ಉಡುಪಿ: ಮನೆ ಕೆಲಸದ ಮಹಿಳೆಯ ಜೊತೆಯಲ್ಲಿ ಬಸ್ ಏರಿದ ಶ್ವಾನ – Vishwanews24

Featured, ಉಡುಪಿ

ಕೆಳಗಿಳಿಸಲು ನಿರ್ವಾಹಕನಿಂದ ಹರಸಾಹಸ

ಉಡುಪಿ: ಮನೆ ಕೆಲಸದ ಮಹಿಳೆಯ ಜೊತೆಯಲ್ಲಿ ಮಾಲೀಕರ ಮನೆಯ ಶ್ವಾನ ಬಸ್ ನಲ್ಲಿ ಪ್ರಯಾಣ ಬೆಳೆಸಲು ಮುಂದಾದ ಘಟನೆ ಉಡುಪಿ ಅಮ್ಮುಂಜೆಯ ಸರಸ್ವತಿ ನಗರದಲ್ಲಿ‌ ನಡೆದಿದೆ.

ಮನೆ ಕೆಲಸದಾಕೆಯ ಪ್ರೀತಿಯ ಆರೈಕೆಗೆ ಶ್ವಾನ ಮನಸೋತಿದ್ದು, ಆಕೆಯೊಂದಿಗೆ ತೆರಳಲು‌ ನಿರ್ಧರಿಸಿದೆ. ಅದರಂತೆ ಮಹಿಳೆಯೊಂದಿಗೆ ಬಸ್ ನಿಲ್ದಾಣದವರೆಗೂ ತೆರಳಿದ್ದು, ಬಸ್ ಬರುತ್ತಿದ್ದಂತೆ ಮಹಿಳೆಯೊಂದಿಗೆ ಬಸ್ ಏರಿದೆ.

ಬಸ್ ನಿರ್ವಾಹಕ ಶ್ವಾನವನ್ನು ಇಳಿಸಲು ಎಷ್ಟೇ‌ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್ ನಿಂದ ಕೆಳಗಿಯಲು ಒಪ್ಪಲಿಲ್ಲ. ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್ ನಿಂದ ಇಳಿದಾಗ ಶ್ವಾನ ಕೂಡ ಇಳಿಯಿತು. ಶ್ವಾನ ತನ್ನನ್ನು ಸಾಕಿದ ಮನೆಯ ಯಜಮಾನರನ್ನು ಬಿಟ್ಟು, ತನ್ನನ್ನು ಆರೈಕೆ ಮಾಡಿದ ಮಹಿಳೆಗೆ ತನ್ನ ಗೌರವ ನಿಯತ್ತನ್ನು ತೋರಿಸಿದೆ. ಈ ಘಟನೆ ಶ್ವಾನದ ನಿಷ್ಠೆಗೆ ಸಾಕ್ಷಿಯಾಯಿತು.

 ಮೇ 29 ರಂದು ಉಡುಪಿಯಲ್ಲಿ ‘ಉದ್ಯೋಗ ಮೇಳ’  – Vishwanews24

Leave a Reply