ಉಡುಪಿ : ಮಹಿಳೆ ನಾಪತ್ತೆ – vishwanews24

Featured, ಉಡುಪಿ

ಉಡುಪಿ : ಮಹಿಳೆ ನಾಪತ್ತೆ

   ಉಡುಪಿ: ಮಣಿಪಾಲದಲ್ಲಿ ಮನೆ ಕೆಲಸ ಮಾಡಿಕೊಂಡಿದ್ದ ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರಿನಲ್ಲಿ ವಾಸವಿದ್ದ ಮಾದೇವಿ (38) ಎಂಬ ಮಹಿಳೆಯು ಜೂನ್ 14 ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು, ಕೆಲಸಕ್ಕೂ ಹೋಗದೇ, ಸಂಬ0ಧಿಕರ ಮನೆಗೂ ತೆರಳದೇವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ.

  5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಉತ್ತರ ಕರ್ನಾಟಕ ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.

Leave a Reply