ಉಡುಪಿ: ಬ್ರಹ್ಮಾವರ ವೃತ್ತ ಪೊಲೀಸ್ ನಿರೀಕ್ಷಕ ಸಹಿತ ಮೂವರಿಗೆ ಮುಖ್ಯಮಂತ್ರಿ ಪದಕ -Vishwanews24

Featured, ಉಡುಪಿ

ಉಡುಪಿ: ಬ್ರಹ್ಮಾವರ ವೃತ್ತ ಪೊಲೀಸ್ ನಿರೀಕ್ಷಕ ಸಹಿತ ಮೂವರಿಗೆ ಮುಖ್ಯಮಂತ್ರಿ ಪದಕ -Vishwanews24

ಬ್ರಹ್ಮಾವರ ವೃತ್ತ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ, ಉಡುಪಿ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಎಚ್‌ಸಿಗಳಾದ ಶಿವಾನಂದ ವಿ.ಶೆಟ್ಟಿ ಮತ್ತು ಬಿ.ಶಿವಾನಂದ ಆಯ್ಕೆ

ಉಡುಪಿ, : 2019ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕಾಗಿ ಬ್ರಹ್ಮಾವರ ವೃತ್ತ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ, ಉಡುಪಿ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಎಚ್‌ಸಿಗಳಾದ ಶಿವಾನಂದ ವಿ.ಶೆಟ್ಟಿ ಮತ್ತು ಬಿ.ಶಿವಾನಂದ ಆಯ್ಕೆಯಾಗಿದ್ದಾರೆ.

ಎಂ.ಎಸ್ಸಿ(ಬಯೋ ಸೈನ್ಸ್) ಸ್ನಾತಕೋತ್ತರ ಪದವೀಧರರರಾದ ಮಂಗಳೂರು ಮೂಲದ ಅನಂತ ಪದ್ಮನಾಭ, 2003ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ಅವರು ಎಸ್ಸೈ ಆಗಿ ದ.ಕ., ಉತ್ತರ ಕನ್ನಡ, ಬೆಂಗಳೂರು ಧಾರವಾಡ ಮತ್ತು 2011ರಿಂದ ಪೊಲೀಸ್ ನಿರೀಕ್ಷಕರಾಗಿ ಮಂಗಳೂರು, ಮುಲ್ಕಿ, ಮೂಡಬಿದರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಒಂದು ವರ್ಷ ದಿಂದ ಇವರು ಬ್ರಹ್ಮಾವರ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2005ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಕೋಟ ನಿವಾಸಿ ಬಿ. ಶಿವಾನಂದ, ಮಲ್ಪೆ ಪೊಲೀಸ್ ಠಾಣೆಯಲ್ಲಿ ಮತ್ತು 2009ರಿಂದ ಎಸ್ಪಿ ಕಚೇರಿಯಲ್ಲಿ ಅಪರಾಧ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಎಸ್ಪಿ ಕಚೇರಿಯ ಚುನಾವಣಾ ಕೋಶದಲ್ಲಿ ಮಾಡಿ ರುವ ಕಾರ್ಯವನ್ನು ಗುರುತಿಸಿ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ.

2002ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ಪಡುಬಿದ್ರಿ ನಿವಾಸಿ ಶಿವಾನಂದ ವಿ. ಶೆಟ್ಟಿ, ಉಡುಪಿ ಸಂಚಾರ ಪೊಲೀಸ್ ಠಾಣೆ ಮತ್ತು 2009 ರಿಂದ ಎಸ್ಪಿ ಕಚೇರಿಯ ಸಿಡಿಆರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಕ್ಷಿತ್ ಶೆಟ್ಟಿಗೆ ಈ ಬಾರಿಯ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ -Vishwanews24