ಉಡುಪಿ: ಮಗನೊಂದಿಗೆ ತಾಯಿ ನಾಪತ್ತೆ – vishwanews24

Featured, ಉಡುಪಿ

 ಉಡುಪಿ: ಮಗನೊಂದಿಗೆ ತಾಯಿ ನಾಪತ್ತೆ

 ಉಡುಪಿ,: ತೆಕ್ಕಟ್ಟೆ ಕೊಮೆಯಲ್ಲಿರುವ ತನ್ನ ಅಜ್ಜಿಯ ಮನೆಗೆ ಹೋಗುವುದಾಗಿ ತಿಳಿಸಿ, ಏಪ್ರಿಲ್ 5 ರಂದು ತನ್ನ 7 ವರ್ಷಧ ಮಗ ಭವಿಷ್ ಎಸ್ (7) ನೊಂದಿಗೆ ಹೋದ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನಿವಾಸಿ ಸ್ವಾತಿ (30) ಎಂಬ ಮಹಿಳೆಯು ಇದುವರೆಗೂ ಅಜ್ಜಿಯ ಮನೆಗೂ ಹೋಗದೇ ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ

ಸ್ವಾತಿ (30 ವರ್ಷ), 5 ಅಡಿ ಎತ್ತರ, ಸಾಧರಾಣ ಶರೀರ, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಭವಿಷ್ ಎಸ್ (7 ವರ್ಷ) 2.5 ಅಡಿ ಎತ್ತರ, ಸಾಧಾರಣ ಶರೀರ, ಎಣ್ಣೆಕಪ್ಪು ಮೈಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ.

ತಮಿಳುನಾಡು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಆಯ್ಕೆ – vishwanews24

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರು ಮೊ.ನಂ: 9480805468, ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರು ಮೊ.ನಂ: 9480805433 ಅಥವಾ ಉಡುಪಿ ಕಂಟ್ರೋಲ್ ರೂಂ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply