ಉಡುಪಿ: ಮದ್ಯ ಸೇವನೆ ಮಾಡಿ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ, ನಶೆಯಿಂದ ರಸ್ತೆಯಲ್ಲೇ ಬಿದ್ದ ಖಾಸಗಿ ಬಸ್ ಚಾಲಕ ; ಪ್ರಯಾಣಿಕರಿಂದ ಧರ್ಮದೇಟು – Vishwanews24
ಉಡುಪಿ: ಮದ್ಯ ಸೇವನೆ ಮಾಡಿ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ, ನಶೆಯಿಂದ ರಸ್ತೆಯಲ್ಲೇ ಬಿದ್ದ ಖಾಸಗಿ ಬಸ್ ಚಾಲಕ ; ಪ್ರಯಾಣಿಕರಿಂದ ಧರ್ಮದೇಟು
ಉಡುಪಿ: ಮದ್ಯ ಸೇವನೆ ಮಾಡಿದ ಖಾಸಗಿ ಬಸ್ ಚಾಲಕನೊಬ್ಬ ನಡುರಸ್ತೆಯಲ್ಲಿ ಬಸ್ ನಿಲ್ಲಿಸಿ, ನಶೆಯಿಂದ ಎದ್ದು ನಿಲ್ಲಲಾಗದೇ ರಸ್ತೆಯಲ್ಲೇ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಕುಂದಾಪುರ ಮೂಲದ ಭಾರತಿ ಬಸ್ಸಿನ ಚಾಲಕ ಕಂಠಪೂರ್ತಿ ಕುಡಿದು, ಕುಂದಾಪುರದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಬಸ್ಸಿಗೆ ಚಾಲಕನಾಗಿದ್ದ. ಮಾರ್ಗ ಮಧ್ಯೆ ಈತನ ತಲೆಗೆ ನಶೆ ಏರಿದ್ದು, ಈ ವೇಳೆ ಬಸ್ ನಿಲ್ಲಿಸಿ ಬಸ್‌ನಿಂದ ಇಳಿದು, ತೂರಾಡುತ್ತಾ ಹೊರಕ್ಕೆ ಬಂದು ರಸ್ತೆಯಲ್ಲೇ ಬಿದ್ದಿದ್ದಾನೆ.
ಬಸ್ ನಿಲ್ಲಿಸಿ ಈತ ಕೆಳಕ್ಕೆ ಇಳಿದ ಪರಿಣಾಮ ಭಾರೀ ಪ್ರಾಣಾಪಾಯ ತಪ್ಪಿದೆ. ಈ ನಡುವೆ ಮತ್ತೆ ಬಸ್ಸಿಗೆ ಬಂದು ಚಾಲನೆ ಮಾಡಲು ಮುಂದಾಗುತ್ತಿದ್ದಂತೆ ಪ್ರಯಾಣಿಕರೇ ಸೇರಿ ಧರ್ಮದೇಟು ನೀಡಿ, ಬಸ್ಸಿನ ಮಾಲಕರಿಗೆ ದೂರು ನೀಡಿದ್ದಾರೆ.
ಬಳಿಕ ಬೇರೆ ಚಾಲಕನನ್ನು ಕರೆಸಿಕೊಂಡು, ಪ್ರಯಾಣ ಮುಂದುವರಿಸಲಾಗಿದೆ.
ಚಾಲಕನ ಈ ರಾದ್ಧಾಂತವನ್ನು ಪ್ರಯಾಣಿಕರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದು ವೈರಲ್ ಆಗಿದೆ.
BSY ಭ್ರಷ್ಟಾಚಾರದ ಆರೋಪ : ಎಫ್ಐಆರ್ ದಾಖಲಿಸಿ ತನಿಖೆಗೆ ಕೋರ್ಟ್ ಆದೇಶ – Vishwanews24
