ಉಡುಪಿ : ರಘುಪತಿ ಭಟ್ ಪ್ರಯತ್ನದಿಂದ ಕೃಷಿ ವಲಯದಲ್ಲಿ ಮನೆ ಕಟ್ಟಲು ಅವಕಾಶ – ಕೆ ರಾಘವೇಂದ್ರ ಕಿಣಿ ಹರ್ಷ – Vishwanews24
ಉಡುಪಿ : ರಘುಪತಿ ಭಟ್ ಪ್ರಯತ್ನದಿಂದ ಕೃಷಿ ವಲಯದಲ್ಲಿ ಮನೆ ಕಟ್ಟಲು ಅವಕಾಶ ಕೆ ರಾಘವೇಂದ್ರ ಕಿಣಿ ಹರ್ಷ
ಉಡುಪಿ: ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕೃಷಿ ವಲಯ ಅಥವಾ ಅಗ್ರಿಕಲ್ಚರ್ ಝೋನಲ್ಲಿ ಸಣ್ಣ ಹಿಡುವಳಿದಾರರಿಗೆ(ಭೂ ಮಾಲಕರಿಗೆ) ಸ್ವಂತ ಸೂರನ್ನು ಕಟ್ಟಿಕೊಳ್ಳಲು ವಲಯ ನಿಯಮಾವಳಿಗಳಲ್ಲಿ ಅವಕಾಶ ಇರಲಿಲ್ಲ. ಇದೀಗ ಉಡುಪಿ ಶಾಸಕ ಕೆ ರಘುಪತಿ ಭಟ್ ಇವರ ಭಗೀರಥ ಪ್ರಯತ್ನದಿಂದ ಕೃಷಿ ವಲಯದಲ್ಲಿ10ಸೆಂಟ್ಸು ಜಾಗ ಮತ್ತು 3000 ಚದರಅಡಿ ತನಕ ಸ್ವಂತ ಮನೆ ಕಟ್ಟಲು ಅವಕಾಶ ಸಿಕ್ಕಿರುವುದಕ್ಕೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷರಾದ ಕೆ ರಾಘವೇಂದ್ರ ಕಿಣಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನು ವಿಶ್ಲೇಷಿಸಿದ ಇವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಇರುವುದಿಲ್ಲ. ಇಲ್ಲಿ ತುಂಡು ಭೂಮಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಇರುತ್ತದೆ. ಪೂರ್ವಜರು ತಮ್ಮ ಕುಟುಂಬದ ಉಪಯೋಗಕ್ಕಾಗಿ ತಾವು ಅವಲಂಬಿತ ಕೃಷಿಭೂಮಿಗಳನ್ನೇ ತುಂಡು ಭೂಮಿಗಳಾಗಿ ರಚಿಸಿರುತ್ತಾರೆ. ಅಂತಹ ಕೆಲವು ಭಾಗಗಳು ಮತ್ತು ಇನ್ನಿತರವನ್ನು ಸೇರಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕೃಷಿ ವಲಯಗಳನ್ನಾಗಿ ಗುರುತಿಸಿರುತ್ತಾರೆ. ಆಗ ಝೋನಲ್ಲಿ ಸಾರ್ವಜನಿಕರಿಗೆ ಮನೆ ಕಟ್ಟಲು ಅವಕಾಶ ಇರುವುದಿಲ್ಲ. ಸಾವಿರಾರು ಜನರು ತಮ್ಮ ಸ್ವಂತ ಜಾಗದಲ್ಲಿ ಮನೆ ಕಟ್ಟಲು ಅವಕಾಶವಿಲ್ಲದೆ ಪರದಾಡುತ್ತಿದ್ದರು. ಈ ಹಿಂದೆ ಉಡುಪಿ ಪ್ರಾಧಿಕಾರದ ಸಭೆಯಲ್ಲಿ ಇಂತಹ ಮನೆಗಳಿಗೆ ಅವಕಾಶ ನೀಡಲಾಗುತಿತ್ತು. ಆದರೆ ಇದಕ್ಕೆ ZRನಲ್ಲಿ ಅವಕಾಶವಿರುವುದಿಲ್ಲ
ಓಮನ್ ಬಿಲ್ಲವಾಸ್ 2023-24 : ಪದಾಧಿಕಾರಿಗಳಿಂದ ಪ್ರಮಾಣವಚನ – Vishwanews24
ಹೀಗೆ ಸುಮಾರು ವರ್ಷಗಳಿಂದ ಉಡುಪಿಯ ಸಾವಿರಾರು ಮಂದಿಗೆ ತಮ್ಮ ಸ್ವಂತ ಸೂರುಗಳನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಶ್ರೀಮಂತ ಹಿಡುವಳಿದಾರರು ಬೆಂಗಳೂರಿಗೆ ತೆರಳಿ ವಲಯ ಬದಲಾವಣೆ ಮಾಡಿಕೊಂಡು ಬರುತ್ತಿದ್ದರು. ಆದರೆ 10 ಸೆಂಟ್ಸ್ ಒಳಗಿನ ಸಾರ್ವಜನಿಕರಿಗೆ / ಬಡವರಿಗೆ ಇದು ಕಷ್ಟ ಸಾಧ್ಯವಿತ್ತು. ಇದೀಗ ಸರಕಾರ ವಲಯ ನಿಯಮಾವಳಿಗಳನ್ನೇ ತಿದ್ದುಪಡಿ ಮಾಡಿ ಆದೇಶ ಹೊರಡಿಸಿ 3000ಚದರ ಅಡಿ ತನಕ ಮನೆ ಕಟ್ಟಲು ಅವಕಾಶ ನೀಡಿದ್ದು ಮತ್ತು ನೆಲಮಹಡಿ ಮತ್ತು ಮೊದಲ ಮಹಡಿ ಮನೆ ಕಟ್ಟಲು ಅವಕಾಶ ನೀಡಿರುತ್ತಾರೆ. 5 ರಿಂದ 7 ಸೆಂಟ್ಸು ನ ತನಕದ ತನಕ ಜಾಗಗಳಿಗೆ 45 % ಕವರೇಜ್ ನಲ್ಲಿ 3,000 ಚದುರಅಡಿ ಮೀರದಂತೆ 7 ರಿಂದ 10 ಸೆಂಟ್ಸ್ ತನಕ 35% ಕವರೇಜ್ ನಲ್ಲಿ 3000 ಚದರಅಡಿ ಮೀರದಂತೆ ಮನೆ ಕಟ್ಟಲು ಅನುಮತಿ ನೀಡಿದ್ದು ಕ್ರಾಂತಿಕಾರಕ ಹೆಜ್ಜೆ ಮತ್ತು ರಾಜ್ಯದಲ್ಲಿ ಪ್ರಥಮ ಎಂದು ರಾಘವೇಂದ್ರ ಕಿಣಿ ವಿಶ್ಲೇಷಿಸಿದ್ದಾರೆ
