ಉಡುಪಿ : ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ – Vishwanews24

Featured, ಉಡುಪಿ

ಉಡುಪಿ : ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ

ಉಡುಪಿ : ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದ ಉಡುಪಿಯ ಪುತ್ತೂರಿನ ಯುವತಿ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಉಡುಪಿಯ ಪುತ್ತೂರು ಗ್ರಾಮದ ನಿಟ್ಟೂರಿನ ಹನುಮಂತ ನಗರ ನಿವಾಸಿ ಧೃತಿ (23) ನಾಪತ್ತೆಯಾಗಿರುವ ಯುವತಿ. ಈಕೆ ಜ.23 ರಂದು ತಮ್ಮ ಮನೆಯಿಂದ ಬೆಂಗಳೂರಿನಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದರು. ಆ ಬಳಿಕ ನಿರಂತರ ಮನೆಯವರೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿ ಇದ್ದರು. ಆದರೆ ಫೆ.11 ರ ಸಂಜೆಯಿಂದ ಧೃತಿ‌ ಮನೆಯವರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.

ಇವರ ಬಗ್ಗೆ ಎಲ್ಲಾ ಕಡೆ ವಿಚಾರಿಸಿದರೂ ಈವರೆಗೂ ಪತ್ತೆಯಾಗಿಲ್ಲ ಎಂಬುದಾಗಿ ಧೃತಿ ಅವರ ತಾಯಿ ಮಮತಾ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply