Featured

ಪ್ರೀತಿಗಾಗಿ ವಿಷ ಕುಡಿದ ಪ್ರೇಯಸಿ ; ಮಗಳ ಸಾವಿಗೆ ಕಾರಣನಾದ ಪ್ರಿಯಕರನಿಗೆ ಅದೇ ವಿಷವನ್ನ ಕುಡಿಸಿ ಕೊಂದ ಯುವತಿ ಮನೆಯವರು – Vishwanews24

ಪ್ರೀತಿಗಾಗಿ ವಿಷ ಕುಡಿದ ಪ್ರೇಯಸಿ, ಮಗಳ ಸಾವಿಗೆ ಕಾರಣನಾದ ಪ್ರಿಯಕರನಿಗೆ ಅದೇ ವಿಷವನ್ನ ಕುಡಿಸಿ ಕೊಂದ ಯುವತಿ ಮನೆಯವರು

ವಿಜಯಪುರ: ಬಸ್‌ನಲ್ಲಿ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕಳ್ಳಕವಟಗಿ ಗ್ರಾಮದಲ್ಲಿ ನಡೆದಿದೆ. ಪ್ರೀತಿಗಾಗಿ ವಿಷ ಕುಡಿದ ಪ್ರೇಯಸಿ, ಅದೇ ವಿಷವನ್ನ ಪ್ರಿಯಕರನಿಗೆ ಕುಡಿಸಿ ಯುವತಿ ಮನೆಯವರು ಕೊಂದಿದ್ದಾರೆ. ಪ್ರೀತಿ, ಪ್ರೇಮ, ಸೂಸೈಡ್ ಆಂಡ್ ಮರ್ಡರ್ ಕಥೆ ಇದಾಗಿದೆ.

ಯುವ ಪ್ರೇಮಿಗಳಿಬ್ಬರೂ ಪ್ರೀತಿಗಾಗಿ ಬಲಿಯಾಗಿದ್ದಾರೆ. ಪ್ರಿಯತಮನಿಗೋಸ್ಕರ ಪ್ರಿಯತಮೆ‌ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮಗಳ ಸಾವಿಗೆ ಕಾರಣನಾದ ಎಂದು ಯುವತಿಯ ಪ್ರೇಮಿಯನ್ನು ಯುವತಿಯ ತಂದೆ ಕೊಂದಿದ್ದಾನೆ. ಇಬ್ಬರ ಶವಗಳನ್ನು ಪ್ರತ್ಯೇಕ ಚೀಲಗಳಲ್ಲಿ ಕಟ್ಟಿ ಕೃಷ್ಣಾ ನದಿಗೆ ಎಸೆದಿದ್ದಾರೆ ಯುವತಿ ಮನೆಯವರು.ಈ ಸಂಬಂಧ ಬಾಗಲಕೋಟೆ ಜಿಲ್ಲೆ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 22ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ.

ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತೆ ಹಾಗೂ ಘೊಣಸಗಿಯ ಮಲ್ಲು ಜಮಖಂಡಿ ಮಧ್ಯೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮಲ್ಲು ಜಮಖಂಡಿ ಹಾಗೂ ಅಪ್ರಾಪ್ತೆ ಇಬ್ಬರೂ ಒಂದೇ ಬಸ್‌ನಲ್ಲಿ ವಿಜಯಪುರದ ಕಾಲೇಜಿಗೆ ಬರುತ್ತಿದ್ದರು. ಅಕ್ಕಪಕ್ಕದ ಊರಿನವರಾದ ಇವರಿಗೆ ಬಸ್‌ನಲ್ಲಿ ಪರಿಚಯವಾಗಿ ಫೋನ್‌ನಲ್ಲಿ ಲವ್ ಆಗಿತ್ತು. ಆ ಬಳಿಕ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ಪ್ರೇಮಿಗಳು ವಿಹರಿಸಿದ್ದರು.

ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ದಾಖಲೆಗಳನ್ನು ಮುರಿದು ರೇಟಿಂಗ್ ನಲ್ಲಿ ‘ಕೆಜಿಎಫ್’ ಮೀರಿಸಿ ಕನ್ನಡ ಚಿತ್ರದ ಹೊಸ ದಾಖಲೆ ಬರೆದ ಕಾಂತಾರ – Vishwanews24

ಬಳಿಕ ಈ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿ ದೊಡ್ಡ ಗಲಾಟೆಯಾಗಿತ್ತು. ಅದಾದ ಬಳಿಕ ಎರಡೂ ಮನೆಯವರು ಇಬ್ಬರನ್ನೂ ಬೇರೆ ಬೇರೆ ಮಾಡಿದ್ದರು. ಆದ್ರೂ ಸಹ ಸೆ. 22ರಾತ್ರಿ ಕರೆ ಮಾಡಿದ್ದ ಹುಡುಗಿ ಮಲ್ಲುನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಹಾಕಿಕೊಂಡಿದ್ದರು. ಆಗ ಇಬ್ಬರಿಗೂ ಬುದ್ದಿ ಹೇಳಿದ್ದ ತಂದೆಯ ಮಾತು ಕೇಳದೆ ಆತುರದಲ್ಲಿ ವಿಷ ಕುಡಿದು ಅಪ್ರಾಪ್ತ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ನನ್ನ ಮಗಳ ಸಾವಿಗೆ ಕಾರಣವಾದ ಪ್ರೇಮಿ ಮಲ್ಲುನನ್ನು ಬಿಡಬಾರದು ಅಂತ ಕೈಕಾಲು ಕಟ್ಟಿ ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಲಾಗಿತ್ತು.

ನಂತರದಲ್ಲಿ ಯುವಕ ಹಾಗೂ ಯುವತಿಯ ಇಬ್ಬರ ಶವವನ್ನು ಪ್ರತ್ಯೇಕವಾಗಿ ಚೀಲದಲ್ಲಿ ಹಾಕಿ ಕೃಷ್ಣಾ ನದಿಗೆ ಎಸೆಯಲಾಗಿತ್ತು. ಇದೀಗ ಯುವಕ ಮಲ್ಲುವಿನ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ಶವ ಸಿಕ್ಕಿರುವುದರಿಂದ ಬೀಳಗಿ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜಿತ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಯುವತಿಯ ಶವಕ್ಕಾಗಿ ಪೊಲೀಸರ ಶೋಧಕಾರ್ಯ ಮುಂದುವರೆದಿದೆ. ‌

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸನ್ನ ಬಾಲಚಂದ್ರ ವರಳೆ ಪ್ರಮಾಣವಚನ ಸ್ವೀಕಾರ – Vishwanews24

Vishwa News 24

Recent Posts

ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ – vishwanews24

ಸರ್ಕಾರಿ ನೌಕರರ ಬಡ್ತಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ: ತಮಿಳುನಾಡು ಸರ್ಕಾರದಿಂದ ಮಹತ್ವದ ಆದೇಶ ಚೆನ್ನೈ,: ರಾಜ್ಯದ ಎಲ್ಲಾ ಸರ್ಕಾರಿ…

1 hour ago

ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ – vishwanews24

ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ ಘೋಷಣೆ ಜೆರುಸಲೇಂ: ಫ್ಲೈದುಬೈ ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ…

1 hour ago

ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ – vishwanews24

ಬೆಂಗಳೂರು: ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆ ; ಬಸವನಗರ ಮುಖ್ಯರಸ್ತೆ 20 ದಿನ ಬಂದ್ ಬೆಂಗಳೂರು: ಕೆರೆ ಕಾಲುವೆಗೆ ಸೇತುವೆ…

1 hour ago

ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ – vishwanews24

ರಾಜ್ಯಾದ್ಯಂತ 45 ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ: ಹಲವು ಕಡೆ ನಿಯಮ ಉಲ್ಲಂಘನೆ ಪತ್ತೆ 70…

1 hour ago

ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ – vishwanews24

ಮೈಸೂರು ದಸರಾಕ್ಕೆ ಕೇಮಾರು ಶ್ರೀ ಸಹಿತ ಜಿಲ್ಲೆಯ ಸ್ವಾಮೀಜಿಗಳಿಗೆ ಆಹ್ವಾನ ನೀಡಿದ ಮುಖ್ಯಮಂತ್ರಿ ಡಿಕೆಶಿ ಮೂಡುಬಿದಿರೆ : ಅ.11 ರಂದು…

2 hours ago

ಉಡುಪಿ: ಸರ್ಕಾರದ  ಗ್ಯಾರಂಟಿ ಯೋಜನೆಗಳ ಪ್ರಯೋಜನ ಬಿಜೆಪಿಯವರೂ ಪಡೆಯುತ್ತಿದ್ದಾರೆ : ಸುಧೀರ್ ಕುಮಾರ್ ಮರೋಳ್ಳಿ – vishwanews24

ಕಾರ್ಕಳದಲ್ಲಿ ಕಾಂಗ್ರೆಸ್‌ನಿಂದ ‘ಸತ್ಯ ಮೇವ ಜಯತೆ’ ಬೃಹತ್ ಪ್ರತಿಭಟನಾ ಸಭೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ಆರ್ಥಿಕ ಭದ್ರತೆ…

2 hours ago