವರ ಬಳಿ 1,06,300ರೂ.ನಗದು ಇದೆ.

ಚರಾಸ್ಥಿಗಳಲ್ಲಿ 18 ಬ್ಯಾಂಕುಗಳು, ಸಹಕಾರಿ ಸಂಘ, ಸೊಸೈಟಿ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ 38.79 ಲಕ್ಷ ರೂ. ಠೇವಣಿ ಇದೆ. ಬಾಂಡ್, ಮ್ಯುಚವಲ್ ಫಂಡ್, ಡಿಬೆಂಚರ್‌ಗಳಲ್ಲಿ 17.99 ಲಕ್ಷ ರೂ., ಎನ್ಎಸ್ಎಸ್, ಪೋಸ್ಟಲ್, ವಿಮೆಯಲ್ಲಿ 17.71 ಲಕ್ಷ ರೂ.ವನ್ನು ತೊಡಿಸಿಕೊಂಡಿದ್ದರೆ, ಕೆಲವರಿಗೆ ನೀಡಿರುವ ಸಾಲ, ಮುಂಗಡ, ವಿವಿಧ ಕಂಪೆನಿಗಳಲ್ಲಿ ಹೂಡಿರುವ ಬಂಡವಾಳ ಮೊತ್ತ 3.04 ಕೋಟಿ ರೂ.ಗಳಾಗಿವೆ.

ಇದರೊಂದಿಗೆ 20 ಲಕ್ಷ ರೂ.ಮೌಲ್ಯದ ಮೀನುಗಾರಿಕಾ ಬೋಟ್, 25.09 ಲಕ್ಷ ರೂ.ಮೌಲ್ಯದ ಕಾರು, ಬೈಕ್ ಸೇರಿ ವಿವಿಧ ವಾಹನಗಳು, 25.56 ಲಕ್ಷ ರೂ. ಮೌಲ್ಯದ 450 ಗ್ರಾಂ ಚಿನ್ನಾಭರಣಗಳು ಒಟ್ಟು ಚರಾಸ್ಥಿಯ ಮೌಲ್ಯ 4.29 ಕೋಟಿ ರೂ.ಗಳಾಗಿವೆ. 2017-18ರಲ್ಲಿ 51.40 ಲಕ್ಷರೂ. ಇದ್ದ ಇವರ ಆದಾಯ, 2021-22ನೇ ಸಾಲಿನಲ್ಲಿ 43.01ಲಕ್ಷ ರೂ.ಗಳಾಗಿದೆ ಎಂದು ಅವರು ತಿಳಿಸಿದ್ದಾರೆ.

1.95 ಕೋಟಿ ರೂ. ಸ್ಥಿರಾಸ್ಥಿಗಳಲ್ಲಿ ಉಳಿಯಾರಗೊಳಿ ಯಲ್ಲಿ 30 ಲಕ್ಷ ರೂ.ಮೌಲ್ಯದ 0.49 ಎಕರೆ ಜಾಗ, 35 ಲಕ್ಷ ರೂ.ಮೌಲ್ಯದ ಮನೆ, 15 ಲಕ್ಷ ರೂ.ಮೌಲ್ಯದ ಮನೆ ಹಾಗೂ ಭೂಮಿಯಲ್ಲಿ ಮಾಡಿದ ಹೂಡಿಕೆಗಳು ಸೇರಿವೆ ಎಂದು ಅಫಿದವತ್‌ನಲ್ಲಿ ತಿಳಿಸಲಾಗಿದೆ.

ಇವುಗಳೊಂದಿಗೆ ಯಶ್‌ಪಾಲ್ ಸುವರ್ಣ ಅವರು ವಿವಿಧ ಬ್ಯಾಂಕುಗಳು, ಸೊಸೈಟಿ, ಆರ್ಥಿಕಸಂಸ್ಥೆಗಳಿಂದ 2,85,34,604ರೂ. ಸಾಲವೂ ಅವರ ಮೇಲಿದೆ. ಇದರಲ್ಲಿ ವಿವಿಧ ವ್ಯಕ್ತಿಗಳಿಂದ ಪಡೆದ 80 ಲಕ್ಷ ರೂ. ಸಾಲವೂ ಸೇರಿದೆ.

Vishwa News 24

Recent Posts

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ – vishwanews24

ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಬಿ.ಕೆ.ಹರಿಪ್ರಸಾದ್ ಬೆಂಗಳೂರು: ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು…

49 minutes ago

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು – vishwanews24

ಉಡುಪಿ: 36.29 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನ ನಾಶಪಡಿಸಿದ ಪೊಲೀಸರು ಉಡುಪಿ: ಕಠಿಣ ಕಾನೂನು ಕ್ರಮ ಮತ್ತು ಜಾಗೃತಿ…

59 minutes ago

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ – vishwanews24

ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಕೆ. ಭಾಗ್ಯರಾಜ್ ಹೃದಯಾಘಾತದಿಂದ ನಿಧನ ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ನಿರ್ದೇಶಕ,…

2 hours ago

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ – vishwanews24

ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಕೆ.ಎಸ್. ಈಶ್ವರಪ್ಪ ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ…

2 hours ago

ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! vishwanews24

ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ.. ಮಂಗಳೂರು-ಬಾಂದ್ರಾ ಟರ್ಮಿನಸ್‌ಗೆ ಶೀಘ್ರ ಹೊಸ ರೈಲು ಸೇವೆ ! ಮಂಗಳೂರು: ಮಂಗಳೂರಿನಿಂದ ವಸಾಯ್ ರೋಡ್…

2 hours ago

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ – vishwanews24

ಡಿವೈಡರ್ ದಾಟಿ ಓಮ್ನಿಗೆ ಗೂಡ್ಸ್‌ ವಾಹನ ಡಿಕ್ಕಿ :  ಐವರು ದುರ್ಮರಣ‌ ಕೊಪ್ಪಳ: ಗೂಡ್ಸ್‌ ವಾಹನವೊಂದು ಡಿವೈಡರ್ ದಾಟಿ ಓಮ್ನಿಗೆ…

2 hours ago