Featured

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ – vishwanews24

ಉಡುಪಿ: ಸಂತೆಕಟ್ಟೆ ಅಂಡರ್‌ಪಾಸ್‌ನ ಮೇಲ್ಸೇತುವೆ ವಾಹನ ಸಂಚಾರಕ್ಕೆ ಮುಕ್ತ ; ಶೀಘ್ರವೇ ಅಧಿಕೃತ ಉದ್ಘಾಟನೆ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿ ಸಾರ್ವಜನಿಕರ ಆಕ್ರೋಶಕ್ಕೆ ಹಾಗೂ ಜನಪ್ರತಿನಿಧಿಗಳ ಟೀಕೆಗೆ ಕಾರಣವಾಗಿದ್ದ ಕಲ್ಯಾಣಪುರ ಸಂತೆಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66ರ ಅಂಡರ್‌ಪಾಸ್ ಹಾಗೂ ಮೇಲ್ಸೇತುವೆ ಕಾಮಗಾರಿ ಇದೀಗ ಮುಕ್ತಾಯದ ಹಂತಕ್ಕೆ ಬಂದಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಉಪಸ್ಥಿತಿಯಲ್ಲಿ ಮೇಲ್ಸೇತುವೆ ಯನ್ನು ಅಧಿಕೃತವಾಗಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಕಲ್ಯಾಣಪುರ ಸಂತೆಕಟ್ಟೆಯನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ಅಪಘಾತಗಳ ವಲಯವೆನಿಸಿಕೊಂಡು ವಾಹನಗಳ ಸುಗಮ ಸಂಚಾರವೇ ದುಸ್ತರವೆನಿಸಿಕೊಂಡಿತ್ತು. ಸಾರ್ವಜನಿಕರ ಪ್ರತಿಭಟನೆಗಳ ಬಳಿಕ ಶೋಭಾ ಕರಂದ್ಲಾಜೆ ಸಂಸತ್ ಸದಸ್ಯೆಯಾಗಿದ್ದ ಅವಧಿಯಲ್ಲಿ ಇಲ್ಲಿಗೆ ಅಂಡರ್‌ಪಾಸ್ ಹಾಗೂ ಮೇಲ್ಸೇತುವೆ ಕಾಮಗಾರಿ ಮಂಜೂರಾಗಿತ್ತು.

ಇದನ್ನೂ ಓದಿ : ಈಸ್ಟರ್ ಪ್ರಯುಕ್ತ ಯಶವಂತಪುರ-ಮಡಗಾಂವ್ ಮಧ್ಯೆ ವಿಶೇಷ ರೈಲು – vishwanews24 

2022ರಲ್ಲಿ ಕಾಮಗಾರಿಗೆ ಶಂಕುಸ್ಥಾಪನೆಯನ್ನೂ ನೆರವೇರಿಸಲಾಗಿತ್ತು. ಆದರೆ 30 ಕೋಟಿ ರೂ. ವೆಚ್ಚದ ಈ ಕಾಮಗಾರಿ ಪ್ರಾರಂಭದಿಂದಲೂ ಕುಂಟುತ್ತಾ, ತೆವಳುತ್ತಾ ನಡೆಯುತಿದ್ದು, ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸತ್ ಸದಸ್ಯರಾಗಿ ಆಯ್ಕೆಗೊಂಡ ಬಳಿಕ ಜನರ ಆಕ್ರೋಶದಿಂದ ಎಚ್ಚೆತ್ತುಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮೂಲಕ ಅಗತ್ಯ ಅನುದಾನ ಬಿಡುಗಡೆಯಾಗಿ ಕಾಮಗಾರಿ ಬಿರುಸುಗೊಳ್ಳುವಂತೆ ನೋಡಿಕೊಂಡಿದ್ದರು.

ನಾಲ್ಕು ವರ್ಷಗಳ ಬಳಿಕ ಇದೀಗ ಅಂಡರ್‌ಪಾಸ್ ಕಾಮಗಾರಿಯೊಂದಿಗೆ ಮೇಲ್ಸೇತುವೆ ಕಾಮಗಾರಿಯೂ ಪೂರ್ಣಗೊಂಡಿದ್ದು, ಮೇಲ್ಸೇತುವೆ ಸೋಮವಾರದಿಂದ ವಾಹನ ಸಂಚಾರಕ್ಕೆ ಮುಕ್ತವಾಗಿದೆ.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಪರಿಶೀಲನೆ ಬಳಿಕ ಮೇಲ್ಸೇತುವೆಯನ್ನು ವಾಹನಗಳ ಓಡಾಟಕ್ಕೆ ಮುಕ್ತಗೊಳಿಸಲು ಸೂಚನೆ ನೀಡಿದರು. ಅಂಡರ್‌ಪಾಸ್‌ನಲ್ಲಿ ಬಾಕಿ ಉಳಿದ ಕೆಲವು ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಎರಡೂ ಭಾಗಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದವರು ತಿಳಿಸಿದರು.

ಇದನ್ನೂ ಓದಿ : ಜನಗಣತಿ: ಆನ್ ಲೈನ್ ನಲ್ಲಿ ಮನೆ ಲಿಂಕ್ ಮಾಡಲು ತಹಸೀಲ್ದಾರ್ ಕರೆ – vishwanews24 

ಕಲ್ಯಾಣಪುರ ಸಂತೆಕಟ್ಟೆ ಮೇಲ್ಸೇತುವೆ, ಅಂಡರ್‌ಪಾಸ್ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಸತತ ಒತ್ತಡ ಹೇರಿ ಕೆಲಸಕ್ಕೆ ವೇಗ ನೀಡಲಾಗಿದೆ. ಜನತೆಯ ಹಾಗೂ ಪ್ರತಿಪಕ್ಷಗಳ ಟೀಕೆಯನ್ನು ಪ್ರಜಾಪ್ರಭುತ್ವದ ನೆಲೆಯಲ್ಲಿ ಸಕಾರಾತ್ಮಕವಾಗಿ ಸ್ವೀಕರಿಸಿದ್ದೇವೆ ಎಂದು ಕೋಟ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ರಸ್ತೆ ಮಧ್ಯದಲ್ಲಿ ಅಡ್ಡ ಬಂದ ಬಂಡೆ ಸಹಿತ ನಾನಾ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ. ಬಂಡೆಯನ್ನು ಸ್ಛೋಟ ಮಾಡದಂತೆ ಸ್ಥಳೀಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೀಗಾಗಿ ನಿಧಾನವಾಗಿ ಒಡೆದು ಬಂಡೆಯನ್ನು ತೆರವುಗೊಳಿಸಬೇಕಾಯಿತು. ಅಲ್ಲದೇ ಈ ಭಾಗದಲ್ಲಿ ನೀರಿನ ಒಸರು ಸಹ ಇದ್ದು, ಅದಕ್ಕೂ ಸೂಕ್ತ ತಾಂತ್ರಿಕತೆಯನ್ನು ಅಳವಡಿಸಿ ಕಾಮಗಾರಿ ನಡೆಸಬೇಕಾಯಿತು ಎಂದರು.

ಇನ್ನು ಎರಡೂ ಬದಿಯ ಸರ್ವಿಸ್ ರಸ್ತೆಯ ಸಣ್ಣ ಪುಟ್ಟ ಕಾಮಗಾರಿ ಬಾಕಿ ಉಳಿದಿದ್ದು, ಇವುಗಳನ್ನು ಸಂಪೂರ್ಣ ಗೊಳಿಸಿದ ಬಳಿಕವೇ ಅಂಡರ್‌ಪಾಸ್ ಹಾಗೂ ಮೇಲ್ಸೇತುವೆಯ ಅಧಿಕೃತ ಉದ್ಘಾಟನೆ ನಡೆಯಲಿದೆ ಎಂದವರು ತಿಳಿಸಿದರು.

ಇದನ್ನೂ ಓದಿ : ಉಡುಪಿ: ಏ.1ರಂದು ಪಿಂಕ್​ ಸೂಪರ್​ ಮೂನ್​ ವೀಕ್ಷಣೆಗೆ ಅವಕಾಶ – vishwanews24 

ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ವಾಹನ ದಟ್ಟಣೆ ನಿವಾರಣೆಗಾಗಿ ಮೇಲ್ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಸಂತೆಕಟ್ಟೆ – ಆಶೀರ್ವಾದ್ ಸರ್ವೀಸ್ ರಸ್ತೆ ಕಾಮಗಾರಿಗೆ 75ಲಕ್ಷ ರೂ. ಪ್ರಸ್ತಾವನೆ ಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದ್ದು, ಅದಕ್ಕೆ ಇನ್ನೂ ಅಂಗೀಕಾರ ದೊರೆತಿಲ್ಲ ಎಂದು ಸಂಸದ ಕೋಟ ನುಡಿದರು.

ಕಲ್ಯಾಣಪುರ ಗ್ರಾಮಪಂಚಾಯತ್‌ನ ಮಾಜಿ ಅಧ್ಯಕ್ಷ ನಾಗರಾಜ್, ಚಿನ್ಮಯ್, ಕೃಷ್ಣ ದೇವಾಡಿಗ, ಸತೀಶ್ ನಾಯಕ್, ಸುಧಾಕರ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

 

Vishwa News 24

Recent Posts

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ – vishwanews24

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…

2 hours ago

ಬೀದರ್ : ಮಳೆ ಆರ್ಭಟ ; ಸಿಡಿಲು ಬಡಿದು ಯುವಕ ಸಾವು – vishwanews24

ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…

2 hours ago

ಬೆಳ್ತಂಗಡಿ:  ಚಲಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಿಂದ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ – vishwanews24

ಬೆಳ್ತಂಗಡಿ:  ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…

3 hours ago

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ – vishwanews24

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಜಿಗಿಯಲು ಯತ್ನ; ಯುವಕನ ರಕ್ಷಣೆ ಉಡುಪಿ: ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ರೈಲಿನಿಂದ ಜಿಗಿಯಲು ಯತ್ನಿಸುತ್ತಿದ್ದ…

3 hours ago

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು – vishwanews24

ಕಾಸರಗೋಡು :  ಕೆಟ್ಟು ನಿಂತಿದ್ದ ಪಿಕಪ್ ವ್ಯಾನ್ ಗೆ ಬೈಕ್ ಢಿಕ್ಕಿ: ಸವಾರ ಮೃತ್ಯು ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ…

4 hours ago

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? – vishwanews24

ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ ; ಆನ್‌ಲೈನ್‌ನಲ್ಲಿ ವೀಕ್ಷಿಸುವುದು ಹೇಗೆ? ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು…

4 hours ago