ಉಡುಪಿ : ಬೈಲೂರು ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಿಸಿದ ದೈವಗಳಿಗೆ ನೂತನ ಶಿಲಾಮಯ ಆಲಯದಲ್ಲಿ ಪ್ರತಿಷ್ಠೆ-ಬ್ರಹ್ಮಕಲಶ-ನೇಮ-ತಂಬಿಲ : ಆಮಂತ್ರಣ ಪತ್ರಿಕೆ ಬಿಡುಗಡೆ – Vishwanews24

Featured, ಉಡುಪಿ

ಉಡುಪಿ : ಬೈಲೂರು ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಿಸಿದ ದೈವಗಳಿಗೆ ನೂತನ ಶಿಲಾಮಯ ಆಲಯದಲ್ಲಿ ಪ್ರತಿಷ್ಠೆ-ಬ್ರಹ್ಮಕಲಶ-ನೇಮ-ತಂಬಿಲ : ಆಮಂತ್ರಣ ಪತ್ರಿಕೆ ಬಿಡುಗಡೆ

300 ವರ್ಷದ ಇತಿಹಾಸ ಇರುವ ದೈವಗಳಿಗೆ ಪ್ರತಿಷ್ಠೆ- ಬ್ರಹ್ಮ ಕಲಶೋತ್ಸವ-ನೇಮೋತ್ಸವ

ಉಡುಪಿ: ಸುಮಾರು 300 ವರ್ಷಗಳ ಇತಿಹಾಸವಿರುವ ಬೈಲೂರು ಮಹಿಷ ಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಮೂಲ ಮೈಸಂದಾಯ, ಧೂಮವತಿ ಬಂಟ ಪಂಜುರ್ಲಿ ದೈವಗಳ ನೂತನ ಶಿಲಾಮಯ ಆಲಯದಲ್ಲಿ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಮಹಾ ಅನ್ನಸಂತರ್ಪಣೆ ನೇಮೋತ್ಸವ ಹಾಗೂ ತಂಬಿಲ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ಬೈಲೂರು ದೇವಸ್ಥಾನದ ಸಭಾಂಗಣದಲ್ಲಿ ನೆರವೇರಿತು.

ಮಾರ್ಚ್ 15ರಿಂದ ಆರಂಭಗೊಳ್ಳಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಬ್ರಹ್ಮ ಕಳಶೋತ್ಸವದ ಅಂಗವಾಗಿ ಇಂದು ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಠಿಯನ್ನ ಜೀರ್ಣೋದ್ಧಾರ ಹಾಗೂ ಆಡಳಿತ ಸಮಿತಿಯ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ನೆರವೇರಿಸಿದರು.

ಕಡಿಯಾಳಿ ಮಹಿಷ ಮರ್ದಿನಿ ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ನಾಗೇಶ್ ಹೆಗ್ಡೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ದೈವಸ್ಥಾನದ ನೂತನ ಶಿಲಾಮಯ ದೇಗುಲದ ಬಗ್ಗೆ ಶುಭನುಡಿಗಳನ್ನು ನುಡಿದರು.

ಉಡುಪಿ : ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ – Vishwanews24

ಸುಮಾರು 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಐದು ಗ್ರಾಮಗಳಿಗೆ ಸಂಬಂಧಪಟ್ಟ ದೈವವೂ ಇದಾಗಿದ್ದು ಬೈಲೂರು ಮಹಿಷಮರ್ದಿನಿ ದೇವಸ್ಥಾನಕ್ಕೆ ನಿಕಟ ಸಂಬಂಧ ಹೊಂದಿದೆ ಎಂದು ಐತಿಹಾಸ ಪುರಾಣವಿದೆ.

ಕೇರಳದ ಖ್ಯಾತ ಜ್ಯೋತಿಷ್ಯ ವಾಚಸ್ಪತಿ ಪೊದುವಾಲ್ ಮಾಧವನ್ ಅವರ ಪ್ರಶ್ನಾ ಚಿಂತನೆಯಲ್ಲಿ ಈ ದೈವಸ್ಥಾನದ ಜೀರ್ಣೋದ್ಧಾರ ಅಗತ್ಯವಾಗಿ ಮಾಡಬೇಕಾಗಿದೆ ಎಂಬ ವಿಚಾರ ಬಂದಾಗ ಗ್ರಾಮಸ್ಥರೆಲ್ಲರೂ ಸೇರಿ ದೈವಸ್ಥಾನದ ಜೀರ್ಣೋದರಕ್ಕೆ ಮುಂದಾಗಿದ್ದು ಊರ ಪರ ಊರ ಭಕ್ತ ಸಹಕಾರದಿಂದ ಈ ದೈವಸ್ಥಾನ ನಿರ್ಮಾಣಗೊಳ್ಳುತ್ತಿದೆ ಎಂದು ಮಟ್ಟಾರು ರತ್ನಾಕರ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಯಶ್ ಪಾಲ್ ಸುವರ್ಣ ನವೀನ್ ಭಂಡಾರಿ, ಕಿರಣ್ ಕುಮಾರ್ ಬೈಲೂರು, ದಿವಾಕರ್ ಶೆಟ್ಟಿ , ಜಯರಾಮ ಆಚಾರ್ಯ , ಮೋಹನ ಮುದ್ದನ್ನ ಶೆಟ್ಟಿ ದಿನೇಶ್ ಶೆಟ್ಟಿ, ನಾರಾಯಣ ಉಡುಪ , ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಭದ್ರಕೋಟೆ ಕರಾವಳಿ ಜಿಲ್ಲೆಗೆ ಅಮಿತ್ ಶಾ : ಫೆ. 11ಕ್ಕೆ ಪುತ್ತೂರಿಗೆ ಭೇಟಿ – Vishwanews24

Leave a Reply