ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ ಕೇಂದ್ರ ಸಚಿವರಿಗೆ ಮನವಿ – vishwanews24
ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ ಕೇಂದ್ರ ಸಚಿವರಿಗೆ ಮನವಿ
ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ ವಿಶೇಷ ಕ್ರಮ ವಹಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾ| ಬ್ರಿಜೇಶ್ ಚೌಟ ನೇತೃತ್ವದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಜತೆಗೂಡಿ ಹೊಸದಿಲ್ಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಹದೀiಪ್ ಸಿಂಗ್ ಪುರಿ ಹಾಗೂ ಮೀನುಗಾರಿಕೆ ಸಚಿವ ರಾಜೀವ್ ರಂಜನ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಕರಾವಳಿ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆ ಬೋಟ್‌ಗಳಿಗೆಡೀಸೆಲ್ ಕೊರತೆಯಿಂದ ಬಹುತೇಕ ಮೀನುಗಾರಿಕೆ ಚಟುವಟಿಕೆ ಸ್ತಬ್ಧಗೊಂಡಿದೆ. ಪರಿಸ್ಥಿತಿ ಹೀಗೆ ಮುಂದು ವರಿದರೆ ಮೀನುಗಾರಿಕೆಯನ್ನೇ ಅವಲಂಬಿಸಿರುವ ಲಕ್ಷಾಂತರ ಜನರ ಜನಜೀವ ನೋಪಾಯಕ್ಕೆ ಸಮಸ್ಯೆ ಯಾಗಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ:
ಕಟಪಾಡಿ ಅಂಡರ್‌ಪಾಸ್ : ವಾರದೊಳಗೆ ವಾಹನ ಸಂಚಾರಕ್ಕೆ ಮುಕ್ತ – vishwanews24
ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು, ದೇಶದ ಡೀಸೆಲ್ ದಾಸ್ತಾನು ಪ್ರಮಾಣಕ್ಕೆ ಅನುಗುಣವಾಗಿ ಮೀನುಗಾರಿಕೆ ವಲಯಕ್ಕೆ ಅಗತ್ಯ ಪ್ರಮಾಣದ ನಿರಂತರ ಡೀಸೆಲ್ ಪೂರೈಕೆಗೆ ವಿಶೇಷ ಆದ್ಯತೆ ನೀಡಲು ಪ್ರಯತ್ನಿಸಲಾಗುವುದು ಎಂದರು.ಮಲ್ಪೆ ಯಾರ್ಡ್ ಸಹಕಾರಿ ಸಂಘದ ಉಪಾಧ್ಯಕ್ಷ ಶಿವಪ್ರಸಾದ್ ಕೋಟ್ಯಾನ್ ಉಪಸ್ಥಿತರಿದ್ದರು.
