Featured

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ – vishwanews24

ಉಡುಪಿ : ಸಿಎ, ವೈದ್ಯ, ಪತ್ರಿಕಾ ರಂಗದ ಸಾಧಕರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ

ಉಡುಪಿ : ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವತಿಯಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಗೌರವ ಪುರಸ್ಕಾರವನ್ನು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಉಡುಪಿ ಶಾಖೆ ಮಳಿಗೆಯಲ್ಲಿ ಬುಧವಾರ ಪ್ರದಾನ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಮಕ್ಕಳು, ಯುವಜನತೆ ಸಮಾಜಮುಖಿಯಾಗಿ ಪರಿಸರ ಕಾಳಜಿ ಹೊಂದುವುದು ಅಗತ್ಯ ಮತ್ತು ಅನಿವಾರ್ಯ. ಮಕ್ಕಳಿಗೆ ಉಪದೇಶದ ಬದಲು ಯಾವುದೇ ಉತ್ತಮ ಕೆಲಸವನ್ನು ಮಾಡಿ ತೋರಿಸಬೇಕು. ಮನೆಗಳಲ್ಲಿ ಗ್ರಂಥಾಲಯ ರೂಪುಗೊಂಡರೆ ಬೌದ್ಧಿಕ ಶ್ರೀಮಂತಿಕೆ ಹೆಚ್ಚಳ ಸಾಧ್ಯ ಎಂದು ಹೇಳಿದರು.

ಪಾಂಡೇಶ್ವರ ಗುರುಕುಲದ ಡಾ. ವಿಜಯ ಕುಮಾರ್ ಮಂಜರ್ ಅಧ್ಯಕ್ಷತೆ ವಹಿಸಿ, ಸಂಗೀತ, ಕಲೆ, ಸಾಹಿತ್ಯದಿಂದ ಜೀವನ ಪರಿಪೂರ್ಣ. ಇವು ಮೂರೂ ಇಲ್ಲದವ ಬಾಲ, ಕೊಂಬಿಲ್ಲದ, ಆದರೆ ಹುಲ್ಲೂ ತಿನ್ನದ ಪಶುವಿಗೆ ಸಮಾನ. ವ್ಯಕ್ತಿಯ ದೇಹ, ಮನಸ್ಸಿನ ಆರೋಗ್ಯ ಕಾಪಾಡುವ ವೈದ್ಯ, ವ್ಯಕ್ತಿ/ಸಂಸ್ಥೆಯ ಆರ್ಥಿಕ ಕಾಪಾಡುವ ಲೆಕ್ಕ ಪರಿಶೋಧಕ, ಸಮಾಜದ ಸ್ವಾಸ್ಥ್ಯ ಕಾಪಾಡುವ ಪತ್ರಕರ್ತ ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದ್ದಾರೆ ಎಂದರು.

ಸಂಸ್ಕೃತಿ ವಿಶ್ವ ಪ್ರತಿಷ್ಠ್ಠಾನದ ಸ್ಥಾಪಕ ಯು.ವಿಶ್ವನಾಥ್ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ. ಮಾತನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ವ್ಯವಸ್ಥಾಪಕ ವಿಜಯ್ ಕುಮಾರ್ ಡಿ. ಉಪಸ್ಥಿತರಿದ್ದರು.

ಪುರಸ್ಕಾರ ಪ್ರದಾನ
ಮಲಬಾರ್ ವಿಶ್ವ ವೈದ್ಯ ಪುರಸ್ಕಾರವನ್ನು ಡಾ. ಎ. ರಾಮಚಂದ್ರ ಬಾಯರಿ, ಡಾ. ಕೆ.ಸತೀಶ್ ಕಾಮತ್, ಡಾ. ಇಂದಿರಾ ವಿ.ಶಾನುಭೋಗ್, ಮಲಬಾರ್ ವಿಶ್ವ ಲೆಕ್ಕ ಪರಿಶೋಧಕರ ಪುರಸ್ಕಾರವನ್ನು ಸಿಎ ದೇವ ಆನಂದ್, ಸಿಎ ಗಣೇಶ್ ಎರ್ಮಾಳು ಹಾಗೂ ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರವನ್ನು ಶಶಿಧರ್ ಮಾಸ್ತಿಬೈಲು, ಬಾಲಕೃಷ್ಣ ಪೂಜಾರಿ ಉಚ್ಚಿಲ, ರಾಮ್ ಅಜೆಕಾರ್ ಸ್ವೀಕರಿಸಿದರು.

ಸನ್ಮಾನ ಪತ್ರವನ್ನು ಡಾ. ಭಾರ್ಗವಿ ಐತಾಳ್, ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ, ರಂಜನಿ ವಸಂತ್ ವಾಚಿಸಿದರು. ವಿದ್ಯಾ ಶ್ಯಾಮ ಸುಂದರ್ ಪ್ರಾರ್ಥಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ಸ್ವಾಗತಿಸಿದರು. ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕ ಮಾತನಾಡಿದರು. ರಾಜೇಶ್ ಪಣಿಯಾಡಿ ವಂದಿಸಿದರು.

Vishwa News 24

Recent Posts

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

8 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

11 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

11 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

11 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

12 hours ago

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ – vishwanews24

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]

12 hours ago