ಉಡುಪಿ : ಬುರ್ಖಾ, ಟೋಪಿ ಕೇಳಿ ಮುಂದೆ ಷರಿಯತ್ ಕಾನೂನು ಕೇಳುತ್ತಾರೆ : ಹಿಂದೂ ಜಾಗರಣಾ ವೇದಿಕೆ – Vishwanews24
ಉಡುಪಿ : ಬುರ್ಖಾ, ಟೋಪಿ ಕೇಳಿ ಮುಂದೆ ಷರಿಯತ್ ಕಾನೂನು ಕೇಳುತ್ತಾರೆ..
ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದೂ ಜಾಗರಣಾ ವೇದಿಕೆ ಬಿಡುವುದಿಲ್ಲ..
ಸರ್ಕಾರಿ ಶಿಕ್ಷಣ ಬೇಡದಿದ್ದರೆ ಮದರಾಸ ಶಿಕ್ಷಣ ಪಡೆಯಿರಿ..
ಹಿಂದೂ ಜಾಗರಣಾ ವೇದಿಕೆ – Vishwanews24
ಉಡುಪಿ: ಜಿಲ್ಲೆಯಲ್ಲಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಬ್ ಹಕ್ಕಿಗಾಗಿ 8 ಮುಸಲ್ಮಾನ ವಿದ್ಯಾರ್ಥಿನಿಯರು ಹೋರಾಟ ಮಾಡುತ್ತಿದ್ದಾರೆ. ಕಾಲೇಜಿಗೆ ಹಿಂದೂ ಜಾಗರಣಾ ವೇದಿಕೆ ಭೇಟಿ ನೀಡಿದೆ. ಶಾಲೆ ಕಾಲೇಜಿನಲ್ಲಿ ಸಮವಸ್ತ್ರ, ಸಮಾನತೆ ಇರಬೇಕು. ಬುರ್ಖಾ, ಟೋಪಿ ಕೇಳಿ ಮುಂದೆ ಷರಿಯತ್ ಕಾನೂನು ಕೇಳುತ್ತಾರೆ ಕೊಡುತ್ತೀರಾ ಎಂದು ಪ್ರಶ್ನೆ ಮಾಡಿದೆ.
ಮತೀಯ ಸಂಘಟನೆಯೊಂದು ವಿದ್ಯಾರ್ಥಿಗಳಿಗೆ ವಿಷ ಬೀಜ ಬಿತ್ತಿದೆ. ದೇಶದ ಮಾನ ಹರಣಕ್ಕೆ ಅಂತರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಉಡುಪಿಯ ಶೈಕ್ಷಣಿಕ ಖ್ಯಾತಿ ಕುಗ್ಗಿಸಲು ಷಡ್ಯಂತ್ರ ನಡೆಯುತ್ತಿದೆ. ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದೂ ಜಾಗರಣಾ ವೇದಿಕೆ ಬಿಡುವುದಿಲ್ಲ. ಕಾಲೇಜಲ್ಲಿ ಇಸ್ಲಾಂ ಕಾನೂನು ಜಾರಿಗೆ ತರುವ ಅವಕಾಶ ಕೊಡಬಾರದು. ಇವರಿಗೆ ಸರ್ಕಾರಿ ಶಿಕ್ಷಣ ಬೇಡದಿದ್ದರೆ ಮದರಾಸ ಶಿಕ್ಷಣ ಪಡೆಯಿರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ :
ಹಿರಿಯ ಅಧಿಕಾರಿಗಳು ಪ್ರಾಂಶುಪಾಲರಿಗೆ ಒತ್ತಡ ಹಾಕುತ್ತಿರುವ ಬಗ್ಗೆ ಸಂಘಟನೆ ಗಮನಕ್ಕೆ ಬಂದಿದೆ. ಸರ್ಕಾರ, ಇಲಾಖೆ ಮೂಲಭೂತ ಮತೀಯ ಸಂಘಟನೆಗೆ ಬೆಂಬಲ ನೀಡಿದರೆ ನಾವು ಸಹಿಸಲ್ಲ. ಮುಸಲ್ಮಾನ ವಿದ್ಯಾರ್ಥಿಗಳು ಇಷ್ಟು ವರ್ಷ ಇಲ್ಲದ ವಿವಾದ ಶುರು ಮಾಡಿದ್ದಾರೆ. ನೂರು ಮುಸಲ್ಮಾನ ಹೆಣ್ಮಕ್ಕಳಲ್ಲಿ ಎಂಟು ಮಂದಿಯದ್ದು ಮಾತ್ರವಲ್ಲ ತಕರಾರು, ಶಿಕ್ಷಣಕ್ಕೆ ಧಾರ್ಮಿಕತೆ ಬೆರೆಸಿದರೆ ಇದು ಸರಿಯಲ್ಲ.
ಸರ್ಕಾರ ಜಾತಿ ಮತ ಧರ್ಮದ ಎಲ್ಲೆ ಮೀರಲು ಸಮವಸ್ತ್ರ ತಂದಿದೆ. ವೈಯಕ್ತಿಕ ಸ್ವಾತಂತ್ರ್ಯ ಹೇಳುತ್ತಾ ಟೋಪಿ ಬುರ್ಖಾ, ಶರಿಯಾ ಕಾನೂನಿಗೆ ಒತ್ತಾಯಿಸುವ ಹುನ್ನಾರ ನಡೆಯುತ್ತಿದೆ. ಹಿಂದು ಜಾಗರಣ ವೇದಿಕೆ ಈವರೆಗೆ ಎಲ್ಲವನ್ನು ಸೂಕ್ಷ್ಮವಾಗಿ ನೋಡಿದೆ ಇನ್ನೂ ಈ ರೀತಿಯ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ.
ಇದನ್ನೂ ಓದಿ :
ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ರದ್ದು , ನೈಟ್ ಕರ್ಫ್ಯೂ ಜಾರಿ : ಸಚಿವ ಆರ್. ಅಶೋಕ್ – Vishwanews24
