ಉಡುಪಿ: ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣಗೆ ಮತ್ತೆ ಬೆದರಿಕೆ ಸಂದೇಶ ! Vishwanews24

Featured, ಉಡುಪಿ

ಉಡುಪಿ: ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣಗೆ ಮತ್ತೆ ಬೆದರಿಕೆ ಸಂದೇಶ!

ಉಡುಪಿ:ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ಗೆ ಮತ್ತೆ ಬೆದರಿಕೆ ಹಾಕಲಾಗಿದೆ. ಮಾರಿಗುಡಿ ಇನ್ಯಾಗ್ರಾಮ್ ಪೇಜ್ ನಲ್ಲಿ ಮತ್ತೆ ಬೆದರಿಕೆ ಹಾಕಲಾಗಿದ್ದು, ಶ್ರದ್ಧಾಂಜಲಿ ಬ್ಯಾನರ್ ಬೇಗ ತಯಾರು ಮಾಡಿಡು,ಮತ್ತೆ ಹುಟ್ಟಿ ಬರಬೇಡ ಎಂದು ಬೆದರಿಕೆ ಸಂದೇಶ ಬರೆಯಲಾಗಿದೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಭದ್ರತೆ ಪಡೆಯುವಂತೆ ಸೂಚನೆ ನೀಡಿದೆ. ಯಶ್ ಪಾಲ್ ಸುವರ್ಣ,ಹಿಜಾಬ್ ವಿವಾದದ ವೇಳೆ ಮುಂಚೂಣಿಯಲ್ಲಿದ್ದರು.ಮಾತ್ರವಲ್ಲ,ಮಳಲಿ ಮಸೀದಿ ಕುರಿತು ಹೇಳಿಕೆಯನ್ನೂ ನೀಡಿದ್ದರು.

ಬೆದೆರಿಕ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಯಶ್ ಪಾಲ್ ಸುವರ್ಣ ಅಭಿಮಾನಿಗಳು ಈಗಾಗಲೇ ಎಸ್ಸಿ ಗೆ ಮನವಿ ಮಾಡಿದ್ದಾರೆ.ಅಲ್ಲದ ಕಾಪು ಠಾಣೆಯಲ್ಲಿ ಯುವಮೋರ್ಚಾ ಈಗಾಗಲೇ ದೂರು ದಾಖಲು ಮಾಡಿತ್ತು.ಆದರೆ ಯಶ್ ಪಾಲ್ ಸುವರ್ಣ ತಾವಾಗಿಯೇ ಇನ್ನೂ ದೂರು ದಾಖಲಿಸಿಲ್ಲ.ಎರಡು ಬಾರಿ ಬೆದರಿಕೆ ಹಿನ್ನೆಲೆಯಲ್ಲಿ ಯಶಾಲ್ ಗೆ ಭದ್ರತೆ ನೀಡುವ ಬಗ್ಗೆ ಪೊಲೀಸ್ ಇಲಾಖೆ ಚಿಂತನ ನಡೆಸಿದೆ ಎಂದು ತಿಳಿದುಬಂದಿದೆ.

ಬಾಲಿವುಡ್ ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್ – Vishwanews24

Leave a Reply