ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿ :  ಡ್ರ್ಯಾಗನ್ ವೇಷ ತೊಟ್ಟು ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ರವಿ ಕಟಪಾಡಿ -Vishwanews24

Featured, ಉಡುಪಿ

ಶ್ರೀ ಕೃಷ್ಣ ಜನ್ಮಾಷ್ಟಮಿ :  ಡ್ರ್ಯಾಗನ್ ವೇಷ ತೊಟ್ಟು ಉಡುಪಿಯೆಲ್ಲೆಡೆ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ರವಿ ಕಟಪಾಡಿ -Vishwanews24

ಉಡುಪಿ, : ಉಡುಪಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಚಿತ್ರ ವಿಚಿತ್ರ ವೇಷ ಹಾಕಿ ಜನರನ್ನು ಮನರಂಜಿಸುವ ರವಿ ಕಟಪಾಡಿಯವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವೇಷ ಹಾಕಿ ಜನರನ್ನು ಮನರಂಜಿಸುತ್ತಿದ್ದಾರೆ. ಈ ಬಾರಿ “ಡ್ರ್ಯಾಗನ್” (ರಾಕ್ಷಸ) ವೇಷ ಭೂಷಣ ತೊಟ್ಟು ಉಡುಪಿಯೆಲ್ಲೆಡೆ ತಿರುಗಿ ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ವೃತ್ತಿಯಲ್ಲಿ ಗಾರೆ ಕೆಲಸ ಮಾಡಿ ಕೊಂಡಿದ್ದರುವ ಅವರು, ಬಡವರ ಸಂಕಷ್ಟಕ್ಕೆ ತಾವು ನೆರವಾಗಬೇಕೆನ್ನುವ ದೃಷ್ಟಿಯಲ್ಲಿ ಅಷ್ಟಮಿಯಂದು ಆಕರ್ಷಣೀಯ ವೇಷ ಹಾಕಿ ಉಡುಪಿ ನಗರ ಅಲ್ಲದೆ, ಕಾಪು, ಕಟಪಾಡಿ, ಮಲ್ಪೆ ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಒಟ್ಟು ಮೊತ್ತವನ್ನು ಮೊದಲೇ ನಿರ್ಧರಿಸಿದ ಅನಾರೋಗ್ಯ ಪೀಡಿತ ಮಕ್ಕಳಿಗೆ ಚಿಕಿತ್ಸೆಗೆ ನೀಡುವ ಮೂಲಕ ತಮ್ಮಲ್ಲಾದ ನೆರವು ಮಾಡುತ್ತಾರೆ.

ಆದರೆ ಕೊರೊನಾದಿಂದ ಈಗ ಎಲ್ಲ ವಿಚಾರದಲ್ಲೂ ಸಮಸ್ಯೆಯಾಗಿದ್ದು, ಇವರ ಸಾಮಾಜಿಕ ಕಳಕಳಿಗೆ ಜಿಲ್ಲಾಡಳಿತದಿಂದ ಅನುಮತಿ ಸಿಗದ ಕಾರಣ ಅಲ್ಲಲ್ಲಿ ಹೋಗಿ ಕೊರೊನಾ ಬಗ್ಗೆ ಜಾಗ್ರತಿ ಮೂಡಿಸಲಿದ್ದಾರೆ.

ಕಲಾವಿದ ಅಜಯ್ ಪಿತ್ರೋಡಿಯ ನೇತೃತ್ವದಲ್ಲಿ ಧನರಾಜ್, ಧರೇಶ್, ಅಕ್ಷಯ್ ವೇಷ ಭೂಷಣ ತಯಾರು ಮಾಡಿದ್ದಾರೆ. ಈ ವೇಷಕ್ಕೆ ಸುಮಾರು ರೂ 40,000 ಯಷ್ಟು ವೆಚ್ಚ ತಗುಲಿದೆ.