ಉಡುಪಿ : ಸಂಸದನಾಗಿ ಕೂಡಾ ನಾನು ದಾಖಲೆಯ ಅಭಿವೃದ್ದಿಯನ್ನು ಮಾಡಬಲ್ಲೆ. : ಕೋಟ ಶ್ರೀನಿವಾಸ ಪೂಜಾರಿ – Vishwanews24
ಉಡುಪಿ:ಸಂಸದನಾಗಿ ಕೂಡಾ ದಾಖಲೆಯ ಅಭಿವೃದ್ದಿಯನ್ನು ನಾನು ಮಾಡಬಲ್ಲೆ. : ಕೋಟ ಶ್ರೀನಿವಾಸ ಪೂಜಾರಿ
ಉಡುಪಿ: ಭಾಷೆ ಬದುಕಿನ ಅವಿಭಾಜ್ಯ ಅಂಗ. ನನ್ನ ಹಿರಿಯರು ನನ್ನ ಭಾಷೆ ಬಗ್ಗೆ ಕಾಳಜಿಯ ಮಾತನ್ನು ಆಡಿದ್ದಾರೆ. ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಎಲ್ಲಾ ಜನತೆಗೆ ಸಂಸತ್ತಿನಲ್ಲಿ ಕೂಡಾ ಭಾಷಣ ಮಾಡಿ ಎಲ್ಲಾ ಮತದಾರರಿಗೆ ಮತ್ತು ಹಿರಿಯರಿಗೆ ಖುಷಿ ಪಡಿಸುತ್ತೇನೆ ಎಂದು ಉಡುಪಿ – ಚಿಕ್ಕಮಗಳುರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಭಾಷೆಯ ಕುರಿತಾಗಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ಸಂಸದನಾದ ಆರೇ ತಿಂಗಳಿನ ಒಳಗೆ ಸಂಸತ್ತಿನಲ್ಲಿ ಭಾಷಣ ಮಾಡಿ ಅವರಿಗೆ ಖುಷಿ ಪಡಿಸುತ್ತೇನೆ. ಬಿಜೆಪಿ ಅಭ್ಯರ್ಥಿಯಾಗಿ ನನಗೆ ಇರುವ ಹೆಮ್ಮೆ ಏನೆಂದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಇಡೀ ವಿಶ್ವವೇ ಗೌರವಿಸುತ್ತದೆ. ಆ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ಅವರು ಮಾಡಿರುವ ಉತ್ತಮವಾದ ಆಡಳಿತ, ಅಭಿವೃದ್ದಿ ಆಡಳಿತ, ಭಾರತವನ್ನು ವಿಶ್ವಗುರು ಮಾಡುವ ಆಡಳಿತದ ಕಾರಣದಿಂದ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ನಾನು ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರು ಪ್ರಧಾನಿ ಯಾಗಲು ನಾನು ಕೈ ಜೋಡಿಸಲು ಅವಕಾಶ ಮಾಡಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ 3 ದಿನಗಳ ಕಾಲ ಗುಡುಗು ಮಿಂಚು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ – Vishwanews24
“ಪ್ರಜಾಪ್ರಭುತ್ವದಲ್ಲಿ ಒಬ್ಬನೇ ಅಭ್ಯರ್ಥಿ ಗೆದ್ದರೆ ಸಂಸತ್ತು ನಡೆಸಲು ಆಗುವುದಿಲ್ಲ. ನಾಯಕತ್ವದ ಪ್ರಶ್ನೆ ಬಂದಾಗ ನರೇಂದ್ರ ಮೋದಿಯವರ ನಾಯಕತ್ವವನ್ನು ನಾವು ಪ್ರಚುರಮಾಡುತ್ತೇವೆ. ಅವರ ನಾಯಕತ್ವದ ಬಗ್ಗೆ ಅವರು ಮಾತನಾಡಲಿ. ನಾಲ್ಕು ಬಾರಿ ಎಂಎಲ್ ಸಿ, ಯಾಗಿ ಮಂತ್ರಿಯಾಗಿ ಹಲವಾರು ಕ್ರಾಂತಿಕಾರ ಬದಲಾವಣೆಗಳನ್ನು ತಂದಿದ್ದೇನೆ. ಪರಿಣಾಮಕಾರಿಯಾಗಿ ಕೆಲಸ ಮಾಡುವ ಅನುಭವ ನನಗೆ ಇದೆ, ಹೀಗಾಗಿ ಸಂಸದನಾಗಿ ಕೂಡಾ ದಾಖಲೆಯ ಅಭಿವೃದ್ದಿಯನ್ನು ನಾನು ಮಾಡಬಲ್ಲೆ. ನಾನು ವ್ಯಕ್ತಿ ಬಗ್ಗೆ ಮಾತನಾಡುವುದಿಲ್ಲ ಎಂದಿದ್ದಾರೆ.
ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಆರೋಪ : ಸೋನು ಶ್ರೀನಿವಾಸ್ ಗೌಡ ಬಂಧನ – Vishwanews24
