Featured

ಬಂಟ್ವಾಳ ಕಾಂಗ್ರೆಸ್‌  ಅಭ್ಯರ್ಥಿ ರಮಾನಾಥ್ ರೈ ಆಸ್ತಿ‌ ವಿವರ – Vishwanews24

ಬಂಟ್ವಾಳ ಕಾಂಗ್ರೆಸ್‌  ಅಭ್ಯರ್ಥಿ ರಮಾನಾಥ್ ರೈ ಆಸ್ತಿ‌ ವಿವರ

ಬಂಟ್ವಾಳ: ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ 9ನೇ ಬಾರಿ ಸ್ಪರ್ಧೆಗೆ ಇಳಿದಿರುವ ಮಾಜಿ ಸಚಿವ ಬಿ. ರಮಾನಾಥ ರೈ 5.15 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ.

ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡಾವಿಟ್‌ನಲ್ಲಿ 36.25 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 4.79 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಪತ್ನಿ ಧನಭಾಗ್ಯ ಯಾನೆ ಶೈಲಾ ಆರ್ ರೈ ಅವರು 1 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಹೊಂದಿದ್ದರೆ, ಪುತ್ರಿ ಚರಿಷ್ಮಾ ರೈ ಹೆಸರಲ್ಲಿ 99.04 ಲಕ್ಷ ರೂ. ಮತ್ತು ಪುತ್ರ ಚೈತ್ರದೀಪ್ ರೈ ಹೆಸರಲ್ಲಿ 25.85 ಲಕ್ಷ ರೂ. ಮೌಲ್ಯದ ಚರಾಸ್ತಿಗಳಿವೆ.

ರೈ ಕುಟಂಬದಲ್ಲಿ 9 ವಾಹನ: ರಮಾನಾಥ ರೈ ಕುಟುಂಬದಲ್ಲಿ 9 ವಾಹನಗಳು ಇವೆ. ರೈ ಹೆಸರಿನಲ್ಲಿ ಇನೋವಾ, ಟೊಯೇಟೊ ಮತ್ತು ಟಾಟಾ ಟಿಯಾಗೋ ಎಕ್ಸ್ ಝಡ್ ವಾಹನ ಇದೆ. ಪತ್ನಿ ಮತ್ತು ಪುತ್ರನ ಬಳಿ ವಾಹನ ಇಲ್ಲ. ಆದರೆ ಪುತ್ರಿ ಚರಿಷ್ಮಾ ಬಳಿ 7 ವಾಹನಗಳಿವೆ.

ರೈ ಅವರಲ್ಲಿ 6.15 ಲಕ್ಷ ರೂ. ಮೌಲ್ಯದ 110 ಗ್ರಾಂ ಚಿನ್ನ ಮತ್ತು 77 ಸಾವಿರ ರೂ. ಮೌಲ್ಯದ 1,000 ಗ್ರಾಂ ಬೆಳ್ಳಿ, ಪತ್ನಿ 72.73 ಲಕ್ಷ ರೂ. ಮೌಲ್ಯದ 1,300 ಗ್ರಾಂ ಚಿನ್ನ ಮತ್ತು 38,500 ಮೌಲ್ಯದ 500 ಗ್ರಾಂ ಬೆಳ್ಳಿ, ಪುತ್ರಿ ಬಳಿ 22.38 ಲಕ್ಷ ರೂ. ಮೌಲ್ಯದ 400 ಗ್ರಾಂ ಚಿನ್ನ, 19,250 ರೂ. ಮೌಲ್ಯದ 250 ಗ್ರಾಂ ಬೆಳ್ಳಿ, ಪುತ್ರ ಬಳಿ 5.59 ಲಕ್ಷ ರೂ.ಮೌಲ್ಯದ 100 ಗ್ರಾಂ ಚಿನ್ನ ಮತ್ತು 7,700ರೂ.ಮೌಲ್ಯದ ಬೆಳ್ಳಿ ಇವೆ.

ಕುಟುಂಬದ ಸಾಲ 7.63 ಕೋಟಿ ರೂ. ರೈ 2.03 ಕೋಟಿ ರೂ, ಪತ್ನಿ 5.10 ಕೋಟಿ ರೂ ಮತ್ತು ಪುತ್ರಿ 50.50 ಲಕ್ಷ ರೂ. ಸಾಲದಲ್ಲಿದ್ದಾರೆ. ವಾರ್ಷಿಕ ಆದಾಯ 2021-22ರಲ್ಲಿ ರೈ ಅವರದ್ದು 22.15 ಲಕ್ಷ ರೂ, ಧನಭಾಗ್ಯ ರೈ 4.88 ಲಕ್ಷ ರೂ. ಮತ್ತು ಚರಿಷ್ಮಾ ರೈ 9.29 ಲಕ್ಷ ರೂ.

ಒಂದು ಪ್ರಕರಣ : 2018ರ ಚುನಾವಣೆ ವೇಳೆ ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕರಿಗೆ ಹಣ ಹಂಚಲು ಹಣ ಸಂಗ್ರಹಿಸಿಟ್ಟ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ.

Vishwa News 24

Recent Posts

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ -vishwanews24

ದುರಸ್ತಿ ಕಾಮಗಾರಿ: ಅ.7ರಂದು ಹಂದಾಡಿ ರೈಲ್ವೆ ಗೇಟ್ ಬಂದ್ ಕುಂದಾಪುರ : ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ಅಗತ್ಯ ದುರಸ್ತಿ…

6 hours ago

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ: ಜನವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ…

14 hours ago

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ : ಸಂಸದ ಕ್ಯಾ. ಬ್ರಿಜೇಶ್ ಚೌಟ – vishwanews24

ಎಂಆರ್‌ಪಿಎಲ್ ದುರಂತ:  ಮೃತರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ, ಸದಸ್ಯರೊಬ್ಬರಿಗೆ ಉದ್ಯೋಗ : ಸಂಸದ ಕ್ಯಾ. ಬ್ರಿಜೇಶ್ ಚೌಟ ಮಂಗಳೂರು:…

14 hours ago

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ – vishwanews24

ಉಡುಪಿ: ಜೈಲು ವಾರ್ಡನ್‌ಗೆ ಕೊಲೆ ಬೆದರಿಕೆ, ಹಲ್ಲೆ ಪ್ರಕರಣ :ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಉಡುಪಿ: ಸುಮಾರು…

14 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕ ಸಾವು ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ…

14 hours ago

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ – vishwanews24

ದ. ಕ, ಉಡುಪಿಯಲ್ಲಿ ಅ. 11 ರವರೆಗೆ ಮಳೆಯಾಗುವ ನಿರೀಕ್ಷೆ:  ಹವಾಮಾನ ಇಲಾಖೆ ಮುನ್ಸೂಚನೆ ಮಂಗಳೂರು/ಉಡುಪಿ:  ದಕ್ಷಿಣ ಕನ್ನಡ (ದ.ಕ)…

15 hours ago