ಬೆಂಗಳೂರು : ವ್ಯಾಕ್ಸಿನೇಷನ್ ಬಗ್ಗೆ ಸರ್ಕಾರದಿಂದ ಕೆಲಸ ನಡೆಯುತ್ತಿದೆ. ಜನರು ಆತಂಕ, ಭಯ ಪಡುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಿನ್ನೆ ನೀಡಿರುವುದು ಹೊಸ ಮಾರ್ಗಸೂಚಿ ಅಲ್ಲ. ಮೊದಲ ಬಾರಿಗೆ ನೀಡಿದ ಮಾರ್ಗಸೂಚಿ ಅಂಶಗಳನ್ನೇ ನೀಡಲಾಗಿದೆ. ಕೆಲವರು ಮೊದಲ ಮಾರ್ಗಸೂಚಿ ಸರಿಯಾಗಿ ತಿಳಿದುಕೊಳ್ಳದೇ ತಪ್ಪು ಸಂದೇಶ ರವಾನಿಸ್ತಿದ್ದಾರೆ. ನಿನ್ನೆಯ ಮಾರ್ಗಸೂಚಿಯನ್ನು ಹೊಸದಾಗಿ ಬದಲಾಯಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಆಕ್ಸಿಜನ್, ವೆಂಟಿಲೇಟರ್ ಬೆಡ್ ಬೇಕಾಗಿದೆ. 2,500 ಬೆಡ್ ಗಳಿರುವ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಮಾಡ್ತೇವೆ. 800-1000 ವೆಂಟಿಲೇಟರ್ ಮಾಡ್ತೇವೆ. ಅತಿ ಶೀಘ್ರದಲ್ಲೇ ವೆಂಟಿಲೇಟರ್ ವ್ಯವಸ್ಥೆ ಮಾಡುತ್ತೇವೆ. ರೆಮ್ಡೆಸಿವಿರ್ ಔಷಧ ಅಗತ್ಯದಷ್ಟು ಸಪ್ಲೈ ಆಗಿದೆ. ಮೈಲಾನ್ ಕಂಪನಿಯಿಂದ ಬಯೋಕಾನ್ ಅಧ್ಯಕ್ಷೆ ಮುಜುಂದಾರ್ ಶಾ ರೊಂದಿಗೂ ಕೂಡ ಮಾತನಾಡಿದ್ದೇನೆ. ಈ ತಿಂಗಳಲ್ಲಿ ರೆಮ್ಡೆಸಿವರ್ ವಯಲ್ಸ್ ಕೊಡ್ತೇನೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ.
ಉಡುಪಿ : ಮದುವೆ ಸಮಾರಂಭಕ್ಕೆ ಆಗಮಿಸುವವರಿಗೆ ಪಾಸ್ ಕಡ್ಡಾಯ ; 50 ಜನರ ಪಟ್ಟಿ ನೀಡಲು ಆದೇಶ -Vishwanews24
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…