Featured

ಉಡುಪಿ : ಮದುವೆ ಸಮಾರಂಭಕ್ಕೆ ಆಗಮಿಸುವವರಿಗೆ ಪಾಸ್ ಕಡ್ಡಾಯ ; 50 ಜನರ ಪಟ್ಟಿ ನೀಡಲು ಆದೇಶ -Vishwanews24

ಉಡುಪಿ :ಮದುವೆ ಸಮಾರಂಭಕ್ಕೆ ಆಗಮಿಸುವವರಿಗೆ ಪಾಸ್ ಕಡ್ಡಾಯ ; 50 ಜನರ ಪಟ್ಟಿ ನೀಡಲು ಆದೇಶ -Vishwanews24

ಉಡುಪಿ : ರಾಜ್ಯಾದ್ಯಂತ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಪ್ರಭಾವವನ್ನು ನಿಯಂತ್ರಿಸುವ ಸಲುವಾಗಿ ಅನೇಕ ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅವುಗಳಲ್ಲಿ ಹೆಚ್ಚು ಜನ ಸೇರಬಹುದಾದ ಮದುವೆ ಕಾರ್ಯಕ್ರಮಕ್ಕೆ ವಿಧಿಸಿರುವ ನಿಯಮ ಕುರಿತಂತೆ ಸಾರ್ವಜನಿಕರಲ್ಲಿ
ಅನೇಕ ಗೊಂದಲ ಮೂಡಿತ್ತು.

ಯಾಕೆಂದರೆ ವಾರಂತ್ಯ ಲಾಕ್‌ಡೌನ್ ಆದೇಶದ ನಂತರ ವಾರಂತ್ಯದಲ್ಲೇ ಹೆಚ್ಚಾಗಿ ನಡೆಯುವ ವಿವಾಹ ಸಮಾರಂಭಗಳ ಕುರಿತು ಈಗಾಗಲೆ ನಿಗದಿಯಾಗಿರುವ ಮದುವೆ ಹಾಗೂ ಮುಂದೆ ನಡೆಯಬಹುದಾದ ಮದುವೆ ಕಾರ್ಯಕ್ರಮಗಳನ್ನು ಹೇಗೆ ನಡೆಸುವುದು, ಇದಕ್ಕೆ ಪ್ರತ್ಯೇಕ ನಿಯಮ ಇರಬಹುದೇ, ಪಾಸ್ ಪಡೆಯುವುದು ಹೇಗೆ ಹೀಗೆ ಅನೇಕ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಉಡುಪಿ: ಮೇ 4ರವರೆಗೆ ದೇವಸ್ಥಾನ, ಚರ್ಚ್, ಮಸೀದಿ ಬಂದ್ : ಜಿಲ್ಲಾಧಿಕಾರಿ -Vishwanews24

ಅದಕ್ಕೆ ಪೂರಕವಾಗಿ ಮದುವೆ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸಭಾಂಗಣದ ಒಳಗೆ ಹಾಗೂ ಹೊರಾಂಗಣಕ್ಕೆ ಎಂದು ಪ್ರತ್ಯೇಕ ಜನರ ಮಿತಿಯನ್ನು ಸರಕಾರ
ನಿಗದಿಪಡಿಸಿದೆ. ಇದರೊಂದಿಗೆ ಮದುವೆ ಸಮಾರಂಭಕ್ಕೆ ಆಗಮಿಸುವವರಿಗೆ ಪಾಸ್ ಕಡ್ಡಾಯ ಎಂದೂ ತಿಳಿಸಿದೆ. ಇದು ಸಾಕಷ್ಟು ಗೊಂದಲಕ್ಕೆ
ಕಾರಣವಾಗಿತ್ತು. ಮದುವೆಯ ಅನುಮತಿಗಾಗಿ ನಿಯೋಜಿತ ಅಧಿಕಾರಿಯ ಬಳಿಗೆ ಹೋಗಬೇಕು. ಮದುವೆಗೆ ಆಗಮಿಸುವ 50 ಮಂದಿಯ ಆಧಾರ್
ಕಾಡ್ರ್ನ್ನು ನೀಡಬೇಕು. ಅದರ ಆಧಾರದಲ್ಲಿ 50 ಪಾಸ್‌ಗಳನ್ನು ನೀಡಲಾಗುತ್ತದೆ. ಮದುವೆಗೆ ಆಗಮಿಸುವವರು ಪಾಸ್ ತೋರಿಸಿದರಷ್ಟೇ ಪೊಲೀಸರು
ಅವಕಾಶ ನೀಡುತ್ತಾರೆ.

ಮದುವೆ ಮನೆಗೆ ನೋಡೆಲ್ ಅಧಿಕಾರಿ ಬಂದಾಗ ಪಾಸ್ ರಹಿತರು ಇದ್ದರೆ, ಮಿತಿಗಿಂತ ಹೆಚ್ಚಿನ ಜನ ಇದ್ದರೆ ಕೇಸು ದಾಖಲಿಸಲಾಗುತ್ತದೆ ಎನ್ನುವುದು ಸದ್ಯದ
ನಿಯಮ, ಆಮಂತ್ರಣ ಪತ್ರಿಕೆ ನೀಡುವಾಗ ಆಧಾರ್ ಸಂಗ್ರಹಿಸುವ ಸಂಕಷ್ಟ ಒಂದೆಡೆಯಾದರೆ ಸೀಮಿತ ಪಾಸ್ ಪಡೆದು ಆಮಂತ್ರಿತರಿಗೆ ಬರಲು
ಸಾಧ್ಯವಾಗದೇ ಇದ್ದಾಗ ಬದಲಿಗೆ ಬೇರೆಯವರೂ ಬರುವಂತಿಲ್ಲ ಎಂಬ ಸಮಸ್ಯೆಯೂ ಇಲ್ಲಿ ಕಾಡುತ್ತಿದೆ. ಈ ನಡುವೆ ನಿಯಮಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಪ್ರತಿಕ್ರಿಯೆ ನೀಡಿದ್ದು ಮದುವೆಗೆ ಅನುಮತಿ ಪಡೆಯಲು ಸಮಾರಂಭಕ್ಕೆ ಆಗಮಿಸುವ 50 ಜನರ ಹೆಸರಿನ ಪಟ್ಟಿಯನ್ನಷ್ಟೇ ಸಂಬಂಧಪಟ್ಟ ಅಧಿಕಾರಿಗೆ ನೀಡಬೇಕು. ಅವರಿಗೆ ಪಾಸ್ ನೀಡಲಾಗುವುದು. ಆಧಾರ್ ಕಡ್ಡಾಯ ಅಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೆಸರು ಮಾತ್ರ ಪಡೆದುಕೊಳ್ಳುವಂತೆ ಸೂಚಿಸಲಾಗುವುದು ಎಂದು ತಿಳಿಸಿರೋದಾಗಿ ವರದಿಯಾಗಿದೆ.

ಕೋವಿಡ್ 19 : ಭಾರತದ ವಿಮಾನಗಳಿಗೆ ಇಂಗ್ಲೆಂಡ್‌, ಆಸ್ಟ್ರೇಲಿಯಾ, ಯುಎಇ ನಿರ್ಬಂಧ -Vishwanews24

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago