ಉಡುಪಿ : ಹಲಾಲ್ ಬೋರ್ಡ್ ತೂಗು ಹಾಕಿ ವ್ಯಾಪಾರ ನಡೆಸುವ ಹಿಂದೂ ಹೊಟೇಲ್ ಗಳನ್ನು ಬಹಿಷ್ಕರಿಸಬೇಕು ಎಂಬುದಾಗಿ ಉಡುಪಿ ಜಿಲ್ಲಾ ಬಿಜೆಪಿ ಮುಖಂಡರು ಕರೆ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಪೋಸ್ಟರ್ ಗಳು ವೈರಲ್ ಆಗುತ್ತಿದೆ.
ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಅವರು ಈ ಕುರಿತ ಪೋಸ್ಟರ್ ನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು, ಹಲಾಲ್ ಬೋರ್ಡ್ ನೇತು ಹಾಕಿರುವ ಹಿಂದೂ ಹೊಟೇಲುಗಳಲ್ಲಿ ನಮಗೆ ವ್ಯಾಪಾರ ಬೇಡ, ಅಂತಹ ಹೊಟೇಲ್ ಗಳನ್ನು ಬಹಿಷ್ಕರಿಸೋಣ ಎಂಬುದಾಗಿ ಪೋಸ್ಟರ್ ನಲ್ಲಿ ಬರೆಯಲಾಗಿದೆ.
ಇನ್ನೋರ್ವ ಬಿಜೆಪಿ ಮುಖಂಡ ಉದಯ್ ಕುಮಾರ್ ಶೆಟ್ಟಿ, ಹಲಾಲ್ ಮುದ್ರೆಯಿರುವ ಮಾಂಸಗಳನ್ನು ಹಿಂದೂಗಳು ತಿನ್ನಬಾರದು ಎಂದಿದ್ದಾರೆ. ಹಲಾಲ್ ಎಂಬುವುದೊಂದು ಇತರ ಸಮುದಾಯದವರಿಂದ ಉದ್ಯೋಗ ಕಿತ್ತುಕೊಳ್ಳುವ ಪಿತೂರಿಯಾಗಿದೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಮುಸ್ಲಿಮರ ಹೋಟೆಲ್ಗಳಲ್ಲಿ ಹಲಾಲ್ ಇರುವುದು ಅವರ ಸಂಪ್ರದಾಯ, ಆದರೆ ಕೆಲವು ಹಿಂದುಗಳ ಹೋಟೆಲ್ಗಳಲ್ಲಿಯು ಹಲಾಲ್ ಬೋರ್ಡ್ ಹಾಕಿ ವ್ಯಾಪಾರ ಮಾಡುತ್ತಾರೆ. ಅಂತಹ ಬೋರ್ಡ್ ಗಳಿರುವ ಹೋಟೆಲ್ಗಳನ್ನು ಹಿಂದು ಬಾಂಧವರು ಬಹಿಷ್ಕರಿಸಿ.ಹಲಾಲ್ ಬೋರ್ಡ್ ಇರುವ ಹಿಂದೂ ಹೊಟೇಲ್ ಗಳಲ್ಲಿ ಆಹಾರ ಸೇವನೆ ನಿಷೇಧಿಸಬೇಕು ಎಂದವರು ಉಲ್ಲೇಖಿಸಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…