ಉಡುಪಿ: ಆರ್ ಎಸ್ ಎಸ್ ಸಂಘಟನೆ ಒಂದು ದೇಶಭಕ್ತಿ ದೇಶಪ್ರೇಮ ದೇಶ ನಿಷ್ಠೆಯ ಸಂಘಟನೆಯಾಗಿದ್ದು, ಕಳೆದ ಐದು ತಿಂಗಳಲ್ಲಿ ಆರ್ ಎಸ್ಎಸ್ ಸಂಘಟನೆಯ ಕೆಲಸವನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ಯರಾಜ್ ಹೇಳಿದ್ದಾರೆ.
ಆರ್ ಎಸ್ ಎಸ್ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಭಾಗಿಯಾದ ಪ್ರಮೋದ್ ಮಧ್ವರಾಜ್ ಮಾತನಾಡಿದ ಅವರು ದೇಶದ ಕಟ್ಟಕಡೆಯ ಬಡವನ ಬಗ್ಗೆ ಸೇವಾ ರೂಪದಲ್ಲಿ ಆರ್ ಎಸ್ ಎಸ್ ಕೆಲಸ ಮಾಡುತ್ತಿದೆ, ಕಳೆದ ಐದು ತಿಂಗಳಲ್ಲಿ ನಾನು ಇದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಸಂಘದ ಹೊರಗೆ ಇದ್ದು ಟೀಕೆ ಮಾಡುವುದು ಸುಲಭ. ದೇಶ ಕಟ್ಟುವ ಕೆಲಸ ಸಂಸ್ಕಾರ ಉದ್ದೀಪಿಸುವ ಕೆಲಸ ವನ್ನು ಆರ್ ಎಸ್ ಎಸ್ ಮಾಡುತ್ತಿದೆ.
ಕಟ್ಟ ಕಡೆಯ ವ್ಯಕ್ತಿಯ ಶಿಕ್ಷಣ ಮತ್ತು ಆರೋಗ್ಯಕ್ಕೆ RSS ಸೇವೆ ಸಲ್ಲಿಸುತ್ತಿದ್ದು, ಸಂಘವನ್ನು ತಿಳಿದುಕೊಳ್ಳದೆ ವಿರೋಧ ಮಾತನಾಡಬಾರದು, ನಾನು ಕೂಡ ಹಿಂದೆ ಆರ್ ಎಸ್ ಎಸ್ ಬಗ್ಗೆ ವಿರೋಧ ಮಾತನಾಡುತ್ತಿದ್ದೆ ಆದರೆ ಆರ್ ಎಸ್ ಎಸ್ ಇಡೀ ದೇಶಕ್ಕೆ ಸಂಸ್ಕಾರ ಕೊಡುತ್ತಿದೆ. ಅಜ್ಞಾನದಿಂದ ಸಂಘದ ಬಗ್ಗೆ ಟೀಕೆ ಮಾಡುವ ಒಂದು ವರ್ಗ ಇದೆ, ಆರ್ ಎಸ್ ಎಸ್ ನ ಶಕ್ತಿಯನ್ನು ಸಹಿಸದೆ ಟೀಕೆ ಮಾಡುವವರಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಹೊಟ್ಟೆಕಿಚ್ಚಿನಿಂದ ಕೆಲವರು ಮಾತನಾಡುತ್ತಾರೆ, ಹೊಟ್ಟೆಕಿಚ್ಚಿನಿಂದ ಮಾತನಾಡುವವರಿಗೆ ಮದ್ದಿಲ್ಲ ಎಂದರು.
ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ ಜೆರುಸಲೇಂ: ಫ್ಲೈದುಬೈ ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ…
ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ…
ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ 70…
ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ ಮೂಡುಬಿದಿರೆ : ಅ.11 ರಂದು…
ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ…
ಮಂಜನಾಡಿ ಗುಡ್ಡ ಕುಸಿತ ದುರಂತಕ್ಕೆ ಒಂದೂವರೆ ವರ್ಷ: ಇನ್ನೂ ದಾಖಲಾಗದ ಎಫ್‌ಐಆರ್ ಮಂಗಳೂರು: ಉಳ್ಳಾಲ ತಾಲೂಕಿನ ಮಂಜನಾಡಿ ಗ್ರಾಮದ ಉರು…