Featured

ಉಡುಪಿ : ಸರಕಾರಿ ಸೇವಾ ಸೌಲಭ್ಯತೆಗಳನ್ನು ಗೌರವಿಸಿ: ದಿನೇಶ್ ಹೆಗ್ಡೆ ಅತ್ರಾಡಿ -Vishwanews24

ಉಡುಪಿ : ಸರಕಾರಿ ಸೇವಾ ಸೌಲಭ್ಯತೆಗಳನ್ನು ಗೌರವಿಸಿ: ದಿನೇಶ್ ಹೆಗ್ಡೆ ಅತ್ರಾಡಿ -Vishwanews24

ಉಡುಪಿ:ದೇಶಕ್ಕೆ ಕೋವಿಡ್ 19 ಸೋಂಕಿನ ಹಾವಳಿಯ ನಂತರ ಈ ಎರಡೂ ಅಲೆಗಳ ಅವಧಿಯಲ್ಲಿ ಕೇಂದ್ರ ಹಾಗು ರಾಜ್ಯ ಸರಕಾರ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಯೋಜನೆಗಳನ್ನು ರೂಪಿಸಿ ಕಾರ್ಯಪ್ರವೃತ್ತವಾಗಿವೆ ಮತ್ತು ಈ ಸಂದರ್ಭದಲ್ಲಿ ಆದ್ಯತೆಯ ಮೇರೆಗೆ ಸಾಕಷ್ಟು ಸೌಲಭ್ಯತೆಗಳನ್ನು ಉಚಿತವಾಗಿ ಘೋಷಣೆ ಮಾಡಿ ಮಂಜೂರು ಮಾಡಿವೆ. ಅರೋಗ್ಯ ಇಲಾಖೆಯಲ್ಲೂ ಸಾಕಷ್ಟು ಸುಧಾರಣೆಗಳನ್ನು ತಂದಿದ್ದು ಇಂದು ಸರಕಾರಿ ಅರೋಗ್ಯ ಸೇವೆಯ ಗುಣಮಟ್ಟ ಖಾಸಗಿ ಸಂಸ್ಥೆಗಳಿಗೆ ಸ್ಪರ್ಧೆ ನೀಡುವಷ್ಟು ಸುಧಾರಣೆ ಕಂಡಿದೆ. ಆದರೆ ನಿಸ್ವಾರ್ಥದಿಂದ ಮತ್ತು ಅಪಾಯಕಾರಿ ವಾತಾವರಣದಲ್ಲಿ ಮಂಚೂಣಿಯಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ವೈದ್ಯರುಗಳು, ಅರೋಗ್ಯ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ಸಾರ್ವಜನಿಕ ಟೀಕಾ ಪ್ರಹಾರಗಳ ಸವಾಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕ ವಲಯ ಸರಕಾರಿ ಸೌಲಭ್ಯತೆಗಳ ಮತ್ತು ಸರಕಾರಿ ನೌಕರರ ಸೇವೆಯನ್ನು ಗುರುತಿಸಿ ಗೌರವಿಸ ಬೇಕು ಎಂದು ಪರ್ಕಳ ಗ್ರಾಹಕರ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ ಅಭಿಮತ ವ್ಯಕ್ತ ಪಡಿಸಿದರು.

ಅವರು ಶುಕ್ರವಾರ ಪರ್ಕಳದ ಹಿರೇಬೆಟ್ಟು ಪ್ರಾಥಮಿಕ ಅರೋಗ್ಯ ಕೇಂದ್ರದ ಉಪಕೇಂದ್ರದಲ್ಲಿ, ಕೋವಿಡ್ ನಿಯಂತ್ರಣಾ ಪಡೆಯ ಸಭೆಯ ಶುಕ್ರವಾರ ಕೇಂದ್ರಕ್ಕೆ ತಮ್ಮ ಸಂಘದಿಂದ ಔಷಧಿಗಳನ್ನು ವಿತರಿಸಿ ಮಾತನಾಡಿದರು.

ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಾದ ಗೋಪಾಲ್ ಆಚಾರ್, ಚೇತನನಾಯಕ್, ಸುಖಾನಂದ್, ರಮೇಶ್ ನಾಯಕ್ ಮಾಣಿಬೆಟ್ಟು, ನಗರಸಭಾ ಸದಸ್ಯರಾದ ವಿಜಯಲಕ್ಷ್ಮಿ, ಅಶ್ವಿನಿ ಅರುಣ್ ಪೂಜಾರಿ, ಮಂಜುನಾಥ್ ಮಣಿಪಾಲ, ವೈದ್ಯಾಧಿಕಾರಿ ನರಸಿಂಹ ನಾಯಕ್, ಅರೋಗ್ಯ ಸಹಾಯಕಿಯರಾದ ಹರಿಣಾಕ್ಷಿ, ದಾವಲಬಿ ರುಸ್ತುಮ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಹಾಜರಿದ್ದರು.

Vishwa News 24

Recent Posts

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ – vishwanews24

ಅಯೋಧ್ಯೆ ರಾಮಮಂದಿರ ಹುಂಡಿ ಹಗರಣ : ಎಲ್ಲಾ ಹಗರಣಗಳ ಸತ್ಯಾಂಶ ಹೊರಗೆ ಬರಬೇಕು : ವಿನಯಕುಮಾರ್ ಸೊರಕೆ ಆಗ್ರಹ ಉಡುಪಿ:…

1 day ago

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ – vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ ಉಡುಪಿ: ಸ್ವಯಂ ಚಾಲಿತ…

1 day ago

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ – vishwanews24

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ ಹೆಬ್ರಿ: ಪುವಾಸಿ ತಾಣವಾದ ಕೂಡು ಫಾಲ್ಸ್ ಪುವೇಶಕ್ಕೆ ಅರಣ್ಯ…

1 day ago

ಉಡುಪಿ : ವ್ಯಕ್ತಿ ನಾಪತ್ತೆ – vishwanews24

ಉಡುಪಿ : ವ್ಯಕ್ತಿ ನಾಪತ್ತೆ      ಉಡುಪಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಕುಶಾಲ್ ಶೆಟ್ಟಿ (55) ಎಂಬ…

1 day ago

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ – vishwanews24

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ ಕೊಲ್ಕತ್ತಾ: ಪಶ್ಚಿಮ…

1 day ago

ಉಡುಪಿ : ಜು. 10 ರಂದು ನೇರ ಸಂದರ್ಶನ – vishwanews24

ಉಡುಪಿ : ಜು. 10 ರಂದು ನೇರ ಸಂದರ್ಶನ      ಉಡುಪಿ : ಉಡುಪಿಯ ವಿ.ಪಿ ನಗರದ ಸುಧಾ ಫರ್ನೀರ‍್ಸ್ ಬಿಲ್ಡಿಂಗ್s…

1 day ago