ಉಡುಪಿ: ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ : ಯಶ್ಪಾಲ್ ಸುವರ್ಣ – Vishwanews24
ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗುಳಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು
ಉಡುಪಿ : ದೇಶದ್ರೋಹಿ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಭಯೋತ್ಪಾಧನಾ ವಿರೋಧಿ ವೇದಿಕೆ ವತಿಯಿಂದ ನಗರದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರ ಸಹಿತ ಪ್ರತಿಭಟನಾಕಾರರು ಕಾಂಗ್ರೆಸ್ ನಾಯಕ ಎಂ.ಜಿ. ಹೆಗಡೆ ಭಾವಚಿತ್ರಕ್ಕೆ ಉಗುಳಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ವಿಫಲವಾಗಿದೆ. ಹಾಗಾಗಿ ಈ ವೈಫಲ್ಯವನ್ನು ಮುಚ್ಚಿ ಹಾಕಲು ಇಂತಹ ಘಟನೆಗಳಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ ಎಂದು ಟೀಕಿಸಿದರು. ಹಾಗೂ ಹಿಂದುಗಳ ಭಾವನೆಗೆ ನಿರಂತರವಾಗಿ ಧಕ್ಕೆ ತರಲಾಗುತ್ತಿದೆ. ವಿಧಾನ ಸೌಧ ಶಕ್ತಿ ಕೇಂದ್ರದ ಒಳಗೆ ಪೊಲೀಸ್ ಭದ್ರತೆ ನಡುವೆ ಅಷ್ಟು ಜನ ಹೇಗೆ ಬಂದರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಆ್ಯಸಿಡ್ ಮಾರಾಟ ನಿಷೇಧಿಸಲಾಗುವುದು: ಡಾ.ಜಿ.ಪರಮೇಶ್ವರ್ – Vishwanews24
ಪಾಕ್ ಪರ ಘೋಷಣೆ ಮಾಡಿಲ್ಲ ಎಂದು ಎಲ್ಲರೂ ಹೇಳಿಕೆ ಕೊಟ್ಟಿದ್ದರು. ಈ ವಿಚಾರದಲ್ಲಿ ಮಾಧ್ಯಮಗಳಿಗೆ ಕಾಂಗ್ರೆಸ್ ನಾಯಕರು ಸವಾಲುಗಳನ್ನು ಕೂಡ ಹಾಕಿದ್ದರು. ಈಗ ಎಫ್.ಎಸ್.ಎಲ್ ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಸಾಭೀತಾಗಿದೆ. ಇಂದು ಪ್ರತಿಭಟನೆ ಮಾಡಿ ವಿರೋಧಿಸಿದವರ ಭಾವಚಿತ್ರಕ್ಕೆ ಉಗಿದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಸಮಿತಿಯ ಪ್ರಮುಖ, ಕಾನೂನು ವಿದ್ಯಾರ್ಥಿ ರವಿಚಂದ್ರ, ಬ್ರಹ್ಮಾವರ, ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ಕಾಪು ಸಹಿತ ನಾನ ಭಾಗದಿಂದ ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪಣಂಬೂರು: ಸಮುದ್ರ ಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆ – Vishwanews24
