ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ-ಹರಿಪ್ರಿಯಾ ದಂಪತಿ – Vishwanews24

Featured, ಉಡುಪಿ

 ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ನೆಲಭೋಜನ ಹರಕೆ ತೀರಿಸಿದ ವಸಿಷ್ಠ ಸಿಂಹ-ಹರಿಪ್ರಿಯಾ

ಉಡುಪಿ: ಸ್ಯಾಂಡಲ್‌ವುಡ್‌ನ ನಟ ವಸಿಷ್ಠ ಸಿಂಹ ಹಾಗೂ ಅವರ ಪತ್ನಿ ಹರಿಪ್ರಿಯಾ ಖುಷಿ-ಖುಷಿಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಒಟ್ಟಾಗಿ ಹಲವು ಕಡೆಗಳಿಗೆ ತೆರಳಿದ್ದಾರೆ.

ಇತ್ತೀಚೆಗಷ್ಟೇ ಈ ಜೋಡಿ ಮೊದಲ ಬಾರಿಗೆ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ ಮಾಡಿದ್ದರು. ಮಂತ್ರಾಲಯದ ಮಠಕ್ಕೆ ಆಗಮಿಸಿದ ಈ ದಂಪತಿ ಮೊದಲು ರಾಯರ ಮೂಲ ಬೃಂದಾವನದ ದರ್ಶನ ಪಡೆದರು.

article_image2

 

ಇದೀಗ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಗುರುವಾರ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾದರು.

ಇದೇ ಸಂದರ್ಭದಲ್ಲಿ ಅವರು ಮುಖ್ಯಪ್ರಾಣದೇವರ ಸನ್ನಿಧಿಯಲ್ಲಿ ನೆಲಭೋಜನ ಹರಕೆಯನ್ನು ತೀರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಭಕ್ತಿಗೀತೆ ಗಾಯಕ ಮಧೂರು ನಾರಾಯಣ ಸರಳಾಯ ಉಪಸ್ಥಿತರಿದ್ದರು.

ಮಂಗಳೂರು: ದಾಂಡಿಯಾ ನೃತ್ಯ ಹೆಸರಲ್ಲಿ ಮದ್ಯ, ಡ್ರಗ್ಸ್ ಪಾರ್ಟಿ : ವಿಹೆಚ್‍ಪಿ ಗಂಭೀರ ಆರೋಪ – Vishwanews24

Leave a Reply