Featured

ಉಡುಪಿ : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ಶಿಕ್ಷಕರಿಗೆ ಗೌರವ ಪುರಸ್ಕಾರ – Vishwanews24

ಉಡುಪಿ : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ಶಿಕ್ಷಕರಿಗೆ ಗೌರವ ಪುರಸ್ಕಾರ

ಉಡುಪಿ:ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲೆಯ 5 ಹಿರಿಯ ಸಾಧಕ ಶಿಕ್ಷಕರಿಗೆ ಗೌರವ ಪುರಸ್ಕಾರ 2022 ನೀಡಿ ಗೌರವಿಸಲಾಯಿತು.

ಸೆಪ್ಟೆಂಬರ್ 5 ರಂದು ಉಡುಪಿಯ ಮಲಬಾರ್ ಅಂಡ್ ಗೋಲ್ಡ್ ಡೈಮಂಡ್ಸ್ ಶಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಭಟ್ (ಶಿಕ್ಷಣ ಹಾಗೂ ರಂಗಭೂಮಿ) , ರಾಜೇಂದ್ರ ಭಟ್ ಕೆ (ಶಿಕ್ಷಣ ಹಾಗೂ ನಿರೂಪಣೆ ) , ಪ್ರೊ. ನಾರಾಯಣ ಎಂ. ಹೆಗಡೆ (ಶಿಕ್ಷಣ ಹಾಗೂ ಸಂಘಟನೆ), ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ( ಶಿಕ್ಷಣ ಹಾಗೂ ಅರ್ಥಶಾಸ್ತ್ರ) , ಡಾ. ರೇಖಾ ವಿ. ಬನ್ನಾಡಿ (ಶಿಕ್ಷಣ ಹಾಗೂ ಸಾಹಿತ್ಯ ) ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಈ ಪುರಸ್ಕಾರ ನೀಡಲಾಯಿತು.

ಸಭಾಧ್ಯಕ್ಷತೆಯನ್ನು ವಹಿಸಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಪ್ರೊ . ಎಂ. ಎಲ್ ಸಾಮಗ ಮಾತನಾಡಿ ಶಿಕ್ಷಕರ ಸೇವೆ ಬಹುದೊಡ್ಡ ಸೇವೆ ಸಮಾಜದಲ್ಲಿ ಅವರನ್ನು ಗುರುತಿಸಿ ಗೌರವಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಹಾಗೂ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶ್ಲಾಘನೀಯ ಕೆಲಸ ಮಾಡಿದೆ ಎಂದರು .

ಸಮಾರಂಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ,ಅಧ್ಯಕ್ಷರಾದ ಪ್ರೊ. ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಇದರ ವ್ಯವಸ್ಥಾಪಕ ಹಫೀಝ್ ರೆಹಮಾನ್ , ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್. ಪಿ ಉಪಸ್ಥಿತರಿದ್ದು , ಹಾಸ್ಯ ಭಾಷಣಕಾರರಾದ ಸಂಧ್ಯಾ ಶೆಣೈ ಸ್ವಾಗತಿಸಿ ಶ್ರೀನಿವಾಸ್ ಉಪಾಧ್ಯ ವಂದಿಸಿ,ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

Vishwa News 24

Recent Posts

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

17 hours ago

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO – vishwanews24

ಮಂಗಳೂರು: MRPL ಅಪಘಾತದಲ್ಲಿ ಮೃತಪಟ್ಟ ಮನೀಶ್ ಕರ್ಕಡ ಕುಟುಂಬಕ್ಕೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದ EPFO ಮಂಗಳೂರು: ರಿಫೈನರಿ &…

18 hours ago

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ – vishwanews24

ಗೃಹಲಕ್ಷ್ಮಿ ಯೋಜನೆ ಮರುಪರಿಶೀಲನೆ : ಹೊಸ ಅರ್ಜಿ, ಹೊಸ ಷರತ್ತುಗಳು ; ಈ ದಾಖಲೆಗಳು ಕಡ್ಡಾಯ  ಬೆಂಗಳೂರು: ಕರ್ನಾಟಕ ಸರ್ಕಾರದ…

18 hours ago

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ – vishwanews24

ಉಡುಪಿ: ಉದ್ಯೋಗಕ್ಕಾಗಿ ಅಲೆದಾಡುವ ಯುವಜನರ ಬಳಿಗೇ ಉದ್ಯೋಗಾವಕಾಶ : ಡಾ. ಕೆ. ಪ್ರಕಾಶ್ ಶೆಟ್ಟಿ ಉಡುಪಿ: ಯುವಜನರು ನಿರಂತರ ಪ್ರಯತ್ನದ…

18 hours ago

ಮಂಗಳೂರು:ಕೋರಿಯರ್ ಮೂಲಕ ಎಂಡಿಎಂಎ ಸಾಗಾಟದ ಜಾಲ ಪತ್ತೆ: ₹1.58 ಕೋಟಿ ಮೌಲ್ಯದ ಮಾದಕವಸ್ತು ವಶ – vishwanews24

ಕೋರಿಯರ್ ಮೂಲಕ ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಸಾಗಾಟ.. ಮಂಗಳೂರು ಸಿಸಿಬಿ ಬಲೆಗೆ ಮೂವರು ಆರೋಪಿಗಳು; ₹1.58 ಕೋಟಿ ಮೌಲ್ಯದ ಸೊತ್ತು…

18 hours ago

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ – vishwanews24

ಮಂಗಳೂರು:  ಅನುಮಾನಾಸ್ಪದ ಸಾವು ಪ್ರಕರಣ ; ಎರಡು ತಿಂಗಳ ಬಳಿಕ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಂಗಳೂರು: ಅನುಮಾನಾಸ್ಪದ…

19 hours ago