ಉಡುಪಿ : ಮಿಥುನ್ ರೈ ಎಲ್ಲಿದ್ದಾರೆ; ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ : ಶೋಭಾ ಕರಂದ್ಲಾಜೆ ತಿರುಗೇಟು – Vishwanews24
ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ ತೆಗೆಯಿರಿ
ಉಡುಪಿ: ಕೆಲ ದಿನಗಳ ಹಿಂದೆ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರು ಸಚಿವೆ ಶೋಭಾ ಕರಂದ್ಲಾಜೆ ಕಂಡರೆ ಪೋಟೋ ತೆಗೆದು ಕಳುಹಿಸಿ. ನಾನು ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಶೋಭಾ ಅವರು, ಮಿಥುನ್ ರೈ ಎಲ್ಲಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಮೊದಲು ಅವರು ಬರಲಿ ಎಂದು ಸವಾಲೆಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಡುಪಿಗೆ ಬಂದಿದ್ದೇನೆ ಬನ್ನಿ ಎಲ್ಲರೂ ಸೆಲ್ಫಿ ತೆಗೆಯಿರಿ. ಅವ ಎಲ್ಲಿ ಮಿಥುನ್ ರೈ ಅವನು ಬರಲಿ ಎಂದು ಸಚಿವೆ ಗರಂ ಆಗಿ ಹೇಳಿದ್ದಾರೆ. ಇದನ್ನೂ ಓದಿ:ಎಚ್ಚರಿಕೆಯ ನಡೆ ಅಗತ್ಯ.. ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564

ಬರಲಿ ಎಲ್ಲರೂ ಸೆಲ್ಫಿ ತೆಗೆಯಲು ಬರಲಿ. ಅವನು ಮಿಥುನ್ ರೈ ಫಸ್ಟ್ ಬರಲಿ. ಈ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಅವನನ್ನು ಯಾಕೆ ದೊಡ್ಡ ಮನುಷ್ಯ ಮಾಡಬೇಕು. ಅವನು ಚಿಲ್ಲರೆ ಮನುಷ್ಯ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ? ..
