ಉಡುಪಿ: ಶ್ರೀಕೃಷ್ಣ ಲೀಲೋತ್ಸವದ ಪೂರ್ವ ತಯಾರಿ : ಇಂದು ಗುರ್ಜಿ ನೆಡುವ ಮುಹೂರ್ತ -Vishwanews24
ಉಡುಪಿ: ಶ್ರೀಕೃಷ್ಣ ಲೀಲೋತ್ಸವದ ಪೂರ್ವ ತಯಾರಿ : ಇಂದು ಗುರ್ಜಿ ನೆಡುವ ಮುಹೂರ್ತ -Vishwanews24
ಉಡುಪಿ: ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಶ್ರೀಕೃಷ್ಣ ಲೀಲೋತ್ಸವದ ಪೂರ್ವ ತಯಾರಿಯ ಮುಹೂರ್ತ ಕೃಷ್ಣಮಠದ ರಥಬೀದಿಯಲ್ಲಿ ಇಂದು ನಡೆಯಿತು.
ಅದಮಾರು ವಿಶ್ವಪ್ರಿಯ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಈಶಪ್ರಿಯ ತೀರ್ಥಶ್ರೀಪಾದರು ನಡೆಸುತ್ತಿರುವ ಶ್ರೀ ಕೃಷ್ಣಪೂಜಾ ಪರ್ಯಾಯದ ಶ್ರೀಕೃಷ್ಣಜನ್ಮಾಷ್ಟಮಿಯ ಶ್ರೀಕೃಷ್ಣ ಲೀಲೋತ್ಸವ ಸೆಪ್ಟೆಂಬರ್ 11ರಂದು ವೈಭವದಿಂದ ನಡೆಯಲಿದೆ.
ಈ ಪ್ರಯುಕ್ತ ರಥಬೀದಿ ಪರಿಸರದಲ್ಲಿ ಉತ್ಸವ ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ಗುರ್ಜಿ ನೆಡುವ ಮುಹೂರ್ತ ನೆರವೇರಿತು.
ಕೃಷ್ಣಮಠದ ದಿವಾನರಾದ ಶ್ರೀ ಲಕ್ಷ್ಮೀನಾರಾಯಣ ಮುಚ್ಚಿಂತ್ತಾಯ, ಪಾರುಪತ್ಯಗಾರರಾದ ಶ್ರೀ ಮುದರಂಗಡಿ ಲಕ್ಷ್ಮೀಶ ಭಟ್, ಕೊಠಾರಿಗಳಾದ ಶ್ರೀರಮಣ ಆಚಾರ್ಯ, ವ್ಯವಸ್ಥಾಪಕರಾದ ಗೋವಿಂದರಾಜ್, ಮೇಸ್ತ್ರಿಗಳಾದ ಪದ್ಮನಾಭ ಮೇಸ್ತ್ರಿ, ಪ್ರದೀಪ್ ಕುಮಾರ್ ಮತ್ತು ಮಠದ ಸಿಬ್ಬಂದಿ ಉಪಸ್ಥಿತರಿದ್ದರು.
