ಉಡುಪಿ: ಸಿದ್ದರಾಮಯ್ಯರ ವಿಭಿನ್ನ ಧೋರಣೆಗಳನ್ನು ಜನ ದೀರ್ಘಕಾಲ ನಂಬಲು ಸಾಧ್ಯವಿಲ್ಲ : ಸುನಿಲ್ ಕುಮಾರ್ – vishwanews24
ಉಡುಪಿ: ಸಿದ್ದರಾಮಯ್ಯರ ವಿಭಿನ್ನ ಧೋರಣೆಗಳನ್ನು ಜನ ದೀರ್ಘಕಾಲ ನಂಬಲು ಸಾಧ್ಯವಿಲ್ಲ : ಸುನಿಲ್ ಕುಮಾರ್
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಭಿನ್ನ ಧೋರಣೆಗಳನ್ನು ಜನ ದೀರ್ಘಕಾಲ ನಂಬಲು ಸಾಧ್ಯವಿಲ್ಲ. ಆಡಳಿತ ರಂಗದಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಮಾಧ್ಯಮದ ಜತೆಗೆ ಮಾತನಾಡಿದ ಅವರು, ಆರ್ಥಿಕ ವರ್ಷದ ಬಜೆಟ್ ಸಿದ್ಧಪಡಿಸಿದ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್ ಎಂದು ಹೇಳುತ್ತಾರೆ. ಸಚಿವ ಸುಧಾಕರ್ ಅವರು ಎರಡು ವರ್ಷದ ಅನಂತರ ಸರಕಾರ ಈಗ ಟೇಕಾಫ್ ಆಗಿದೆ ಎನ್ನುತ್ತಿದ್ದಾರೆ. ಇವೆಲ್ಲ ಕಂಡು ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಅಧಿವೇಶನದಲ್ಲಿ ರಾಜೀನಾಮೆ ನೀಡಿ ಬರಬೇಕಿತ್ತು ಎಂದರು.
ಉಳ್ಳಾಲ: ಶೇಂದಿ ತೆಗೆಯುತ್ತಿದ್ದ ವೇಳೆ ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು – vishwanews24
ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಾಯಕನನ್ನು ದಲಿತ ಎಂಬ ಕಾರಣಕ್ಕೆ ಪ್ರತ್ಯೇಕವಾಗಿ ಒಂದು ಬದಿಯಲ್ಲಿ ಕುರ್ಚಿ ಕೊಟ್ಟು ಕುಳ್ಳಿರಿಸಿದೆ. ಮಧ್ಯದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಇದ್ದಾರೆ. ದಲಿತ ನಾಯಕನನ್ನು ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಎಂಬುದನ್ನು ಇದರಿಂದ ಕಾಣಬಹುದು. ದಲಿತರ ತುಷ್ಟಿಕರಣ ಮಾಡಿದೆಯೇ ಹೊರತು ದಲಿತರ ಉದ್ಧಾರ ಮಾಡಿಲ್ಲ. ಖರ್ಗೆ ಅವರು ಸ್ವಾಭಿಮಾನ ಇದ್ದಿದ್ದರೆ ಆಧಿವೇಶನದಿಂದ ಎದ್ದು ಬರಬೇಕಿತ್ತು ಎಂದು ಹೇಳಿದರು.
