ಉಡುಪಿ: ಬೆಡ್‌ಶೀಟ್ ಮಾರುವ ನೆಪದಲ್ಲಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಪರಾರಿಯಾದ ಅಪರಿಚಿತ – vishwanews24

Featured, ಉಡುಪಿ

ಉಡುಪಿ: ಬೆಡ್‌ಶೀಟ್ ಮಾರುವ ನೆಪದಲ್ಲಿ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಪರಾರಿಯಾದ ಅಪರಿಚಿತ

ಉಡುಪಿ : ಬೆಡ್‌ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಪರಾರಿಯಾಗಿರುವ ಘಟನೆ ಸೆ.14ರಂದು ಸಂಜೆ ವೇಳೆ ನಡೆದಿದೆ.

ಪಿರ್ಯಾದಿದಾರರಾದ ಕಿರಣ್ ಕಮಾರ್ ಜಿ(56), ಕೆಳಾರ್ಕಳಬೆಟ್ಟು, ಉಡುಪಿ ಇವರ ಸ್ನೇಹಿತ ಪ್ರವೀಣ್ ರವರು ದುಬೈನಲ್ಲಿ ಕೆಲಸವನ್ನು ಮಾಡಿಕೊಂಡಿದ್ದು, ಅವರ ತಾಯಿ ಉಡುಪಿಯ ಅಂಬಲಪಾಡಿ ಕಾರ್ತೀಕ್ ಹೋಟೆಲ್ ಎದುರು ಇರುವ ಶ್ಯಾಂ ಸದನದಲ್ಲಿ ವಿನೋದಿನಿ(82) ಎಂಬವರು ಒಂಟಿಯಾಗಿ ವಾಸ ಮಾಡಿಕೊಂಡಿದ್ದು, ಅಪರಿಚಿತ ವ್ಯಕ್ತಿಯು ಬೆಡ್ ಶೀಟನ್ನು ಮಾರುವ ನೆಪದಲ್ಲಿ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ವಿನೋದಿನಿರವರಿಗೆ ಬೆಡ್ ಶೀಟನ್ನು ತೆಗೆದುಕೊಳ್ಳು ವಂತೆ ಒತ್ತಾಯಿಸುತ್ತಿದ್ದನು.

ಇದನ್ನು ಗಮನಿಸಿದ ಮನೆಯ ಕೇರ್ ಟೇಕರ್ ಪ್ಲಂಬಿಂಗ್ ಕೆಲಸಕ್ಕೆ ಬಂದಿದ್ದ ಪ್ರಶಾಂತ್‌ರನ್ನು ಕರೆದಿದ್ದು, ವಾಪಸ್ಸು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಪರಾರಿಯಾಗಿ ಕಾರಿನಲ್ಲಿ ವೇಗವಾಗಿ ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply