Featured

ಉಡುಪಿ: ಮಸೂದ್ , ಫಾಝಿಲ್  ಕುಟುಂಬಕ್ಕೆ ಯಾವುದೇ ಪರಿಹಾರ ಘೋಷಣೆಯನ್ನೂ ಮಾಡಲಿಲ್ಲ ಇದು ಖಂಡನೀಯ : ಸರಕಾರಕ್ಕೆ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ – Vishwanews24

ತಾರತಮ್ಯ ಬಿಟ್ಟು ರಾಜ್ಯದ ಆರು ಕೋಟಿ ಜನತೆಯ ಸರಕಾರದಂತೆ ವರ್ತಿಸಿ..

ಪ್ರವೀಣ್ ಕೊಲೆಗಾರರ ಹುಡುಕಾಟದಲ್ಲಿ ತೀವ್ರತೆ , ಮಸೂದ್ ಮತ್ತು ಫಾಝಿಲ್’ನ ಕೊಲೆಗಾರರ ಹುಡುಕಾಟದಲ್ಲಿ ಉದಾಸಿನತೆ..

ಕೇವಲ ಒಂದು ವರ್ಗದ ಮುಖ್ಯಮಂತ್ರಿಯಂತೆ ಬಸವರಾಜ ಬೊಮ್ಮಾಯಿ ವರ್ತಿಸುತ್ತಿರುವುದು ರಾಜ್ಯದ ಭವಿಷ್ಯವನ್ನು ಅಂಧಕಾರದತ್ತ ತಳ್ಳುವಂತಿದೆ..

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್..

ಉಡುಪಿ: ನಮ್ಮ ನೆರೆಯ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕೆಲವೇ ಕೆಲವು ದಿನಗಳ ಅಂತರದಲ್ಲಿ ಮಸೂದ್,ಪ್ರವೀಣ ಹಾಗೂ ಪಾಝಿಲ್ ಎಂಬ ಮೂವರು ಯುವಕರ ಅತ್ಯಮೂಲ್ಯ ಜೀವಗಳನ್ನು ದ್ವೇಷದ ರಾಜಕೀಯವು ಹೊಸಕಿ ಹಾಕಿದೆ. ಈ ಕೊಲೆಗಳು ಆ ಯುವಕರ ಕುಟುಂಬಗಳನ್ನು ದುಃಖದ ಮಡುವಿನಲ್ಲಿ ಮುಳಗಿಸಿದ್ದಲ್ಲದೆ ಆ ಕುಟುಂಬಗಳ ಆಧಾರ ಸ್ತಂಭಗಳನ್ನು ಕೆಡವಿಹಾಕಿ ಅತಂತ್ರ ಸ್ಥಿತಿಗೆ ದೂಡಿದೆ. ಇಷ್ಟೇ ಅಲ್ಲ ಸಮಾಜದಲ್ಲಿ ದ್ವೇಷ, ಅಪನಂಬಿಕೆಗಳಿಗೆ ಇಂಧನವನ್ನು ಸುರಿದು ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಈ ಸಮಾಜಘಾತುಕ ಕೃತ್ಯಗಳನ್ನು ಮತ್ತು ಸರಕಾರದ ಭದ್ರತಾಲೋಪಗಳನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.

ಅದೇ ಸಂದರ್ಭದಲ್ಲಿ ರಾಜ್ಯ ಸರಕಾರದ ಪಕ್ಷಪಾತದಿಂದ ಕೂಡಿದ ನಿಲುವೂ ಪ್ರಶ್ನಾರ್ಹ. ರಾಜ್ಯದ ಆರು ಕೋಟಿ ಜನರ ಮುಖ್ಯಮಂತ್ರಿ ಎಂಬುದನ್ನು ಮರೆತು ಕೇವಲ ಒಂದು ವರ್ಗದ ಮುಖ್ಯಮಂತ್ರಿಯಂತೆ ಬಸವರಾಜ ಬೊಮ್ಮಾಯಿ ವರ್ತಿಸುತ್ತಿರುವುದು ರಾಜ್ಯದ ಭವಿಷ್ಯವನ್ನು ಅಂಧಕಾರದತ್ತ ತಳ್ಳುವಂತಿದೆ. ಬೆಳ್ಳಾರೆಯ ಕೊಲೆಗೈಯಲ್ಪಟ್ಟ ಪ್ರವೀಣನ ಮನೆ ಭೇಟಿ ನೀಡಿ ಪರಿಹಾರ ಘೋಷಿಸಿದ ಮುಖ್ಯಮಂತ್ರಿಗಳು ಇದಕ್ಕಿಂತ ಮೊದಲು ಕೊಲೆಯಾದ ತರುಣ ಮಸೂದ್’ನ ಕುಟುಂಬಕ್ಕೆ ಪರಿಹಾರ ಘೋಷಿಸುವುದು ಬಿಡಿ ಆತನ ಮನೆ ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸುವ ಪ್ರಯತ್ನನ್ನು ಮಾಡಲಿಲ್ಲ. ಮೃತ ಯುವಕ ಫಾಝಿಲ್’ನ ಕುಟುಂಬಕ್ಕೂ ಯಾವುದೇ ಪರಿಹಾರ ಘೋಷಣೆಯನ್ನೂ ಮಾಡಲಿಲ್ಲ ಇದು ಖಂಡನೀಯ ಧೋರಣೆಯಾಗಿದೆ.

ಇದನ್ನೂ ಓದಿ : ಜೀವ ಬೆದರಿಕೆ ಹಿನ್ನೆಲೆ: ಶಸ್ತ್ರಾಸ್ತ್ರ ಪರವಾನಗಿ ಪಡೆದ ಸಲ್ಮಾನ್‌ ಖಾನ್‌ – Vishwanews24 

ಪ್ರವೀಣನ ಕೊಲೆಗಾರರ ಹುಡುಕಾಟದಲ್ಲಿ ತೀವ್ರತೆ ತೋರಿದರೆ ಮಸೂದ್ ಮತ್ತು ಫಾಝಿಲ್’ನ ಕೊಲೆಗಾರರ ಹುಡುಕಾಟದಲ್ಲಿ ಉದಾಸಿನತೆಯಲ್ಲಿ ಇದ್ದಂತೆ ಮೇಲ್ನೋಟಕ್ಕೆ ಅರಿವಾಗುತ್ತದೆ. ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಖಾತ್ರಿ ಪಡಿಸಬೇಕಾದ ಜವಾಬ್ದಾರಿಯ ಸ್ಥಾನದಲ್ಲಿರುವ ಗೃಹಮಂತ್ರಿಗಳು, ಬೊಮ್ಮಾಯಿ ಸಂಪುಟದ ಇತರ ಮಂತ್ರಿಗಳು, ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದ ಕೆಲವು ಪ್ರಮುಖರು ನೀಡುತ್ತಿರುವ ಕೆಲವು ಹೇಳಿಕೆಗಳು ರಾಜ್ಯದ ಶಾಂತಿ ಸುವ್ಯವಸ್ಥೆಗೆ ವಿರುದ್ಧವಾಗಿದ್ದು ಜನಜೀವನವನ್ನು ಇನ್ನಷ್ಟು ಗೊಂದಲಮಯ ಗೊಳಿಸುತ್ತದೆ. ಆದ್ದರಿಂದ ರಾಜ್ಯದ ಆಡಳಿತದ ಹೊಣೆಹೊತ್ತವರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟವು ರಾಜ್ಯ ಸರಕಾರ ಮತ್ತು ಆಡಳಿತ ಪಕ್ಷವನ್ನು ಆಗ್ರಹಿಸುತ್ತದೆ.

ಸರಕಾರ ಮತ್ತು ಪೋಲಿಸ್ ವ್ಯವಸ್ಥೆ ಜವಾಬ್ದಾರಿಯುತವಾಗಿ ನಡೆದುಕೊಂಡು ಆದಷ್ಟು ಬೇಗ ಕರಾವಳಿಯ ಹಾಗೂ ನಾಡಿನ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ ಜನಸಾಮಾನ್ಯರಿಗೆ ಸೂಕ್ತ ಭದ್ರತೆಯನ್ನು ನೀಡಿ ವಾತವರಣವನ್ನು ತಿಳಿಗೊಳಿಸಬೇಕಾಗಿ ಮುಸ್ಲಿಮ್ ಒಕ್ಕೂಟ ಒತ್ತಾಯಿಸುತ್ತದೆ. ಅದೇ ಸಂದರ್ಭದಲ್ಲಿ ಕೊಲೆಗಾರರು ಮತ್ತು ಸಮಾಜದ್ರೋಹಿ ಶಕ್ತಿಗಳ ವಿರುದ್ಧ ತನಿಖೆಯನ್ನು ತೀವ್ರಗೊಳಿಸಿ ತಪ್ಪಿತಸ್ಥರನ್ನು ಕಾರಾಗೃಹಕ್ಕೆ ತಳ್ಳಬೇಕು. ಶಾಂತಿ ಕದಡುವ ಉದ್ರೇಕಕಾರಿ ಭಾಷಣಗಳು, ಹೇಳಿಕೆಗಳ ಮೂಲಕ ಉದ್ವಿಗ್ನತೆ ಸೃಷ್ಟಿಸುವವರು, ಸಾಮಾಜಿಕ ಜಾಲತಾಣಗಳನ್ನು ದ್ವೇಷ ಹರಡಲು ಬಳಸುತ್ತಿರುವವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಕೋಟ ಇಬ್ರಾಹಿಂ ಸಾಹೇಬ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಕಟೀಲು ವಾಹನ ಪಾರ್ಕಿಂಗ್ ಶುಲ್ಕ : ತಾತ್ಕಾಲಿಕ ತಡೆ – Vishwanews24 

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

9 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

10 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

10 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

10 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

10 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

1 day ago