Featured

ಉಡುಪಿ: ರಘುಪತಿ ಭಟ್ ಆಸ್ತಿ 21 ಕೋಟಿ ; ಸಾಲ 4 ಕೋಟಿ  – vishwanews24

ಉಡುಪಿ: ರಘುಪತಿ ಭಟ್ ಆಸ್ತಿ 21 ಕೋಟಿ ; ಸಾಲ 4 ಕೋಟಿ

ಉಡುಪಿ: ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಅವರು ಕಣಕ್ಕೆ ಇಳಿಯಲು ಚುನಾವಣಾ ಅಧಿಕಾರಿಗಳಿಗೆ ತಮ್ಮ ಆಸ್ತಿಯ ವಿವರಗಳನ್ನು ನೀಡಿದ್ದಾರೆ.

ಚುನಾವಣಾಧಿಕಾರಿಗೆ ಗುರುವಾರ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಚರಾಸ್ತಿ ಮತ್ತು ಸ್ಥಿರಾಸ್ತಿ ಸೇರಿ ಒಟ್ಟು 21,41,80,000 ಮೊತ್ತದ ಆಸ್ತಿ ಇದ್ದು, ಮನೆ ಮತ್ತು ವಾಹನಕ್ಕಾಗಿ ₹4,10,92,000 ಸಾವಿರ ಸಾಲ ಮಾಡಿರುವುದಾಗಿ ಅವರು ಘೋಷಿಸಿದ್ದಾರೆ. ಅವರ ಚರಾಸ್ತಿ 8,19,80,000 ಆಗಿದ್ದು ಸ್ಥಿರಾಸ್ತಿ 9,76,00,000 ಹೊಂದಿದ್ದಾರೆ. ಪತ್ನಿ ಶಿಲ್ಪಾ ಭಟ್ ಅವರ ಚರಾಸ್ತಿ 1, 11, 24,000. ಪುತ್ರರಿಬ್ಬರಲ್ಲಿ ಒಟ್ಟು ₹21 ಲಕ್ಷ ಇದೆ ಎಂದು ತಿಳಿದು ಬಂದಿದೆ.

ಹಾಗೂ 1 ಎಕರೆ 73 ಸೆಂಟ್ಸ್ ಕೃಷಿಯೇತರ ಜಮೀನು ಮತ್ತು 30 ಸೆಂಟ್ಸ್ ಕೃಷಿ ಜಮೀನು ಹೊಂದಿರುವ ರಘುಪತಿ ಭಟ್ ಅವರು 65 ಸೆಂಟ್ಸ್ ಅಳತೆಯ ನಿವೇಶನ ಹೊಂದಿದ್ದಾರೆ. ಮನೆ ಸಾಲ ₹1, 68,00,000 ಬಾಕಿ ಇದೆ. ವಾಹನ ಸಾಲ ₹11 ಲಕ್ಷ ಕಟ್ಟಬೇಕಿದೆ. ಯಾವುದೇ ಕ್ರಿಮಿನಲ್ ಕೇಸ್ ಕೂಡ ಹೊಂದಿಲ್ಲದ ರಘುಪತಿ ಭಟ್ ಅವರ ಬಳಿ ₹6,68,915, ಪತ್ನಿ ಶಿಲ್ಪಾ ಬಳಿ ₹42,000 ಮತ್ತು ಮಕ್ಕಳ ಬಳಿ ಒಟ್ಟು ₹8 ಸಾವಿರ ನಗದು ಇದೆ ಎಂದು ತಿಳಿದು ಬಂದಿದೆ.

ಉಡುಪಿಯ ಮಹಾಲಕ್ಷ್ಮಿ ಕೊ ಆಪರೇಟಿವ್ ಬ್ಯಾಂಕ್, ಹಿರಣ್ಯ ಬಿಲ್ಡರ್ಸ್, ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್, ಭಾರತ್ ಬಯೊ ಐಎಂಎಂ, ಕೇದಾರೋತ್ಥಾನ ಕೃಷಿ ಉತ್ಪಾದಕರ ಸಂಘ, ತರ್ಜನಿ ಇನ್ಸೂರೆನ್ಸ್, ಅದಾನಿ ದೆ ಗ್ರೀನ್ ಎನರ್ಜಿ, ಅದಾನಿ ಸಿಮೆಂಟ್ ಮತ್ತು ಡೆಲ್ಟಾ ಕಾರ್ಪ್‌ನಲ್ಲಿ ಕುಟುಂಬದ ಅನೇಕ ಷೇರುಗಳು ಇವೆ. ಇಬ್ಬರು ವ್ಯಕ್ತಿಗಳು, 5 ಸಂಸ್ಥೆಗಳಿಗೆ ಲಕ್ಷಾಂತರ ಮೊತ್ತದ ಸಾಲ ನೀಡಿದ್ದಾರೆ.

ಅವರ ಬಳಿ ₹16 ಲಕ್ಷ ಬೆಲೆಯ ಟಾಟಾ ನೆಕ್ಸಾನ್ ಇವಿ, ₹12 ಲಕ್ಷದ ಟೊಯೊಟ ಇನೋವ, ₹6 ಸಾವಿರ ಬೆಲೆಯ ಹೊಂಡಾ ಆ್ಯಕ್ಟಿವಾ ವಾಹನ ಗಳು ಇದ್ದು. ಪತ್ನಿ, ಪುತ್ರರ ಹೆಸರಿನಲ್ಲಿ ವಾಹನಗಳಿಲ್ಲ. ಭಟ್ ಅವರಲ್ಲಿ 400 ಗ್ರಾಂ ಚಿನ್ನ ಮತ್ತು 11 ಕಿಜಿ ಬೆಳ್ಳಿ, ಪತ್ನಿ ಬಳಿ 500 ಗ್ರಾಂ ಚಿನ್ನ ಇದೆ ಎಂಬ ಮಾಹಿತಿ ಲಭ್ಯವಾಗಿದೆ.

 

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

7 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

8 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

8 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

9 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

9 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

9 hours ago