ಉಡುಪಿ : ಹಲಾಲ್ ಬೋರ್ಡ್ ಹಾಕಿ ವ್ಯಾಪಾರ ನಡೆಸುವ ಹಿಂದೂ ಹೊಟೇಲ್ ಗಳನ್ನು ಬಹಿಷ್ಕರಿಸಿ : ಬಿಜೆಪಿ ಮುಖಂಡರು – Vishwanews24

Featured, ಉಡುಪಿ

ಉಡುಪಿ : ಹಲಾಲ್ ಬೋರ್ಡ್ ಹಾಕಿ ವ್ಯಾಪಾರ ನಡೆಸುವ ಹಿಂದೂ ಹೊಟೇಲ್ ಗಳನ್ನು ಬಹಿಷ್ಕರಿಸಿ : ಬಿಜೆಪಿ ಮುಖಂಡರು – Vishwanews24

ಉಡುಪಿ : ಹಲಾಲ್ ಬೋರ್ಡ್ ತೂಗು ಹಾಕಿ ವ್ಯಾಪಾರ ನಡೆಸುವ ಹಿಂದೂ ಹೊಟೇಲ್ ಗಳನ್ನು ಬಹಿಷ್ಕರಿಸಬೇಕು ಎಂಬುದಾಗಿ ಉಡುಪಿ ಜಿಲ್ಲಾ ಬಿಜೆಪಿ ಮುಖಂಡರು ಕರೆ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕೆ ಸಂಬಂಧಿಸಿದ ಪೋಸ್ಟರ್ ಗಳು ವೈರಲ್ ಆಗುತ್ತಿದೆ.

ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್ ಅವರು ಈ ಕುರಿತ ಪೋಸ್ಟರ್ ನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದು, ಹಲಾಲ್ ಬೋರ್ಡ್ ನೇತು ಹಾಕಿರುವ ಹಿಂದೂ ಹೊಟೇಲುಗಳಲ್ಲಿ ನಮಗೆ ವ್ಯಾಪಾರ ಬೇಡ, ಅಂತಹ ಹೊಟೇಲ್ ಗಳನ್ನು ಬಹಿಷ್ಕರಿಸೋಣ ಎಂಬುದಾಗಿ ಪೋಸ್ಟರ್‍ ನಲ್ಲಿ ಬರೆಯಲಾಗಿದೆ.

May be an image of 1 person, standing and text that says "ಮುಸ್ಲಿಮರ ಹೋಟೆಲ್‌ಗಳಲ್ಲಿ ಹಲಾಲ್ ಇರುತ್ತದೆ, ಅದು ಅವರ ಸಂಪ್ರದಾಯ ಎನ್ನೋಣ. ಆದರೆ ಕೆಲವು ಹಿಂದೂಗಳ ಹೋಟೆಲ್‌ಗಳಲ್ಲಿ ಹಲಾಲ್ ಏಕೆ? ಹಲಾಲ್ ಮಾಂಸವನ್ನೇಕೆ ಹಿಂದೂಗಳಿಗೆ ಬಲವಂತವಾಗಿ ತಿನ್ನಿಸುತ್ತೀರಿ? ಹಲಾಲ್ ಬೋರ್ಡ್ ತೂಗು ಹಾಕಿ ವ್ಯಾಪಾರ ಮಾಡುವ ಹಿಂದೂಗಳನ್ನು ಬಹಿಷ್ಕರಿಸೋಣ 1600% ×a××× 이e ALAL ಮುಸಲ್ಮಾನನಿಗೂ ಹಿಂದೂವಿಗೂ ವ್ಯತ್ಯಾಸವಿಲ್ಲವೆಂದಾದರೇ ಅಂತಹ ಹಿಂದೂಗಳ ವ್ಯಾಪಾರವೂ ನಮಗೆ ಬೇಡ ಇಂತಹ ಹಿಂದೂ ಹೋಟೆಲ್‌ಗಳನ್ನು ಬಹಿಷ್ಕರಿಸೋಣ ನಾನು ಇದರ ಬಗ್ಗೆ ಹಿಂದೆಯೂ ಹೇಳಿದ್ದೆ, ದಯವಿಟ್ಟು ಹಲಾಲ್ ಬಹಿಷ್ಕರಿಸಿ ಕುಂಿಲಾಡಿ ಸುರೇಶ್ ನಾಯಕ್ ಅಧ್ಯಕ್ಷರು, ಬಿಜೆಪಿ, ಉಡುಪಿ sureshnayak.kuilady SureshKuilady"

ಇನ್ನೋರ್ವ ಬಿಜೆಪಿ ಮುಖಂಡ ಉದಯ್ ಕುಮಾರ್‍ ಶೆಟ್ಟಿ, ಹಲಾಲ್ ಮುದ್ರೆಯಿರುವ ಮಾಂಸಗಳನ್ನು ಹಿಂದೂಗಳು ತಿನ್ನಬಾರದು ಎಂದಿದ್ದಾರೆ. ಹಲಾಲ್ ಎಂಬುವುದೊಂದು ಇತರ ಸಮುದಾಯದವರಿಂದ ಉದ್ಯೋಗ ಕಿತ್ತುಕೊಳ್ಳುವ ಪಿತೂರಿಯಾಗಿದೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ. ಮುಸ್ಲಿಮರ ಹೋಟೆಲ್ಗಳಲ್ಲಿ ಹಲಾಲ್ ಇರುವುದು ಅವರ ಸಂಪ್ರದಾಯ, ಆದರೆ ಕೆಲವು ಹಿಂದುಗಳ ಹೋಟೆಲ್ಗಳಲ್ಲಿಯು ಹಲಾಲ್ ಬೋರ್ಡ್ ಹಾಕಿ ವ್ಯಾಪಾರ ಮಾಡುತ್ತಾರೆ. ಅಂತಹ ಬೋರ್ಡ್ ಗಳಿರುವ ಹೋಟೆಲ್ಗಳನ್ನು ಹಿಂದು ಬಾಂಧವರು ಬಹಿಷ್ಕರಿಸಿ.ಹಲಾಲ್ ಬೋರ್ಡ್ ಇರುವ ಹಿಂದೂ ಹೊಟೇಲ್ ಗಳಲ್ಲಿ ಆಹಾರ ಸೇವನೆ ನಿಷೇಧಿಸಬೇಕು ಎಂದವರು ಉಲ್ಲೇಖಿಸಿದ್ದಾರೆ.

Leave a Reply