ಉಡುಪಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ತೈಲ ಬೆಲೆ ಜೊತೆಗೆ ಅಡುಗೆ ಅನಿಲದ ದರವನ್ನು ಮತ್ತೆ ಮತ್ತೆ ಏರಿಸುತ್ತಿರುವುದನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರತಿಯೊಂದು ಮನೆಯಲ್ಲಿಯೂ ಅಡುಗೆಗಾಗಿ ಮಹಿಳೆಯರು ಎಲ್‌ಪಿಜಿ ಬಳಸುವುದು ಅನಿವಾರ್ಯವಾಗಿರುವುದರಿಂದ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಅಡುಗೆ ಅನಿಲ ದರ ಏರಿಸಲಾಗುತ್ತಿದೆ. ಆ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಸಾಮಾನ್ಯರಿಗೆ ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆಯ ಗಿಫ್ಟ್ ನೀಡಿದೆ ಎಂದು ರಮೇಶ್ ಕಾಂಚನ್ ವ್ಯಂಗ್ಯವಾಡಿದ್ದಾರೆ.
ಹೊಟೇಲುಗಳಲ್ಲಿ ಬಳಸುವ ಕುಕ್ಕಿಂಗ್ ಗ್ಯಾಸ್ (ಕಮರ್ಷಿಯಲ್) ಬೆಲೆಯನ್ನೂ ಇದೀಗ ಸಿಲಿಂಡರಿಗೆ 160ರಷ್ಟು ಏರಿಕೆ ಮಾಡಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ರೂ. 2000 ದಾಟಿದೆ. ಇದರಿಂದ ಹೊಟೇಲ್ ಉದ್ಯಮವೂ ಸಂಕಷ್ಟಕ್ಕೊಳಗಾಗಲಿದ್ದು, ತಿಂಡಿ ತಿನಿಸುಗಳ ಬೆಲೆ ಏರಿಕೆಯಾಗಲಿದೆ. ಅಚ್ಚೇ ದಿನ್ ನೀಡುವ ಭರವಸೆ ನೀಡಿದ ಸರಕಾರದ ಜನ ವಿರೋಧಿ ಆರ್ಥಿಕ ನೀತಿಯಿಂದಾಗಿ ಲಾಕ್‌ಡೌನ್‌ನಿಂದ ತೊದರೆಗೆ ಸಿಲುಕಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದ ಅವರು, ಈ ಕೂಡಲೇ ಗ್ಯಾಸ್ ಸಿಲಿಂಡರ್ ಮೇಲಿನ ತೆರಿಗೆ ಕಡಿತ ಮಾಡಿ ಬೆಲೆ ಇಳಿಸುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ಕಡಿತ: ಕೇಂದ್ರ ಸರ್ಕಾರ ಆದೇಶ ಬೆಂಗಳೂರು: ಅಡುಗೆ ಎಣ್ಣೆ ಮೇಲಿನ ಆಮದು ಸುಂಕ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಸೆ.28 ರಂದು ಪ್ರದೋಷ್ ಮಾಫಿ ಸಾಕ್ಷಿ ದಾಖಲಿಸಲು ಕೋರ್ಟ್ ಆದೇಶ ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ…
ಬರ ಪರಿಸ್ಥಿತಿ : ಕರ್ನಾಟಕಕ್ಕೆ ನೆರವು ನೀಡುವುದು ಪ್ರಧಾನಮಂತ್ರಿಗಳ ಕರ್ತವ್ಯ : ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು : “ಕರ್ನಾಟಕದಲ್ಲಿ 200ಕ್ಕೂ…
ವಾಕ್ ವಿತ್ ಕಮಿಷನರ್: ಮಂಗಳೂರಿನ ಹಂಪನಕಟ್ಟೆಯಲ್ಲಿ ಹೋಟೆಲ್ ಪರಿಶೀಲನೆ.. ಟ್ರೇಡ್ ಲೈಸೆನ್ಸ್ ಹಾಗೂ ಸ್ವಚ್ಛತೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಫುಟ್‌ಪಾತ್ ಒತ್ತುವರಿ…
ಮಂಗಳೂರು : ಎಂಡಿಎಂಎ ಮಾರಾಟಕ್ಕೆ ಯತ್ನ ; 23.20 ಗ್ರಾಂ ಮಾದಕ ವಸ್ತು ವಶ, ಆರೋಪಿ ಬಂಧನ ಮಂಗಳೂರು: ಮಂಗಳೂರು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಉಡುಪಿ: ಟೀಂ ಇಂಡಿಯಾದ…