Featured

ಉಡುಪಿ : ರಘುಪತಿ ಭಟ್ ಪ್ರಯತ್ನದಿಂದ ಕೃಷಿ ವಲಯದಲ್ಲಿ ಮನೆ ಕಟ್ಟಲು ಅವಕಾಶ – ಕೆ ರಾಘವೇಂದ್ರ ಕಿಣಿ ಹರ್ಷ – Vishwanews24

ಉಡುಪಿ : ರಘುಪತಿ ಭಟ್ ಪ್ರಯತ್ನದಿಂದ ಕೃಷಿ ವಲಯದಲ್ಲಿ ಮನೆ ಕಟ್ಟಲು ಅವಕಾಶ ಕೆ ರಾಘವೇಂದ್ರ ಕಿಣಿ ಹರ್ಷ

ಉಡುಪಿ:  ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕೃಷಿ ವಲಯ ಅಥವಾ ಅಗ್ರಿಕಲ್ಚರ್ ಝೋನಲ್ಲಿ ಸಣ್ಣ ಹಿಡುವಳಿದಾರರಿಗೆ(ಭೂ ಮಾಲಕರಿಗೆ) ಸ್ವಂತ ಸೂರನ್ನು ಕಟ್ಟಿಕೊಳ್ಳಲು ವಲಯ ನಿಯಮಾವಳಿಗಳಲ್ಲಿ ಅವಕಾಶ ಇರಲಿಲ್ಲ. ಇದೀಗ ಉಡುಪಿ ಶಾಸಕ ಕೆ ರಘುಪತಿ ಭಟ್ ಇವರ ಭಗೀರಥ ಪ್ರಯತ್ನದಿಂದ ಕೃಷಿ ವಲಯದಲ್ಲಿ10ಸೆಂಟ್ಸು ಜಾಗ ಮತ್ತು 3000 ಚದರಅಡಿ ತನಕ ಸ್ವಂತ ಮನೆ ಕಟ್ಟಲು ಅವಕಾಶ ಸಿಕ್ಕಿರುವುದಕ್ಕೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನು ವಿಶ್ಲೇಷಿಸಿದ ಇವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಇರುವುದಿಲ್ಲ. ಇಲ್ಲಿ ತುಂಡು ಭೂಮಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಇರುತ್ತದೆ. ಪೂರ್ವಜರು ತಮ್ಮ ಕುಟುಂಬದ ಉಪಯೋಗಕ್ಕಾಗಿ ತಾವು ಅವಲಂಬಿತ ಕೃಷಿಭೂಮಿಗಳನ್ನೇ ತುಂಡು ಭೂಮಿಗಳಾಗಿ ರಚಿಸಿರುತ್ತಾರೆ. ಅಂತಹ ಕೆಲವು ಭಾಗಗಳು ಮತ್ತು ಇನ್ನಿತರವನ್ನು ಸೇರಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯಗಳನ್ನಾಗಿ ಗುರುತಿಸಿರುತ್ತಾರೆ. ಆಗ ಝೋನಲ್ಲಿ ಸಾರ್ವಜನಿಕರಿಗೆ ಮನೆ ಕಟ್ಟಲು ಅವಕಾಶ ಇರುವುದಿಲ್ಲ. ಸಾವಿರಾರು ಜನರು ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಲು ಅವಕಾಶವಿಲ್ಲದೆ ಪರದಾಡುತ್ತಿದ್ದರು. ಈ ಹಿಂದೆ ಉಡುಪಿ ಪ್ರಾಧಿಕಾರದ ಸಭೆಯಲ್ಲಿ ಇಂತಹ ಮನೆಗಳಿಗೆ ಅವಕಾಶ ನೀಡಲಾಗುತಿತ್ತು. ಆದರೆ ಇದಕ್ಕೆ ZRನಲ್ಲಿ ಅವಕಾಶವಿರುವುದಿಲ್ಲ

ಹೀಗೆ ಸುಮಾರು ವರ್ಷಗಳಿಂದ ಉಡುಪಿಯ ಸಾವಿರಾರು ಮಂದಿಗೆ ತಮ್ಮ ಸ್ವಂತ ಸೂರುಗಳನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಶ್ರೀಮಂತ ಹಿಡುವಳಿದಾರರು ಬೆಂಗಳೂರಿಗೆ ತೆರಳಿ ವಲಯ ಬದಲಾವಣೆ ಮಾಡಿಕೊಂಡು ಬರುತ್ತಿದ್ದರು. ಆದರೆ 10 ಸೆಂಟ್ಸ್ ಒಳಗಿನ ಸಾರ್ವಜನಿಕರಿಗೆ / ಬಡವರಿಗೆ ಇದು ಕಷ್ಟ ಸಾಧ್ಯವಿತ್ತು. ಇದೀಗ ಸರಕಾರ ವಲಯ ನಿಯಮಾವಳಿಗಳನ್ನೇ ತಿದ್ದುಪಡಿ ಮಾಡಿ ಆದೇಶ ಹೊರಡಿಸಿ 3000ಚದರ ಅಡಿ ತನಕ ಮನೆ ಕಟ್ಟಲು ಅವಕಾಶ ನೀಡಿದ್ದು ಮತ್ತು ನೆಲಮಹಡಿ ಮತ್ತು ಮೊದಲ ಮಹಡಿ ಮನೆ ಕಟ್ಟಲು ಅವಕಾಶ ನೀಡಿರುತ್ತಾರೆ. 5 ರಿಂದ 7 ಸೆಂಟ್ಸು ನ ತನಕದ ತನಕ ಜಾಗಗಳಿಗೆ 45 % ಕವರೇಜ್ ನಲ್ಲಿ 3,000 ಚದುರಅಡಿ ಮೀರದಂತೆ 7 ರಿಂದ 10 ಸೆಂಟ್ಸ್ ತನಕ 35% ಕವರೇಜ್ ನಲ್ಲಿ 3000 ಚದರಅಡಿ ಮೀರದಂತೆ ಮನೆ ಕಟ್ಟಲು ಅನುಮತಿ ನೀಡಿದ್ದು ಕ್ರಾಂತಿಕಾರಕ ಹೆಜ್ಜೆ ಮತ್ತು ರಾಜ್ಯದಲ್ಲಿ ಪ್ರಥಮ ಎಂದು ರಾಘವೇಂದ್ರ ಕಿಣಿ ವಿಶ್ಲೇಷಿಸಿದ್ದಾರೆ

Vishwa News 24

Recent Posts

ಕಟೀಲು ದೇವಿಗೆ ನೂತನ ಬ್ರಹ್ಮರಥ : 6 ಚಕ್ರಗಳ ಹೊಸ ರಥದ ನಿರ್ಮಾಣ – vishwanews24

ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…

7 hours ago

ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ – vishwanews24

ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…

7 hours ago

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ – vishwanews24

ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…

8 hours ago

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ – vishwanews24

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…

8 hours ago

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ – vishwanews24

ಸಚಿವರ ಮೇಲೆ ಖಾಸಗಿ ಸ್ಟಿಂಗ್​​ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್​​ ನೇತೃತ್ವದಲ್ಲಿ…

8 hours ago

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ – vishwanews24

ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…

8 hours ago