ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಹೆರಿಟೇಜ್ ಜ್ಯುವೆಲ್ಲರಿ ಶೋ ಚಾಲನೆ – vishwanews24

Featured, ಉಡುಪಿ

ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಹೆರಿಟೇಜ್ ಜ್ಯುವೆಲ್ಲರಿ ಶೋ ಚಾಲನೆ

ಉಡುಪಿ, : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶೋರೂಂನಲ್ಲಿ ಮಾ.೫ರವರೆಗೆ ಹಮ್ಮಿಕೊಳ್ಳಲಾಗಿರುವ ಹೆರಿಟೇಜ್ ಜ್ಯುವೆಲ್ಲರಿ ಶೋಗೆ ಬುಧವಾರ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಗ್ರಾಹಕರಾದ ಪೂಜಾ ಹೆಗ್ಡೆ ಹಾಗೂ ಪ್ರವೀಣ ಸುಕುಮಾರ್ ಶೆಟ್ಟಿ ಹೆರಿಟೇಜ್ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಪೂಜಾ ಹೆಗ್ಡೆ, ಮಲಬಾರ್ ಗೋಲ್ದ್ ನಲ್ಲಿ ವಿಭಿನ್ನ ಚಿನ್ನಾಭರಣಗಳ ಸಂಗ್ರಹ ಇದೆ. ಇಲ್ಲಿನ ಸೇವೆ ಗ್ರಾಹಕ ಸ್ನೇಹಿಯಾಗಿದೆ ಎಂದರು.

ಸಿಬ್ಬಂದಿ ನಿತ್ಯಾನಂದ ಹೆರಿಟೇಜ್ ಜ್ಯುವೆಲ್ಲರಿ ಬಗ್ಗೆ ಮಾಹಿತಿ ನೀಡಿದರು.ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ವ್ಯವಸ್ಥಾಪಕ ಮುಸ್ತಫಾ ಏ.ಕೆ,ಹರೀಶ್ ಎಂ ಜಿ, ಮಾರುಕಟ್ಟೆ ಉಸ್ತುವಾರಿ ತಂಝೀಮ್ ಶಿರ್ವ ಮೊದಲಾದವರು ಉಪಸ್ಥಿತರಿದ್ದರು. ಸಿಬ್ಬಂದಿ ವಿಘ್ವೇಶ್ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply